Asianet Suvarna News Asianet Suvarna News

ಇಸ್ರೇಲ್‌ ಗಾಜಾಪಟ್ಟಿ ಯುದ್ಧದ ಬೆನ್ನಲ್ಲೇ ಭಾರತೀಯರಿಗಾಗಿ ಸಹಾಯವಾಣಿ ಆರಂಭಿಸಿದ ಇಂಡಿಯಾ

ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲಿಸ್ತೇನ್‌ ವಿರುದ್ಧ ಯುದ್ಧವನ್ನು ಆರಂಭಿಸಿದ್ದು, ಭಾರತೀಯರ ರಕ್ಷಣೆಗಾಗಿ ಮಾರ್ಗಸೂಚಿ ಹಾಗೂ ಸಹಾಯವಾಣಿ ಆರಂಭಿಸಲಾಗಿದೆ.

Israel palestine war about gaza strip conflict Indian Embassy release helpline sat
Author
First Published Oct 7, 2023, 4:21 PM IST

ನವದೆಹಲಿ (ಅ.07): ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ಗುಂಪು 5000ಕ್ಕೂ ಅಧಿಕ ರಾಕೆಟ್‌ಗಳ ಸುರಿಮಳೆ ಸುರಿಸಿ, ಯುದ್ಧವನ್ನು ಸಾರಿದ ಬೆನ್ನಲ್ಲಿಯೇ ಇಸ್ರೇಲ್‌ನಲ್ಲಿರುವ ಭಾರತೀಯರರ ರಕ್ಷಣೆಗೆ ಭಾರತೀಯ ರಾಯಭಾರಿ ಕಚೇರಿಯಿಂದ ಅಗತ್ಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಸಹಾಯವಾಣಿ ಆರಂಭಿಸಿದೆ.

ಇಸ್ರೇಲ್ ಗಡಿಯಲ್ಲಿ ಯುದ್ಧದ ವಾತಾವರಣ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಅಧಿಕಾರಿಗಳು ನೀಡುವ ಸುರಕ್ಷತಾ ಮಾನದಂಡ ಅನುಸರಿಸಿ ಅನಗತ್ಯ ಸಂಚಾರ ಬೇಡ, ಸುರಕ್ಷತಾ ಸ್ಥಳಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಇನ್ನು ಇಸ್ರೇಲ್ ನಲ್ಲಿ ವಾಸಿಸುವ ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಎಚ್ಚರಿಕೆ ನೀಡುವ ಜೊತೆಗೆ, ಅಗತ್ಯ ಬಿದ್ದಲ್ಲಿ +97235226748 ಸಂಖ್ಯೆಯನ್ನ ಸಂಪರ್ಕ ಮಾಡುವಂತೆ ಮಾಹಿತಿ ನೀಡಲಾಗಿದೆ. 

ಇಸ್ರೇಲ್‌ ಮೇಲೆ ದಿಢೀರ್‌ ಯುದ್ಧ ಸಾರಿದ ಹಮಾಸ್‌ ಉಗ್ರರು: 5,000 ಕ್ಕೂ ಹೆಚ್ಚು ರಾಕೆಟ್‌ ಸುರಿಮಳೆ

ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಮೇಲೆ ನಡೆಯುತ್ತಿರುವ ಅತೀ ದೊಡ್ಡ ದಾಳಿ ಇದು ಎನ್ನಲಾಗಿದೆ. ಇಂದು ಬೆಳಿಗ್ಗೆಯಿಂದ ಹಮಾಸಾ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್ ದಾಳಿಯನ್ನ ನಡೆಸಿದ್ದಾರೆ. ಗಾಜಾ ಸ್ಟ್ರಿಪ್‌ನಿಂದ ಶನಿವಾರ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ಗುಂಪು ಸಾವಿರಾರು ರಾಕೆಟ್‌ಗಳ ಸುರಿಮಳೆ ಸುರಿಸಿ, ದಿಢೀರ್‌ ಯುದ್ಧ ಸಾರಿದೆ. ಇದರಿಂದ ದಿಢೀರನೇ ಇಸ್ರೇಲ್‌ ಮೇಲೆ ಸ್ಟೇಟ್‌ ಆಫ್‌ ವಾರ್‌ ಆರಂಭವಾಗಿದೆ. ಇಸ್ರೇಲಿ ಸೈನ್ಯವು ದೇಶದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಸೈರನ್‌ಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರನ್ನು ಬಾಂಬ್ ಶೆಲ್ಟರ್‌ಗಳ ಬಳಿ ಇರುವಂತೆ ಮನವಿ ಮಾಡಿಕೊಂಡಿದೆ. 

"ನಾವು ಇಸ್ರೇಲ್‌ ಆಕ್ರಮಣದ ಎಲ್ಲ ಅಪರಾಧಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ, ಹೊಣೆಗಾರಿಕೆಯಿಲ್ಲದೆ ನಮ್ಮ ಮೇಲೆ ಆಕ್ರಮಣ ಮಾಡುವ ಅವರ ಸಮಯ ಮುಗಿದಿದೆ" ಎಂದೂ ಗುಂಪು ಹೇಳಿದೆ. ಈ ಯುದ್ಧಕ್ಕೆ Operation Al-Aqsa Flood ಎಂದು ಹೆಸರಿಡಲಾಗಿದೆ. "ನಾವು ಆಪರೇಷನ್ ಅಲ್-ಅಕ್ಸಾ ಪ್ರವಾಹವನ್ನು ಘೋಷಿಸಿದ್ದು, 20 ನಿಮಿಷಗಳ ಮೊದಲ ಸ್ಟ್ರೈಕ್‌ನಲ್ಲಿ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದೇವೆ." ಎಂದು ಹೇಳಿದ್ದಾರೆ. ಇಸ್ರೇಲ್ ಅನ್ನು ವಿರೋಧಿಸುವ ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಮಾಸ್ 2007 ರಲ್ಲಿ ಭೂಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಗಾಜಾದ ಮೇಲೆ ದಿಗ್ಬಂಧನ ಹಾಕಿದೆ.. ಅಂದಿನಿಂದ ಕಡು ಶತ್ರುಗಳು ನಾಲ್ಕು ಯುದ್ಧ ನಡೆಸಿವೆ. 

ಇಸ್ರೇಲ್ ಮಹಿಳೆಯ ವಿವಸ್ತ್ರಗೊಳಿಸಿ ಹಮಾಸ್ ಉಗ್ರರ ದಾಳಿ, ಅಲ್ಲಾಹು ಅಕ್ಬರ್ ಘೋಷಣೆ!

ಸ್ರೇಲ್(ಅ.07) ಇಸ್ರೇಲ್ ಮೇಲೆ ಯುದ್ಧ ಸಾರಿರುವ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಒಂದೆಡೆ ರಾಕೆಟ್ ಮೂಲಕ ದಾಳಿ ನಡೆಸಿದರೆ, ಸಾವಿರಾರು ಉಗ್ರರು ಇಸ್ರೇಲ್‌ಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಇಸ್ರೇಲ್ ಸೈನಿಕರನ್ನು ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡುತ್ತಿದ್ದಾರೆ. ಇದೇ ವೇಳೆ ಸಾರ್ವಜನಿಕರ ಮೇಲೂ ದಾಳಿ ನಡೆದಿದೆ. ಗಾಜಾ ಸ್ಟ್ರಿಪ್‌ನಿಂದ ದಾಳಿ ಆರಂಭಿಸಿದ ಹಮಾಸ್ ಉಗ್ರರು ನೇರವಾಗಿ ಇಸ್ರೇಲ್ ಗಡಿ ದಾಟಿ ಇಸ್ರೇಲ್ ನಗರ, ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಅಮಾಯಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಹಲವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಇತ್ತ ಇಸ್ರೇಲ್ ಮಹಿಳೆಯನ್ನು ವಿವಸ್ತ್ರಗೊಳಿಸಿ ತೀವ್ರ ದಾಳಿ ನಡೆಸಿದ್ದಾರೆ.  ಮಹಿಳೆಯನ್ನು ತಮ್ಮ ವಾಹನಕ್ಕೆ ಎತ್ತಿ ಹಾಕಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಾರೆ.

Follow Us:
Download App:
  • android
  • ios