ಶಾಸಕ ಗಣೇಶ್‌ ಜತೆ ರಾಜಿಗೆ ಆನಂದ್‌ ಸಿಂಗ್‌ ಒಪ್ಪಿಗೆ

ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಶಾಸಕರಾದ ಆನಂದ್‌ ಸಿಂಗ್‌ ಮತ್ತು ಜೆ.ಎನ್‌. ಗಣೇಶ್‌ ಮುಂದಾಗಿದ್ದಾರೆ. 

Anand Singh Compromise With MLA Kampli Ganesh

ಬೆಂಗಳೂರು[ಜ.22]: ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಶಾಸಕರಾದ ಆನಂದ್‌ ಸಿಂಗ್‌ ಮತ್ತು ಜೆ.ಎನ್‌. ಗಣೇಶ್‌ ಮುಂದಾಗಿರುವ ಹಿನ್ನೆಲೆಯಲ್ಲಿ ಬುಧವಾರ ವಿಚಾರಣೆಗೆ ಖುದ್ದು ಹಾಜರಿರುವಂತೆ ಇಬ್ಬರು ಶಾಸಕರಿಗೂ ಹೈಕೋರ್ಟ್‌ ಸೂಚಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಫ್‌ಐಆರ್‌ ಹಾಗೂ ದೋಷಾರೋಪ ಪಟ್ಟಿರದ್ದುಪಡಿಸುವಂತೆ ಕೋರಿ ಶಾಸಕ ಗಣೇಶ್‌ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಬಿ.ಎ.ಪಾಟೀಲ್‌ ಅವರಿದ್ದ ಏಕ ಸದಸ್ಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ವಿಜಯನಗರ ಜಿಲ್ಲೆ ಘೋಷಣೆಗೆ ಆನಂದ್ ಸಿಂಗ್ ಡೆಡ್‌ಲೈನ್? ಬಿಜೆಪಿಗೆ ಮತ್ತೆ ಟೆನ್ಶನ್...

ಆ ವೇಳೆ ಆನಂದ್‌ ಸಿಂಗ್‌ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ, ಸಿಂಗ್‌ ಅವರಿಗೆ ಪ್ರಕರಣವನ್ನು ಮುಂದುವರಿಸಲು ಇಷ್ಟವಿಲ್ಲ. ರಾಜಿ ಸಂಧಾನ ಮೂಲಕ ಪ್ರಕರಣ ಪರಿಹರಿಸಿಕೊಳ್ಳಲು ಬಯಸಿದ್ದಾರೆ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರು (ಗಣೇಶ್‌) ಹಾಗೂ ದೂರುದಾರರು (ಆನಂದ್‌ ಸಿಂಗ್‌) ಹಾಜರಿದ್ದಾರೆಯೇ ಎಂದು ಪ್ರಶ್ನಿಸಿದಾಗ ಗಣೇಶ್‌ ಪರ ವಕೀಲ ಶ್ಯಾಮ್‌ಸುಂದರ್‌ ಅವರು ‘ಹಾಜರಿಲ್ಲ. ಆದರೆ, ದೂರುದಾರರೇ ಅಫಿಡವಿಟ್‌ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

ಮಸೀದಿಗಳಿಗೆ ಬೆದರಿಕೆ ಪತ್ರ ಬರೆದ್ರಾ ಬಿಜೆಪಿ ಶಾಸಕರು?...

ಅದನ್ನು ಒಪ್ಪದ ನ್ಯಾಯಮೂರ್ತಿಗಳು, ಇಂದಿನ ವಿಚಾರಣೆಗೆ ಇಬ್ಬರೂ ಹಾಜರಿರಬೇಕೆಂದು ಸೋಮವಾರವೇ ಹೇಳಿದ್ದೆ. ಅವರ ಅನುಪಸ್ಥಿತಿಯಲ್ಲಿ ಪ್ರಮಾಣಪತ್ರ ಒಪ್ಪಲಾಗದು. ಅವರೇ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದಾರೆ ಎನ್ನುವುದಕ್ಕೆ ಖಾತ್ರಿ ಏನು? ಹೀಗಾಗಿ ಇಬ್ಬರೂ ಖುದ್ದು ಹಾಜರಾಗಲೇಬೇಕು ಎಂದು ಸ್ಪಷ್ಟವಾಗಿ ನುಡಿದು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.

Latest Videos
Follow Us:
Download App:
  • android
  • ios