ಪಾದಯಾತ್ರೆಗೆ ಕಿಮ್ಮನೆ ರತ್ನಾಕರ್ಗೂ ಆಹ್ವಾನ: ಆರ್‌ಎಂಎಂ
ಅಮೃತ ಮಹೋತ್ಸವದ ಸವಿನೆನಪಿಗಾಗಿ ಜು.28ರಂದು ಹಮ್ಮಿಕೊಂಡಿರುವ ಪಾದಯಾತ್ರೆ ಸ್ವಾತಂತ್ರ್ಯೋತ್ಸವ ಕಾಂಗ್ರೆಸ್ ನಿರ್ದೇಶನದಂತೆ ನಡೆಯುತ್ತದೆ ಎಂದು ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥ್‌ಗೌಡ ಹೇಳಿದರು
ತೀರ್ಥಹಳ್ಳಿ (ಜು.27}: ಪಟ್ಟಣದ ಮಾಜಿ ಸಿಎಂ ಕಡಿದಾಳು ಮಂಜಪ್ಪ ಸಮಾಧಿ ಸ್ಥಳದಿಂದ ಜು.28ರಂದು ಹಮ್ಮಿಕೊಂಡಿರುವ ಪಾದಯಾತ್ರೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಸವಿನೆನಪಿಗಾಗಿ ಕಾಂಗ್ರೆಸ್ ನಿರ್ದೇಶನದಂತೆ ನಡೆಯುತ್ತದೆ ಎಂದು ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥ್‌ಗೌಡ ಹೇಳಿದರು ಪಾದಯಾತ್ರೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಧ್ರುವನಾರಾಯಣ್ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು ಮತ್ತು ಇತರೆ ಸಂಘಟನೆಗಳ ಮುಖಂಡರು ಕೂಡ ಭಾಗವಹಿಸಲಿದ್ದಾರೆ.ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್(Former Minister Kimmane Ratnakar) ಅವರನ್ನೂ ಭಾಗವಹಿಸುವಂತೆ ಆಹ್ವಾನಿಸುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೈನಿಕ ಸ್ಮಾರಕಕ್ಕೆ ಬಂದ ಅಮೃತ ಮಹೋತ್ಸವ ಯಾತ್ರೆ: ವಾರ್ ಮೆಮೋರಿಯಲ್‌ಗೆ ಎನ್‌ಸಿಸಿ ಕೆಡೆಟ್‌ಗಳ ಭೇಟಿ
ಕೆಪಿಸಿಸಿ ಅಧ್ಯಕ್ಷರೂ(KPCC President) ಸೇರಿದಂತೆ ಜಿಲ್ಲೆಯ ಹಿರಿಯ ಮುಖಂಡರೊಂದಿಗೆ ಚರ್ಚಿಸಿಯೇ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯಪೂರ್ವದ ಇತಿಹಾಸದೊಂದಿಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಮಾಡಿದ ಸಾಧನೆ ಹಾಗೂ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತ್ಯಾಗ ಬಲಿದಾನದ ಮೂಲಕ ಹೋರಾಡಿದ ಮಹನೀಯರ ಕುರಿತಾಗಿ ಇಂದಿನ ಯುವಪೀಳಿಗೆಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್(Congress) ಪಕ್ಷದ ಬ್ಯಾನರ್ ಅಡಿಯಲ್ಲೇ ಪಕ್ಷ ಕಟ್ಟುವ ನಿಟ್ಟಿನಲ್ಲಿ ಈ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ. ಪಕ್ಷದ ಅಧ್ಯಕ್ಷರು ಕರೆದರೆ ಕಿಮ್ಮನೆ ರತ್ನಾಕರ್ ನಡೆಸುವ ಪಾದಯಾತ್ರೆಯಲ್ಲೂ ಭಾಗವಹಿಸುತ್ತೇನೆ ಎಂದರು.
ಕಿಮ್ಮನೆ ರತ್ನಾಕರ್ ಕೂಡ ಚುನಾವಣೆಗಾಗಿ ಕಾಂಗ್ರೆಸ್ಸಿಗೆ ಬಂದವರು. ಪಕ್ಷದಲ್ಲಿ ನಾನು ಅವರಿಗಿಂತಲೂ ಸೀನಿಯರ್ ಅಗಿದ್ದು, ಮೊದಲ ಅವಕಾಶ ನನಗೆ ಸಿಗಬೇಕಿತ್ತು. ಆದರೂ ನಾನು ಡಿಕೆಶಿ ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸುವ ಸಲುವಾಗಿ ಶ್ರಮಿಸುತ್ತಿದ್ದೇನೆ ಹೊರತು, ಟಿಕೆಟ್‌ಗಾಗಿ ಅಲ್ಲ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ಆದರೆ, ನಾನೂ ಒಬ್ಬ ಆಕಾಂಕ್ಷಿಯೇ ಆಗಿದ್ದೇನೆ. ನನ್ನ ಸಾಮರ್ಥ್ಯದ ಬಗ್ಗೆ ವಿರೋಧಿಗಳಿಗೆ ಅರಿವಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಅಮೃತ ಮಹೋತ್ಸವ ಯಾತ್ರೆಗೆ ರಾಜ್ಯಪಾಲ ಚಾಲನೆ, ಏಷ್ಯಾನೆಟ್ ನ್ಯೂಸ್ ಗ್ರೂಪ್ ಕಾರ್ಯಕ್ಕೆ ಮೆಚ್ಚುಗೆ
ಕಿಮ್ಮನೆ ರತ್ನಾಕರ್ ಹೇಳಿರುವಂತೆ ನನ್ನ ವ್ಯಕ್ತಿ ಪೂಜೆಗಾಗಿ ಈ ಪಾದಯಾತ್ರೆ ನಡೆಯುತ್ತಿಲತ್ತಿ ಅವರ ಈ ಹೇಳಿಕೆಗೂ ನನ್ನ ಧಿಕ್ಕಾರವಿದೆ. ಅವರ ಬಗ್ಗೆಯೂ ಮೊದಲ ಪತ್ರ ಬರೆಯುತ್ತಿದ್ದು, ಇನ್ನೂ ನೂರು ಪತ್ರ ಬರೆಯುವುದಕ್ಕಿದೆ. ಆದರೆ, ನೇರವಾಗಿ ಪತ್ರಿಕೆಗೆ ಬಿಡುಗಡೆ ಮಾಡುವ ಅನಾಗರಿಕ ನಾನಲ್ಲ. ನಾನೂ ಪಕ್ಷದ ಸಂಘಟನೆಗೆ ದುಡಿದ ಹಣವನ್ನು ವಿನಿಯೋಗಿಸಿದ್ದೇನೆ. ಬಗರ್‌ಹುಕುಂ, ಕಸ್ತೂರಿ ರಂಗನ್ ವರದಿ ಮತ್ತು ಶರಾವತಿ ಸಂತ್ರಸ್ತರ ಪರವಾಗಿ ಹೋರಾಟ ನಡೆಸಿದ್ದೇನೆ. ಹೀಗಾಗಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಶಿವಕುಮಾರ್, ವೈ.ಎಚ್. ನಾಗರಾಜ್, ಟಿ.ಎಲ್. ಸುಂದರೇಶ್, ಪಪಂ ಅಧ್ಯಕ್ಷೆ ಶಬನಂ, ಅಮೀರ್ ಹಮ್ಜಾ, ಎಚ್.ಬಿ.ಪದ್ಮನಾಭ್, ಕಡಿದಾಳು ತಾರಾನಾಥ್, ಬಿ.ಆರ್.ರಾಘವೇಂದ್ರ ಶೆಟ್ಟಿ, ಪಪಂ ಸದಸ್ಯರಾದ ರತ್ನಾಕರ ಶೆಟ್ಟಿ, ರಹಮತ್ ಉಲ್ಲಾ ಅಸಾದಿ, ಗೀತಾ ರಮೇಶ್, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ ಮುಂತಾದವರು ಇದ್ದರು.