ಅರಸೀಕೆರೆ(ಜು.25): ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪತ್ನಿ ಪುಷ್ಪಾಗೆ ಜು.14ರಂದು ಮಹಾಮಾರಿ ಸೋಂಕು ಪತ್ತೆಯಾಗಿ, ಹಾಸನದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಎರಡು ಬಾರಿ ಪರೀಕ್ಷೆ ಮಾಡಿದಾಗ ಈಗ ನೆಗೆಟಿವ್‌ ವರದಿ ಬಂದಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ.

ಸುದ್ದಿಗಾರೊಂದಿಗೆ ದೂರವಾಣಿ ಮೂಲಕ ಅವರು ಮಾತನಾಡಿ, ತಾವು ಸೇರಿದಂತೆ ತಮ್ಮ ಪುಷ್ಪಾ ಹಾಗೂ ಸಿಬ್ಬಂದಿ ಸೋಂಕು ಪರೀಕ್ಷೆ ಮಾಡಿಸಿಕೊಂಡ ಸಂದರ್ಭದಲ್ಲಿ ತಮಗೆ ಹಾಗೂ ಸಿಬ್ಬಂದಿಗೆ ನೆಗೆಟಿವ್‌ ವರದಿ ಬಂದಿದ್ದು, ಪತ್ನಿಗೆ ಪಾಸಿಟಿವ್‌ ವರದಿ ಬಂದಿತ್ತು. 

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೆಂಡ್ತಿ, ಪುತ್ರಿಗೆ ಕೊರೋನಾ ಪಾಸಿಟಿವ್ ದೃಢ

ಹೀಗಾಗಿ ತಾವು ಕೂಡ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಒಂದು ವಾರ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.