ಬೆಂಗಳೂರು [ಆ.08]: ಶಿವಮೊಗ್ಗ ಜಿಲ್ಲಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಶರಾವತಿ ನದಿ ತುಂಬಿ ಹರಿಯುತ್ತಿದ್ದಾಳೆ. 

ಇದರ ಪರಿಣಾಮ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟಒಂದೇ ದಿನ ಐದೂವರೆ ಅಡಿಯಷ್ಟುಏರಿಕೆ ಕಂಡಿದೆ. 

ಜಲಾಶಯಕ್ಕೆ 138038 ಕ್ಯುಸೆಕ್‌ ಒಳಹರಿವು ಬರುತ್ತಿದೆ. ಜಲಾಶಯ ಒಟ್ಟು 1819 ಅಡಿ ಎತ್ತರ ಇದೆ. ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೆ 1789.80 ಅಡಿ ನೀರು ತುಂಬಿತ್ತು. 

ಆದರೆ, ಬುಧವಾರ ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಜಲಾಶಯದಲ್ಲಿನ ನೀರಿನ ಮಟ್ಟ1795.35 ಅಡಿಗೆ ಏರಿಕೆಯಾಗಿದೆ. ಅಂದರೆ, 24 ಗಂಟೆಯ ಸಮಯದಲ್ಲಿ ಐದೂವರೆ ಅಡಿ ನೀರು ಏರಿಕೆಯಾದಂತಾಗಿದೆ.