ಪಿಎಚ್ ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪ ಮಂಗಳೂರು ಸೈಬರ್ ಕ್ರೈಮ್ ಪೊಲೀಸರಿಂದ ಪ್ರೊಫೆಸರ್ ಅರೆಸ್ಟ್
ಮಂಗಳೂರು (ಅ.03): ಪಿಎಚ್ ಡಿ (PHD) ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಪ್ರಾಧ್ಯಾಪಕನ (Professor) ಬಂಧನವಾಗಿದೆ.
ಆಂಧ್ರಪ್ರದೇಶದ (Andhrapradesh) ಆಚಾರ್ಯ ನಾಗಾರ್ಜುನ ವಿ.ವಿ.ಯ ಪ್ರಾಧ್ಯಾಪಕ ಡಾ.ಕೊಂಡೂರು ಸುಧೀರ್ ಕುಮಾರ್ ಆಂಧ್ರಪ್ರದೇಶದಲ್ಲಿಯೇ ಮಂಗಳೂರು (Mangaluru) ಸೈಬರ್ ಕ್ರೈಮ್ ಪೊಲೀಸರು ಇಂದು ಅರೆಸ್ಟ್ (Arrest) ಮಾಡಿದ್ದಾರೆ.
ಮಂಗಳೂರಿನ ವಿದ್ಯಾರ್ಥಿನಿ ಪ್ರಾಧ್ಯಾಪಕಿಯೊಬ್ಬರ ಮಾರ್ಗದರ್ಶನದಲ್ಲಿ ಪಿಎಚ್ ಡಿ ಮಾಡುತ್ತಿದ್ದರು. ಈ ಮಧ್ಯೆ ಪರಿಚಯವಾದ ಸುಧೀರ್ ತನ್ನನ್ನು ಮಾರ್ಗದರ್ಶಕನಾಗಿ ನೇಮಿಸುವಂತೆ ಒತ್ತಾಯಿಸಿದ್ದ. ಆದರೆ ವಿ.ವಿಯ ಅನುಮತಿ ಕೇಳಿದಾಗ ಆತನಿಗೆ ಅರ್ಹತೆಯಿಲ್ಲ ಎಂದು ನಿರಾಕರಿಸಲಾಗಿತ್ತು. ಆದರೆ ಆ ಬಳಿಕವೂ ಸುಧೀರ್ ನಿಂದ ವಿದ್ಯಾರ್ಥಿನಿ (Student) ಮತ್ತು ಮನೆಯವರಿಗೆ ಕಿರುಕುಳ ನೀಡುತ್ತಿದ್ದ.
ಪೋನ್ ಮುಂದೆ ಬಚ್ಚೆ ಬಿಚ್ಚಿ ಬೆತ್ತಲೆ ಲೈವ್ ಬಾ, ವಿದೇಶಿ ಗಂಡನ ಹುಚ್ಚಾಟ!
ವಿದ್ಯಾರ್ಥಿನಿ ಇದನ್ನು ನಿರಾಕರಿಸಿದಾಗ ಆತ ಆಕೆಯ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದು, ಈ ಸಂಬಂಧ ವಿದ್ಯಾರ್ಥಿನಿ ಪೋಷಕರು ಮಂಗಳೂರಿನಲ್ಲಿ ದೂರು ದಾಖಲಿಸಿದ್ದರು.
ವಿದ್ಯಾರ್ಥಿನಿ ಪೋಷಕರ ದೂರಿನ ಹಿನ್ನೆಲೆ ಮಂಗಳೂರು ಪೊಲೀಸರು ಆರೋಪಿ ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿ.ವಿ.ಯ ಪ್ರಾಧ್ಯಾಪಕ ಡಾ.ಕೊಂಡೂರು ಸುಧೀರ್ ಕುಮಾರ್ ಅರೆಸ್ಟ್ ಮಾಡಿದ್ದಾರೆ.
ಇದೀಗ ಪ್ರಕರಣ ಸಂಬಂಧ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಬಾಲಕಗೆ ಲೈಂಗಿಕ ಕಿರುಕುಳ
ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮದರಸಾ ಶಿಕ್ಷಕನಿಗೆ 11 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡ ವಿದಿಸಿ ತುಮಕೂರಿನ ಫೋಕ್ಸೋ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ತುಮಕೂರು ಗ್ರಾಮಾಂತರದ ಅಮಲಾಪುರ ಮದರಸದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ನಿವಾಸಿ ಮುಷರಫ್ ಏಪ್ರಿಲ್ 17 2015ರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅರೋಪ ಎದುರಿಸುತ್ತಿದ್ದ.
ಇದೀಗ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷ ಹಾಗೂ ದಂಡ ವಿಧಿಸಲಾಗಿದೆ. ಬಾಲಕನಿಗೆ 5 ಲಕ್ಷ ರು.ಪರಿಹಾರ ನೀಡುವಂತೆ ತೀರ್ಪು ನೀಡಿತ್ತು.
ವಿದೇಶದಲ್ಲಿ ಗಂಡ, ಕಾಮದಾಹದಿಂದ ದಾರಿ ತಪ್ಪಿದ ಪತ್ನಿ: ಬಳಿಕ ನಡೆದಿದ್ದು ಘನಘೋರ
ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ನೆಪದಲ್ಲಿ ಬಾಲಕನನ್ನು ರೈಲ್ವೆ ನಿಲ್ದಾಣದ ಬಳಿ ಇರುವ ಲಾಡ್ಜ್‌ಗೆ ಕರೆಸಿಕೊಂಡಿದ್ದ ಮುಫ್ತಿ ಲೈಂಗಿಕ ದೌರ್ಜನ್ಯ ಎಸಗಿ ವಾಪಸ್ ಮದರಸಾಗೆ ಬಿಟ್ಟು ಬಂದಿದ್ದ. ಬಾಲಕನನ್ನು ನೊಡಲು ಬಂದಿದ್ದ ತಾಯಿ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಮದರಸದ ಶಿಕ್ಷಕನ ವಿರುದ್ಧ ತುಮಕುರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377. 506 ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
