ಯಾವುದೇ ಸರ್ಕಾರ ನನ್ನ ಕೈ, ಬರವಣಿಗೆ ಕಟ್ಟಿಹಾಕಲು ಅಸಾಧ್ಯ ಎಂದ 'ಹಳ್ಳಿಹಕ್ಕಿ'

ಸರ್ಕಾರ ನನ್ನ ಕೈಗಳನ್ನು, ಬರವಣಿಗೆ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ವಿಪ ಸದಸ್ಯರಾಗಿ ನೇಮಕವಾಗಿರುವ ಮಾಜಿ ಸಚಿವ ಎಚ್‌. ವಿಶ್ವನಾಥ್‌ ತಿಳಿಸಿದರು.

any govt could not stop me from writing says h vishwanath

ಮೈಸೂರು(ಜು.29): ಸರ್ಕಾರ ನನ್ನ ಕೈಗಳನ್ನು, ಬರವಣಿಗೆ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ವಿಪ ಸದಸ್ಯರಾಗಿ ನೇಮಕವಾಗಿರುವ ಮಾಜಿ ಸಚಿವ ಎಚ್‌. ವಿಶ್ವನಾಥ್‌ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಸಾಪ ವತಿಯಿಂದ ಮಂಗಳವಾರ ಪತ್ರಕರ್ತರ ಭವನದಲ್ಲಿ ನಡೆದ ಸಾಹಿತ್ಯಿಕ- ಸಾಂಸ್ಕೃತಿಕ ಸಂವಾದದಲ್ಲಿ ಮಾತನಾಡಿದ ಅವರು, ಒಬ್ಬ ಸಾಹಿತಿಯಾದ ನನ್ನ ಲೇಖನಿಯನ್ನು ಯಾವ ಸರ್ಕಾರವೂ ನಿಲ್ಲಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ತಂದಿದ್ದು ಹೇಗೆ ಎಂಬುದನ್ನು ದಿ ಬಾಂಬೆ ಡೇಸ್‌ ಪುಸ್ತಕದಲ್ಲಿ ಬರೆದೇ ತೀರುತ್ತೇನೆ ಎಂದರು.

ಆಪರೇಷನ್ ಕಮಲ ಮಾಡಿದ್ಯಾಕೆ..? ಕಾರಣ ರಿವೀಲ್ ಮಾಡಿದ ನಳಿನ್ ಕುಮಾರ್..!

ನಾನು ಈಗಾಗಲೇ 7 ಪುಸ್ತಕಗಳನ್ನು ಬರೆದಿದ್ದೇನೆ. ಇನ್ನಷ್ಟುಪುಸ್ತಕಗಳನ್ನು ಬರೆಯಲಿದ್ದೇನೆ. 8ನೇ ಪುಸ್ತಕವಾಗಿ ದಿ ಬಾಂಬೆ ಡೇಸ್‌ ಬರೆಯುತ್ತಿದ್ದೇನೆ. ನನ್ನ ಪುಸ್ತಕಗಳನ್ನು ನಾನೇ ಬರೆದಿದ್ದೇನೆ, ಬೇರೆಯವರ ಕೈಯಲ್ಲಿ ಬರೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಜನರಿಗೆ ತಿಳಿಯಬೇಕು. ನಾವು ಆಡಳಿತ ಪಕ್ಷದಿಂದ ವಿರೋಧ ಪಕ್ಷದ ಕಡೆಗೆ ಹೋದವರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಯಾರೂ ನಮ್ಮ ನಡೆಯನ್ನು ಸರಿಯಾಗಿ ವಿಶ್ಲೇಷಿಸಲಿಲ್ಲ. ಹೀಗಾಗಿಯೇ, ಜನರಿಗೆ ಈ ಬಗ್ಗೆ ಏನೂ ತಿಳಿದಿಲ್ಲ. ನಾನು ಬಾಂಬೆ ಡೇಸ್‌ ಪುಸ್ತಕದಲ್ಲಿ ಎಲ್ಲವನ್ನೂ ಸವಿಸ್ತಾರವಾಗಿ ಬರೆಯಲಿದ್ದೇನೆ. ಮಹಾರಾಷ್ಟ್ರ, ರಾಜಸ್ಥಾನಕ್ಕೆ ನಾವು ಮಾದರಿಯಾಗಿದ್ದು ಹೇಗೆ ಎಂಬುದನ್ನು ತಿಳಿಸಲಿದ್ದೇನೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನೂತನ MLC ಶಾಂತಾರಾಮ್ ಸಿದ್ದಿ ಮನೆಗೆ ಬಿಜೆಪಿ ನಾಯಕರ ದಂಡು: ಅದೃಷ್ಟ ಹೀಗಿರ್ಬೇಕು..!

ಸಾಹಿತ್ಯದ ಗಂಧಗಾಳಿ ಇಲ್ಲದವರು ನನ್ನ ಬಗ್ಗೆ ಟೀಕೆ ಮಾಡುತ್ತಾರೆ. ಯಾರು ತಿಳಿದಿರುತ್ತಾರೋ ಅವರು ಸರ್ಕಾರದ ನಿರ್ಧಾರವನ್ನು ಪುರಸ್ಕರಿಸುತ್ತಾರೆ. ನಾನು ಕಥೆ, ಕಾದಂಬರಿ ಬರೆದಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದು, ಸದ್ಯದ ರಾಜಕೀಯ ವಸ್ತುಸ್ಥಿತಿ, ವ್ಯವಸ್ಥೆಯನ್ನು ಸಾಹಿತ್ಯದ ಮೂಲಕ ಜನರಿಗೆ ತಿಳಿಸಿ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದರು.

ನಾನು ಯಾರನ್ನೂ ನನ್ನ ಬರವಣಿಗೆಯಿಂದ ಬೆದರಿಕೆ ಹಾಕಿಲ್ಲ. ಸಾಹಿತ್ಯದ ಮೂಲಕ ಜನರಿಗೆ ರಾಜಕೀಯ ವಿಷಯ ತಿಳಿಸಲು ಮಾತ್ರ ಬಳಸಿದ್ದೇನೆ. ನಾನು ಸಂಪೂರ್ಣವಾಗಿ ಕ್ಲೀನ್‌ ಆಗಿಯೇ ಇದ್ದೀನಿ. ಆ ಆತ್ಮವಿಶ್ವಾಸದ ಮೇಲೆಯೇ ನಾನು ಒಬ್ಬರನ್ನು ಚಾಮುಂಡಿಬೆಟ್ಟಕ್ಕೆ ಕರೆದಿದ್ದೆ. ಅವರಿಗೆ ಶಾಸಕಾಂಗ, ಜನತಂತ್ರ ವ್ಯವಸ್ಥೆಯ ಬಗ್ಗೆ ಹೆಚ್ಚು ತಿಳಿದಿಲ್ಲ. ಹೀಗಾಗಿಯೇ, ಟೀಕಿಸುತ್ತಾರೆ ಅಷ್ಟೇ ಎಂದು ಶಾಸಕ ಸಾ.ರಾ. ಮಹೇಶ್‌ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

Latest Videos
Follow Us:
Download App:
  • android
  • ios