Asianet Suvarna News Asianet Suvarna News

ಆನಂದ​ಯ್ಯನ ಕೊರೋ​ನಾ ಔಷ​ಧಕ್ಕೆ ಮತ್ತೆ ಮುಗಿ​ಬಿದ್ದ ಜನ!

* ಆಂಧ್ರಪ್ರದೇಶ​ದ ನೆಲ್ಲೂರು ಜಿಲ್ಲೆಯ ಕೃಷ್ಣ​ಪ​ಟ್ಟಣಂ ಗ್ರಾಮ​ದಲ್ಲಿ ಮತ್ತೆ ನೂಕುನುಗ್ಗಲು

* ಆನಂದ​ಯ್ಯನ ಕೊರೋ​ನಾ ಔಷ​ಧಕ್ಕೆ ಮತ್ತೆ ಮುಗಿ​ಬಿದ್ದ ಜನ

* ನೂಕುನುಗ್ಗಲು ಉಂಟಾದ ಹಿನ್ನೆ​ಲೆ​ಯಲ್ಲಿ ಔಷಧ ವಿತ​ರ​ಣೆಗೆ ತಡೆ

High Court green signal for Anandayya eye drops pod
Author
Bangalore, First Published Jun 8, 2021, 9:47 AM IST

ನೆಲ್ಲೂ​ರು(ಜೂ.08): ಕೊರೋ​ನಾಕ್ಕೆ ರಾಮ​ಬಾಣ ಎಂದು ಹೇಳ​ಲಾ​ಗು​ತ್ತಿ​ರುವ ಆನಂದ​ಯ್ಯ​ನ ‘ಹಳ್ಳಿ ಮದ್ದು’ ಪಡೆ​ಯ​ಲು ಆಂಧ್ರಪ್ರದೇಶ​ದ ನೆಲ್ಲೂರು ಜಿಲ್ಲೆಯ ಕೃಷ್ಣ​ಪ​ಟ್ಟಣಂ ಗ್ರಾಮ​ದಲ್ಲಿ ಮತ್ತೆ ನೂಕುನುಗ್ಗಲು ಆರಂಭವಾಗಿದೆ. ಸೋಮವಾರದಿಂದ ಔಷಧ ವಿತರಣೆಗೆ ನಿರ್ಧಾರ ಮಾಡಲಾಗಿತ್ತಾದರೂ, ಭಾನುವಾರವೇ ಭಾರೀ ಪ್ರಮಾಣದಲ್ಲಿ ಜನರು ಹಳ್ಳಿಗೆ ಆಗಮಿಸಿದ್ದರು.

ನೆರೆಯ ಜಿಲ್ಲೆಗಳಿಂದ ಭಾರೀ ಪ್ರಮಾಣದಲ್ಲಿ ಆಗಮಿಸಿದ್ದ ಜನರು ಆನಂದಯ್ಯನ ಸೋದರ ನಾಗರಾಜು ಮೂಲಕ ಔಷಧಿ ಪಡೆದುಕೊಂಡಿದ್ದಾರೆ. ಆದರೆ ಈ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ವಿಷಯ ಪೊಲೀಸರ ಕಿವಿಗೆ ತಲುಪಿದ್ದು, ಅವರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ.

ಈ ಮುನ್ನ ಮೇ 21ರಂದು ಆನಂದ​ಯ್ಯನ ಹಳ್ಳಿ ಮದ್ದು ಪಡೆ​ಯಲು ಜನರು ಕಷ್ಣ​ಪ​ಟ್ಟಣಂ ಗ್ರಾಮಕ್ಕೆ ಮುಗಿ​ಬಿ​ದ್ದಿದ್ದು, ಭಾರೀ ಸುದ್ದಿ​ಯಾ​ಗಿತ್ತು.ಆ ಬಳಿ​ಕ ಔಷ​ಧಿ​ಯನ್ನು ಪರೀ​ಕ್ಷಿ​ಸಿದ್ದ ತಜ್ಞರ ಸಮಿತಿ ಅದ​ರಿಂದ ಯಾವುದೇ ಅಡ್ಡ ಪರಿ​ಣಾಮ ಇಲ್ಲ. ಕೊರೋನಾ ರೋಗಿ​ಗಳ ಚಿಕಿ​ತ್ಸೆಗೆ ಔಷ​ಧ​ವನ್ನು ಬಳಕೆ ಮಾಡಬ​ಹುದು ಎಂದು ತಿಳಿ​ಸಿತ್ತು. ಆದರೆ, ಜನ​ರಿಗೆ ಔಷಧ ವಿತ​ರಿ​ಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ​ಬಂದಿ​ದೆ.

Follow Us:
Download App:
  • android
  • ios