ಕೋಲಾರ(ಫೆ.09): ಕೋಲಾರದಲ್ಲಿ ಬೈಕ್ ಹಾಗೂ ಆಂದ್ರಪ್ರದೇಶದ ಬಸ್ ಡಿಕ್ಕಿಯಾಗಿ ಅಪಘಾತವಾಗಿದ್ದು, ಬೈಕ್ ಸವಾರ ಮೃತಪಟ್ಟಿದ್ದಾನೆ. ಇನ್ನೋರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಆಂಧ್ರ ಸಾರಿಗೆ ಬಸ್ ಬೈಕ್ ಗೆ ಡಿಕ್ಕಿಯಾಗಿದ್ದು, ಬೈಕ್ ಸವಾರ ನಾರಾಯಣಸ್ವಾಮಿ (45) ಮೃತಪಟ್ಟಿದ್ದಾರೆ. ವೆಂಕಟೇಶ್ ತೀವ್ರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಲು ರಾಷ್ಟ್ರೀಯ ಹೆದ್ದಾರಿ 75ರ ತಾಯಲೂರು ಕ್ರಾಸ್ ನಲ್ಲಿ ಘಟನೆ ನಡೆದಿದೆ.

ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ: ಒಬ್ಬ ಸಾವು, ಐವರು ಗಂಭೀರ

ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಆಂಧ್ರಪ್ರದೇಶ ಸಾರಿಗೆ ಬಸ್ ಅಪಘಾತಕ್ಕೊಳಗಾಗಿದೆ. ಸಾರಿಗೆ ಬಸ್ ಹಾಗೂ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.