ಆನೇಕಲ್ ಪಟಾಕಿ ಮಳಿಗೆ ಬೆಂಕಿ 10 ಮಂದಿ ಸಜೀವ ದಹನ: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ
ಬೆಂಗಳೂರಿನ ಹೊರವಲಯ ಆನೇಕಲ್‌ನಲ್ಲಿ ಪಟಾಕಿ ಮಳಿಗೆಗೆ ಬೆಂಕಿ ತಗುಲಿದ್ದು, 10 ಮಂದಿ ಸಜೀವ ದಹನವಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಆನೇಕಲ್ (ಅ.07): ಬೆಂಗಳೂರು ಹೊರವಲಯದ ಆನೇಕಲ್‌ನ ಅತ್ತಿಬೆಲೆಯಲ್ಲಿ ಪಟಾಕಿ ಮಳಿಗೆಯೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಬರೋಬ್ಬರಿ 10 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ ಹಲವರು ಒಳಗೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಪಟಾಕಿ ಮಳಿಗೆ ಸಿಬ್ಬಂದಿ ತಿಳಿಸಿದ್ದಾರೆ.
ಅತ್ತಿಬೆಲೆಯಲ್ಲಿ ಪಟಾಕಿ ಮಳಿಗೆಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಪಟಾಕಿ ಮಳಿಗೆ ಹೊತ್ತಿ ಉರಿದಿದೆ. ಬಾನೆತ್ತರಕ್ಕೆ ಬೆಂಕಿಯ ಜ್ವಾಲೆ ಹಾಗೂ ಹೊಗೆ ಆವರಿಸಿದ್ದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿತ್ತು. ಜೊತೆಗೆ, ಪಟಾಕಿ ಲಾರಿಗಳು, ಗೂಡ್ಸ್ ವಾಹನಗಳು ಹಾಗೂ ಬೈಕ್‌ಗಳು ಕೂಡ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಈಗ ಬೆಂಕಿಯನ್ನು ನಂದಿಸಿದ್ದು, ಮೃತ ದೇಹಗಳನ್ನು ಹೊರಗೆ ತೆಗೆಯಲಾಗುತ್ತಿದೆ.
ರೈತ ಹಂತಕ ಸಿಎಂ ಸಿದ್ದರಾಮಯ್ಯ ಎಂದು ಫೋಟೋ ಹರಿಬಿಟ್ಟ ಬಿಜೆಪಿ
10 ಮಂದಿ ಸಜೀವ ದಹನ, ಬೂದಿಯಲ್ಲಿ ಶವಕ್ಕಾಗಿ ಹುಡುಕಾಟ: ಇನ್ನು ಪಟಾಕಿ ಮಳಿಗೆಗೆ ಬೆಂಕಿ ಹತ್ತಿರುವುದನ್ನು ಹತೋಟಿಗೆ ತರಲಾಗಿದೆ. ಈ ವೇಳೆ ಮಳಿಗೆಯಲ್ಲಿ ಐವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಂಕಿ ಹಾಗೂ ಪಟಾಕಿಯ ಬೂದಿಯಲ್ಲಿ ಶವಗಳನ್ನು ಹುಡುಕಲಾಗುತ್ತಿದೆ. ಒಟ್ಟು ಮಳಿಗೆಯಲ್ಲಿ 10 ಜನರು ಒಳಗೆ ಕೆಲಸ ಮಾಡುತ್ತಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮಳಿಗೆಯ ಹೊರ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಾಲೀಕ ಬೆಂಕಿ ಬಿದ್ದ ಕೂಡಲೇ ಅಲ್ಲಿಂದ ಹೊರಗೆ ಓಡಿ ಬಂದಿದ್ದಾನೆ. ಮಾಲೀಕನಿಗೂ ಸುಟ್ಟ ಗಾಯಗಳಾಗಿವೆ. ಇನ್ನು ಅಗ್ನಿ ಅವಘಡದಿಂದಾಗಿ ಹೊಸೂರು ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಟಾಕಿ ಮಳಿಗೆಗೆ ಬೆಂಕಿ ಹಿನ್ನೆಲೆ ಟ್ರಾಫಿಕ್ ಜಾಮ್ ಹೆಚ್ಚಾಗಿದ್ದು, ಇದರಲ್ಲಿ ಅಗ್ನಿಶಾಮಕ ದಳ ವಾಹನ ಕೂಡ ಸಿಲುಕಿತ್ತು.
20 ಜನರು ಕೆಲಸ ಮಾಡುತ್ತಿದ್ದರು: ಇನ್ನು ಪಟಾಕಿ ಮಳಿಗೆಯಲ್ಲಿ ಒಟ್ಟು 20 ಮಂದಿ ಕೆಲಸ ಮಾಡುತ್ತಿದ್ದರು. ಈ ಪೈಕಿ 4 ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಹೊರಗೆ ಓಡಿ ಬಂದು ಬದುಕುಳಿದಿದ್ದಾರೆ. ಇನ್ನು 6 ಮಂದಿಯ ಸುಳಿವು ಸಿಕ್ಕಿಲ್ಲ. ಮೃತ ದೇಹಕ್ಕಾಗಿ ಪಟಾಕಿಯ ಬೂದಿ ಹಾಗೂ ಇತರೆಡೆ ಹುಡುಕಲಾಗುತ್ತಿದೆ. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿಗೆ ದೇಹವು ಸಿಗುತ್ತಿಲ್ಲ. ಜೊತೆಗೆ, ಕಾರ್ಖಾನೆಯಿಂದ ಯಾರಾದರೂ ಹೊರಗೆ ಬಂದಿದ್ದಾರೆಯೇ ಎಂಬ ಮಾಹಿತಿಯೂ ಸಿಗುತ್ತಿಲ್ಲ. ಮೃತದೇಹ ಹುಡುಕಾಟ ನಡೆದಿದ್ದು, ಕತ್ತಲಾಗಿರುವ ಹಿನ್ನೆಲೆಯಲ್ಲಿ ಮೃತದೇಹ ಹುಡುಕಾಟಕ್ಕೆ ಸ್ವಲ್ಪ ಸಮಸ್ಯೆ ಆಗಿದೆ.
ಇಸ್ರೇಲ್ ಗಾಜಾಪಟ್ಟಿ ಯುದ್ಧದ ಬೆನ್ನಲ್ಲೇ ಭಾರತೀಯರಿಗಾಗಿ ಸಹಾಯವಾಣಿ ಆರಂಭಿಸಿದ ಇಂಡಿಯಾ
ಮೃತರೆಲ್ಲರೂ ತಮಿಳುನಾಡು ಮೂಲದವರೆಂಬ ಮಾಹಿತಿ: ಪಟಾಕಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರು ತಮಿಳುನಾಡು ಮೂಲದವರು ಎಂದು ಹೇಳಲಾಗುತ್ತಿದೆ. ಇನ್ನು ಮಾಲೀಕರಿಗೆ ಕೂಡ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ, ಮೂವರು ಕಾರ್ಮಿಕರು ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚೇತರಿಸಿಕೊಂಡ ನಂತರ ಮೃತ ಕಾರ್ಮಿಕರ ಮಾಹಿತಿ ಲಭ್ಯವಾಗಲಿದೆ. ಇನ್ನು ಪಟಾಕಿ ತುಂಬಿಕೊಂಡು ನಿಂತಿದ್ದ ಲಾರಿ ಹಾಗೂ ಟಾಟಾ ಏಸ್ ವಾಹನಗಳ ಚಾಲಕರು ಪಟಾಕಿ ಮಳಿಗೆಯಲ್ಲಿ ಸಿಲುಕಿದ್ದರೇ ಎಂದು ಹುಡುಕಲಾಗುತ್ತಿದೆ.