Ballari: ಹಿಜಾಬ್, ಹಲಾಲ್ ಆಯ್ತು ಇದೀಗ ಮತ್ತೊಂದು ವಿವಾದ ಶುರು: ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದ
* ಸುವಾರ್ತೆ ಕೂಟ ನಡೆಯಲು ಬಿಡದ ಹಿಂದೂ ಕಾರ್ಯಕರ್ತರು
* ಕ್ರೈಸ್ತ ಸುವಾರ್ತೆ ಕೂಟದ ಹೆಸರಲ್ಲಿ ಮತಾಂತರ ಆರೋಪ
* ವಾಲ್ಮೀಕಿ ಭವನದಲ್ಲಿ ಧರ್ಮಪ್ರಚಾರಕ್ಕೆ ಅವಕಾಶವಿಲ್ಲ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ಏ.05): ರಾಜ್ಯದಲ್ಲಿ ಹಿಜಾಬ್(Hijab) ಗದ್ದಲವಾಯ್ತು, ವ್ಯಾಪಾರ ಬಹಿಷ್ಕಾರವಾಯ್ತು, ಹಲಾಲ್(Halal) ಕಟ್ ಕೂಡ ಬಹುತೇಕ ಮುಗಿತು ಎನ್ನುವಷ್ಟರಲ್ಲಿ ಬಳ್ಳಾರಿಯಲ್ಲಿ ಕ್ರೈಸ್ತ(Christian) ಸುವಾರ್ತೆ ಕೂಟ ಕಾರ್ಯಕ್ರಮ ರದ್ದು ಮಾಡಬೇಕೆಂದು ಆಗ್ರಹಿಸಿ ದೊಡ್ಡ ಹೈಡ್ರಾಮಾನೇ ನಡೆದಿದೆ. ಬಳ್ಳಾರಿಯಲ್ಲಿ ಇದೀಗ ಹೊಸ ವಿವಾದ ಭುಗಿಲೆದ್ದಿದ್ದು ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದದ ನಡೆದಿದೆ.
ವಾಲ್ಮೀಕಿ ಭವನದಲ್ಲಿ ಕ್ರೈಸ್ತಮತ ಪ್ರಚಾರಕ್ಕೆ ಹಿಂದು(Hindu) ಸಂಘಟನೆಗಳ ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆದಿದೆ. ಗಲಾಟೆ ಹಿನ್ನೆಲೆ ಆಫ್ ಕಿಂಗ್ಸ್ ಚರ್ಚ್‌ನ 32 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕ್ರೈಸ್ತ ಸುವಾರ್ತಾ ಉಜ್ಜೀವ ಮಹಾಸಭೆಯನ್ನು ಕ್ರೈಸ್ತರ ಸಮುದಾಯದವರು ಹಮ್ಮಿಕೊಂಡಿದ್ರು..ಇದಕ್ಕೆ ಹಿಂದು ಪರ ಸಂಘಟನೆಗಳ ಮುಖಂಡರು ಆಕ್ಷೇಪವ್ಯಕ್ತಪಡಿಸಿ ಭವನದ ಮುಂದೆ ಪ್ರತಿಭಟನೆ ಮಾಡಿದ್ದರು.
ರೆವರೆಂಡ್ ಪಿ.ವಿಜಯಕುಮಾರ್ ಮತ್ತು ರೆವರೆಂಡ್.ಕೆ.ಜಾನ್ ಮಂಗಾಚಾರ್ಯುಲು ಮತ ಪ್ರಚಾರ ಮಾಡಲು ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಆದ್ರೇ ರಾಮಾಯಣ ನಿರ್ಮಾತ್ರು ವಾಲ್ಮೀಕಿ ಭವನದಲ್ಲಿ ಕ್ರೈಸ್ತ ಪ್ರಚಾರ ಸರಿಯಲ್ಲ ಅಲ್ಲದೇ ಇಲ್ಲಿ ಮತಾಂತರ ಮಾಡಲಾಗ್ತಿದೆ ಎಂದು ಹಿಂದೂ ಕಾರ್ಯಕರ್ತರ ಆಕ್ಷೇಪ ವ್ಯಕ್ತಪಡಿಸಿದರು.
Ballari ಭವಿಷ್ಯ ಹೇಳೋ ನೆಪದಲ್ಲಿ ವಾಮಾಚಾರ ಮಾಡಿ ಕಣ್ಣೆದುರೇ ಕತ್ತಿನ ಸರ ಎಗರಿಸಿದ ಚಾಲಾಕಿ!
ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ಮಾಡಿ ಧರ್ಮಸಭೆ ಬೇಡ
ರಾಮಾಯಣ(Ramayana) ಬರೆಯುವ ಮೂಲಕ ರಾಮನ ಪರಿಕಲ್ಪನೆ ಹುಟ್ಟು ಹಾಕಿದ ಮಹರ್ಷಿ ವಾಲ್ಮೀಕಿ ಅವರ ಹೆಸರಲ್ಲಿ ಇರೋ ಭವನದಲ್ಲಿ ಕ್ರೈಸ್ತ ಮತಪ್ರಚಾರ ಮತ್ತು ಮತಾಂತರಕ್ಕೆ ಅವಕಾಶ ನೀಡೋದಿಲ್ಲವೆಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಪಟ್ಟು ಹಿಡಿದ್ರು.
ಕ್ರೈಸ್ತ ಮುಸ್ಲಿಂ(Muslim) ಸೇರಿದಂತೆ ಯಾವುದೇ ಸಮುದಾಯದವರು ಮದುವೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಆದ್ರೇ ಮತಾಂತರ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರೋ ವಾಲ್ಮೀಕಿ ಭವನವನ್ನು ಬಾಡಿಗೆಗೆ ನೀಡಿದ್ರಿಂದ ಇಲಾಖೆಯ ವಿರುದ್ಧವೂ ಹಿಂದೂಪರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಹಿಂದು ಧರ್ಮವನ್ನು ಹೀಯಾಳಿಸಿ ಮಾತನಾಡುವುದಕ್ಕೆ ಹೇಗೆ ಅವಕಾಶ ನೀಡಿದ್ರಿ ಎಂದು ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.
Ballari: ಕುಡಿಯುವ ನೀರಿಗಾಗಿ ಹೆದ್ದಾರಿ ತಡೆದು ಜನರ ಆಕ್ರೋಶ
ಪಾಲಿಕೆ ಬಿಜೆಪಿ ಸದಸ್ಯ ಹನುಮಂತಪ್ಪ. ಸಂಘಟನೆಗಳ ಮುಖಂಡರಾದ ಅಶೋಕ್, ಅರುಣ್ ಹಿಂದೂ ಪರ ವಾದ ಮಾಡಿದ್ರೇ. ಪರಿಶಿಷ್ಟ ಜಾತಿಯ ಮುಖಂಡ ಪೃಥ್ವಿರಾಜ್ ಇಲ್ಲಿ ಧರ್ಮಸಭೆ ನಡೆಯುತ್ತದೆ ಅಷ್ಟೇ, ಪ್ರಚಾರ ಅಲ್ಲ ಮತ್ತು ಮತಾಂತರವಲ್ಲ ಎಂದು ಸಮರ್ಥಿಸಿಕೊಂಡರು.
ಯಶಸ್ವಿಯಾದ ಪೊಲೀಸರ ಸಂಧಾನ
ಇನ್ನೂ ಗಲಾಟೆ ತೀವ್ರವಾಗ್ತಿದ್ದಂತೆ ಪೊಲೀಸರು(Police) ಸಂಧಾನ ಸೂತ್ರಕ್ಕೆ ಮುಂದಾದ್ರು. ಈ ಮೊದಲೇ ನಿಯೋಜಿತಗೊಂಡ ಕಾರ್ಯಕ್ರಮ ದಿಢೀರನೇ ರದ್ದು ಮಾಡೋದು ಸರಿಯಲ್ಲ ಹೀಗಾಗಿ ವಾಲ್ಮೀಕಿ ಪುತ್ತಳಿಗೆ ಕ್ರೈಸ್ತ ಸಮುದಾಯದ ಮುಖಂಡರಿಂದ ಹೂ ಮಾಲೆ ಹಾಕಿಸುವ ಸೌಹಾರ್ದತೆ ಪ್ರದರ್ಶಿಸಿ ಕಾರ್ಯಕ್ರಮ ನಡೆಸಲಾಯಿತು.