Asianet Suvarna News

ಆಂಧ್ರದಲ್ಲಿ ಫೇಮಸ್‌ ಆದ ಆನಂದಯ್ಯ ಕೋವಿಡ್‌ ಔಷಧ ರಾಜ್ಯದಲ್ಲೂ ಉಚಿತ ವಿತರಣೆ..!

* ಆನೆಗೊಂದಿಯಲ್ಲಿ ಆನಂದಯ್ಯನ ಔಷಧ ವಿತರಣೆ
* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅನೆಗೊಂದಿ
* ಕೊರೋನಾ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಈ ಔಷಧಿ
 

Anandaiah Covid Medicine Free Distribute at Anegondi in Koppal grg
Author
Bengaluru, First Published Jun 28, 2021, 8:45 AM IST
  • Facebook
  • Twitter
  • Whatsapp

ಗಂಗಾವತಿ(ಜೂ.28): ತಾಲೂಕಿನ ಆನೆಗೊಂದಿಯಲ್ಲಿ ಕೊರೋನಾ ಔಷಧ ಎಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಸಂಚಲನ ಸೃಷ್ಟಿಸಿದ ಆನಂದಯ್ಯ ಅವರ ಆಯುರ್ವೇದ ಔಷಧವನ್ನು ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಉಚಿತವಾಗಿ ವಿತರಣೆ ಮಾಡಿದ್ದಾರೆ. 

ಆನೆಗೊಂದಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮದ ಜನರು ಆಗಮಿಸಿ ಔಷಧ ಪಡೆದರು. ರಂಗನಾಥ ದೇವಸ್ಥಾನದಲ್ಲಿ ಔಷಧ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಈ ಔಷಧಕ್ಕೆ ಆಂಧ್ರಪ್ರದೇಶದ ಆಯುಷ್‌ ಇಲಾಖೆ ಪರವಾನಗಿ ನೀಡಿದೆ. ಇದರಿಂದ ಕೊರೋನಾ ನಿಯಂತ್ರಣವಾಗುವುದಲ್ಲದೆ, ಔಷಧ ಸೇವಿಸಿದವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಔಷಧ ಪಡೆದವರು ಒಂದು ಗಂಟೆಗಳ ಕಾಲ ಆಹಾರ ಸೇವನೆ ಮಾಡಬಾರದು, ಮೂರು ಗಂಟೆಗಳ ಕಾಲ ನಿದ್ದೆ ಮಾಡಬಾರದು. ಒಂದು ವಾರ ಮದ್ಯ, ಮಾಂಸ ಸೇವನೆ ಮಾಡಬಾರದು ಎಂದು ತಿಳಿಸಿದರು. 

ಆನಂದ​ಯ್ಯನ ಕೊರೋ​ನಾ ಔಷ​ಧಕ್ಕೆ ಮತ್ತೆ ಮುಗಿ​ಬಿದ್ದ ಜನ!

ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧವಾಗಿದ್ದು, ಕೊರೋನಾ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಈ ಔಷಧವನ್ನು ಕೊರೋನಾದಿಂದ ಆಮ್ಲಜನಕ ತೀರಾ ಸಮಸ್ಯೆಯಾದ ರೋಗಿಗಳಿಗೆ ನೀಡಲಾಗಿದ್ದು, ಭಾರಿ ಪರಿಣಾಮಕಾರಿಯಾಗಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios