ಆನೇಕಲ್‌(ಜು.29): ಕೊರೋನಾ ಸೋಂಕಿಗೆ ತುತ್ತಾಗಿದ್ದ ಆನೇಕಲ್‌ ಶಾಸಕ ಬಿ.ಶಿವಣ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಈ ಸಂಬಂಧ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸತತ 18 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದೆ. ಇನ್ನೂ ಕೆಲ ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಕೊರೋನಾ ದೃಢಪಟ್ಟ ಮೊದಲ ದಿನದಿಂದಲೇ ಧೈರ್ಯವಾಗಿದ್ದೆ. ವೈದ್ಯರು ಸೂಚಿಸಿದ ಮಾತ್ರೆಗಳನ್ನು ತಪ್ಪದೇ ತೆಗೆದುಕೊಳ್ಳುತ್ತಿದ್ದೆ ಎಂದು ತಿಳಿಸಿದ್ದಾರೆ.

ಆನೇಕಲ್‌ ಶಾಸಕ ಶಿವಣ್ಣಗೂ ಸೋಂಕು

ಪೌಷ್ಟಿಕಾಂಶಯುಕ್ತ ಬಿಸಿಬಿಸಿ ಆಹಾರ ಸೇವನೆ ಮಾಡುತ್ತಿದ್ದೆ. ಹೀಗೆ ವೈದ್ಯರ ಸಲಹೆಗಳನ್ನು ಪಾಲಿಸಿದ ಪರಿಣಾಮ ಸೋಂಕಿತನಿಂದ ಬೇಗ ಗುಣಮುಖನಾದೆ. ಜನತೆ ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆಯಿಲ್ಲ. ಧೈರ್ಯ, ಆತ್ಮಸ್ಥೈರ್ಯ ಕಾಯಿಲೆಯಿಂದ ಗುಣಮುಖರಾಗಲು ಸಹಕಾರ ನೀಡುತ್ತದೆ ಎಂದು ಹೇಳಿದ್ದಾರೆ.