Asianet Suvarna News Asianet Suvarna News

ಅಡಿಕೆ ಬೆಳೆಗಾರರು ತಮ್ಮ ಪರಿಸರಕ್ಕೆ ಹೊಂದುವ ರೀತಿಯಲ್ಲಿ ಕೃಷಿ ಮಾಡಬೇಕು

 ರೈತರು ತಮ್ಮ ಇದ್ದ ಭೂಮಿಯಲ್ಲಿ ಬೋರ್ವೆಲ್ ಹಾಕಿ ಅಡಕೆ ತೋಟ ಬೆಳೆಸುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣ ಅಲ್ಲ, ರೈತರು ತಮ್ಮ ಭೂಮಿಗೆ, ಪರಿಸರಕ್ಕೆ ಹೊಂದಿಕೊಳ್ಳುವ ಬೆಳೆಯನ್ನೇ ಬೆಳೆಯಬೇಕು, ಔಷಧೀಯ ಸಸ್ಯ ಮತ್ತಿತರ ಪರ್ಯಾಯ ಬೆಳೆಗಳತ್ತ ಗಮನ ಹರಿಸಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ರೈತರಿಗೆ ಸಲಹೆ ನೀಡಿದರು. 

arecanut farmers should cultivate in a way that suits their environment says kishorkumar at udupi rav
Author
First Published Mar 4, 2023, 1:28 PM IST

ಉಡುಪಿ (ಮಾ.4) : ದೇಶದಲ್ಲಿ ಅಡಕೆ ಕೊರತೆ ಇದ್ದು ಹೊರಗಿನಿಂದ, ಬೇರೆ ದೇಶಗಳಿಂದ  ಆಮದು ಮಾಡಲಾಗುತ್ತಿದೆ ಎಂದು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್(Campco Chairman Kishore Kumar) ಹೇಳಿದರು.

ಅವರು ಶುಕ್ರವಾರ ಹಿರಿಯಡ್ಕ ವೀರಭದ್ರ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಿರಿಯಡ್ಕ  ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವ - 2023ನ್ನು ಉದ್ಘಾಟಿಸಿ ಮಾತನಾಡಿದರು.

 ಸ್ಥಳೀಯ ಬೆಳೆಗಾರರಿಗೆ ಉತ್ತಮ ಬೆಲೆ ಸಿಗಬೇಕು ಎಂದು ಸರ್ಕಾರ ಅಡಕೆ ಆಮದಿನ ಸುಂಕ ಹೆಚ್ಚಿಸಿದೆ. ಆದ್ದರಿಂದ ಅಡಕೆ ಬೆಲೆ ಏರುತ್ತಿದೆ, ಇದರಿಂದ ರೈತರು ತಮ್ಮ ಇದ್ದ ಭೂಮಿಯಲ್ಲಿ ಬೋರ್ವೆಲ್ ಹಾಕಿ ಅಡಕೆ ತೋಟ ಬೆಳೆಸುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣ ಅಲ್ಲ, ರೈತರು ತಮ್ಮ ಭೂಮಿಗೆ, ಪರಿಸರಕ್ಕೆ ಹೊಂದಿಕೊಳ್ಳುವ ಬೆಳೆಯನ್ನೇ ಬೆಳೆಯಬೇಕು, ಔಷಧೀಯ ಸಸ್ಯ ಮತ್ತಿತರ ಪರ್ಯಾಯ ಬೆಳೆಗಳತ್ತ ಗಮನ ಹರಿಸಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ರೈತರಿಗೆ ಸಲಹೆ ನೀಡಿದರು. 

ಶೃಂಗೇರಿ: ಎಲೆಚುಕ್ಕಿ ರೋಗ ನಿವಾರಣೆಗೆ ಕೋಟಿ ಕುಂಕುಮಾರ್ಚನೆ

ಇಂಜಿನಿಯರಿಂಗ್ ಮಾಡಿದ ಯುವಕರಿಗೂ ಕೆಲಸ ಸಿಗುತ್ತಿಲ್ಲ, ಆದರೇ ಕೃಷಿಗಿಂತ ಉತ್ತಮ ಸ್ವಾವಲಂಭಿ ಉದ್ಯೋಗ ಬೇರೆ ಇಲ್ಲ, ಆದ್ದರಿಂದ ಯುವಜನತೆ ಕೃಷಿಯತ್ತ ಬರುತ್ತಿದ್ದಾರೆ, ಇದು ಅನಿವಾರ್ಯವಾಗಿದೆ ಎಂದರು.
  
ದಿಕ್ಸೂಚಿ ಭಾಷಣ ಮಾಡಿದ ಶಿವಮೊಗ್ಗ ಕಳೆದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿವಿ(Keladi shivappa nayak agriculture university)ಯವಿಸ್ತರಣಾ ನಿರ್ದೇಶಕ ಡಾ.ಬಿ.ಹೇಮ್ಲಾ ನಾಯಕ, ರೈತರು((Farmer) ಕೇವಲ ಅಡಕೆ, ಭತ್ತವನ್ನು ಅವಲಂಭಿಸದೇ ಮಿಶ್ರ ಬೆಳೆ ಅಥವಾ ಹೈನುಗಾರಿಕೆ, ಕೋಳಿ ಸಾಕಣೆ, ಹಂದಿ ಸಾಕಣೆಯಂತಹ ಪರ್ಯಾಯ ಕೃಷಿ ಆಧಾರಿತ ಉದ್ಯೋಗಗಳತ್ತ ಗಮನ ಹರಿಸಿದರೇ ಉತ್ತಮ ಲಾಭ ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್ ವಹಿಸಿದ್ದರು. ಮೇಳದ ಮುಖ್ಯ ಪ್ರಾಯೋಜಕರಾದ ಹೆರ್ಗ ವ್ಯವಸಾಯ ಸೇವಾ ಸಹಕರಾಿ ಸಂಘದ ಅದ್ಯಕ್ಷ ಹೆರ್ಗ ದಿನಕರ ಶೆಟ್ಟಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
  
ಅತಿಥಿಗಳಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಹೆರ್ಗ ಸೊಸೈಟಿಯ ಸಿಇಓ ರಮೇಶ್ ನಾಯಕ್, ಹಿರಿಯಡ್ಕ ರೈತ ಸಹಕಾರಿ ಸಂಘದ ಅದ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಆಗಮಿಸಿದ್ದರು.

ಅಡಕೆ ಮರ ಬಳಿಕ ಈಗ ತೆಂಗಿನ ಮರ ಏರುವ ಟ್ರೀ ಬೈಕ್‌ ಅಭಿವೃದ್ಧಿ
   
ಶಿವಮೊಗ್ಗ ಕೃಷಿ ತೋಟಗಾರಿಕಾ ವಿವಿ ಸಂಶೋಧನಾ ನಿರ್ದೇಶಕ ಡಾ.ಮೃತ್ಯಂಜಯ ಸಿ.ವಾಲಿ, ಸಹಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕಿ ಭುವನೇಶ್ವರಿ ವೇದಿಕೆಯಲ್ಲಿದ್ದರು.
  
ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಸ್ವಾಗತಿಸಿದರು, ಕೃಷಿ ಮೇಳದ ಸಂಘಟನಾ ಸಮಿತಿ ಅಧ್ಯಕ್ಷ ಪಳ್ಳಿ ನಟರಾಜ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ನಳಿನಿ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು.

Follow Us:
Download App:
  • android
  • ios