ಸೈನಿಕ ಸ್ಮಾರಕಕ್ಕೆ ಬಂದ ಅಮೃತ ಮಹೋತ್ಸವ ಯಾತ್ರೆ: ವಾರ್ ಮೆಮೋರಿಯಲ್‌ಗೆ ಎನ್‌ಸಿಸಿ ಕೆಡೆಟ್‌ಗಳ ಭೇಟಿ
ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನ ‘ಅಮೃತ ಮಹೋತ್ಸವ ಯಾತ್ರೆಯು’ ಮೊದಲ ದಿನ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ತಲುಪಿದ್ದು, ಯಾತ್ರೆಯ ಭಾಗವಾಗಿರುವ ಎನ್‌ಸಿಸಿ ಕೆಡೆಟ್‌ಗಳು ನಿವೃತ್ತ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಅವರೊಂದಿಗೆ ಸೈನಿಕ ಸ್ಮಾರಕಕ್ಕೆ ಪುಷ್ಪ ನಮನ ಹಾಗೂ ಗೌರವ ವಂದನೆ ಸಮರ್ಪಿಸಿದರು.
ಬೆಂಗಳೂರು (ಜು.22): ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನ ‘ಅಮೃತ ಮಹೋತ್ಸವ ಯಾತ್ರೆಯು’ ಮೊದಲ ದಿನ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ತಲುಪಿದ್ದು, ಯಾತ್ರೆಯ ಭಾಗವಾಗಿರುವ ಎನ್‌ಸಿಸಿ ಕೆಡೆಟ್‌ಗಳು ನಿವೃತ್ತ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಅವರೊಂದಿಗೆ ಸೈನಿಕ ಸ್ಮಾರಕಕ್ಕೆ ಪುಷ್ಪ ನಮನ ಹಾಗೂ ಗೌರವ ವಂದನೆ ಸಮರ್ಪಿಸಿದರು. ರಾಜ್ಯದ ವಿವಿಧ ರಾಷ್ಟ್ರೀಯ ಸ್ಮಾರಕ ಹಾಗೂ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿರುವ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನ ‘ಇಂಡಿಯಾ @75‘ ಅಮೃತ ಮಹೋತ್ಸವ ಯಾತ್ರೆಗೆ ರಾಜಭವನದಲ್ಲಿ ಬುಧವಾರ ಬೆಳಗ್ಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಚಾಲನೆ ನೀಡಿದರು.
ಬಳಿಕ ಮೊದಲನೆಯದಾಗಿ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಭೇಟಿ ನೀಡಿದ ಎನ್‌ಸಿಸಿ ಕೆಡೆಟ್‌ಗಳು ಎರಡು ವಿಶ್ವಯುದ್ಧ ಭಾರತದ ಯೋಧರು, 1947ರ ಕಾಶ್ಮೀರ ಯುದ್ಧ, 1962ರ ಇಂಡಿಯಾ-ಚೀನಾ ಯುದ್ಧ, 1965 ಹಾಗೂ 1971ರ ಇಂಡೋ ಪಾಕಿಸ್ತಾನ, 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಬಳಿಕ ಯುದ್ಧ ಸ್ಮಾರಕದಲ್ಲಿ ಪರಮ ವೀರ ಚಕ್ರ ಪಡೆದ ಯೋಧರು, ಏರ್‌ಕ್ರ್ಯಾಫ್‌್ಟಗಳು, ಯುದ್ಧಗಳ ಬಗ್ಗೆ ಕೆಡೆಟ್‌ಗಳಿಗೆ ಮಾಹಿತಿ ನೀಡಲಾಯಿತು.
ಅಮೃತ ಮಹೋತ್ಸವ ಯಾತ್ರೆಗೆ ರಾಜ್ಯಪಾಲ ಚಾಲನೆ, ಏಷ್ಯಾನೆಟ್ ನ್ಯೂಸ್ ಗ್ರೂಪ್ ಕಾರ್ಯಕ್ಕೆ ಮೆಚ್ಚುಗೆ
ಪ್ರೇರಣೆ ನೀಡುವ ಯಾತ್ರೆ: ಎಂ.ಕೆ. ಚಂದ್ರಶೇಖರ್
ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಏರ್ ಕಮೋಡ್ ಎಂ.ಕೆ. ಚಂದ್ರಶೇಖರ್ ಅವರು, ಇದು (ಯಾತ್ರೆ) ನಿಮಗೆ ಪ್ರೇರಣೆ ನೀಡುವ ಕರೆ. ನೀವು ಯುವ, ಉತ್ಸಾಹಿ ಕೆಡೆಟ್‌ಗಳಾಗಿದ್ದು ಭವಿಷ್ಯದಲ್ಲಿ ದೇಶಕ್ಕೆ ಆಸ್ತಿಯಾಗಬಲ್ಲವರು. ನೀವು ದೇಶ ಕ್ರಮಿಸಿ ಬಂದ 75 ವರ್ಷಗಳ ಹಾದಿಯನ್ನು ಕಲ್ಪಿಸಿಕೊಳ್ಳಿ. ಬ್ರಿಟೀಷರು ನಮ್ಮನ್ನು ಆಳ್ವಿಕೆ ಮಾಡುತ್ತಿದ್ದ ಅವಧಿ ಹಾಗೂ ಸ್ವಾತಂತ್ರ್ಯ ಬಳಿಕದ ದೇಶದ 75 ವರ್ಷಗಳ ಇತಿಹಾಸ ನಿಮಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಈವರೆಗೆ ದೇಶದಲ್ಲಿ 21 ಮಂದಿ ಮಾತ್ರ ಪರಮ ವೀರ ಚಕ್ರ ಪಡೆದಿದ್ದಾರೆ. ದೇಶಕ್ಕಾಗಿ ತ್ಯಾಗ, ಬಲಿದಾನ ನೀಡುವುದು ಅತ್ಯಂತ ಮಹತ್ವದ ಕಾರ್ಯ.
ಗಂಡಾಗಲಿ, ಹೆಣ್ಣಾಗಲಿ ಲಿಂಗ ಬೇಧವಿಲ್ಲದೆ ಸಮಾನವಾಗಿ ಶಕ್ತಿ, ಸಾಮರ್ಥ್ಯವನ್ನು ಹೊರಗೆಡವಬೇಕು. ನಾನು ಯುದ್ಧ ಭೂಮಿಯಲ್ಲಿದ್ದಾಗಲೇ ಇಂತಹ ಸ್ಮಾರಕವನ್ನು ನಿರ್ಮಿಸಬೇಕು. ತನ್ಮೂಲಕ ಮಡಿದ ಸೈನಿಕರಿಗೆ ಗೌರವ ನೀಡುವ ಜತೆಗೆ ಯುವಕರಿಗೆ ಪ್ರೇರಣೆ ನೀಡಬೇಕು ಎಂದು ಯೋಚಿಸಿದ್ದೆ. ಅದು ಈ ರೀತಿಯಲ್ಲಿ ನಿಮ್ಮ ಕಣ್ಣ ಮುಂದಿದೆ ಎಂದು ತಮ್ಮ ಸೇವಾ ದಿನಗಳನ್ನು ನೆನೆದರು. ಈ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಮಾರುಕಟ್ಟೆ ಮುಖ್ಯಸ್ಥ ಕಿರಣ್ ಅಪ್ಪಚ್ಚು, ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್ (ಜೋಗಿ), ಸುವರ್ಣ ನ್ಯೂಸ್ ಸಹಾಯಕ ಸಂಪಾದಕ ವಿನೋದ್‌ಕುಮಾರ್ ಮೊದಲಾದವರು ಇದ್ದರು.
ಏಷ್ಯಾನೆಟ್ ಸಮೂಹದಿಂದ ಅಮೃತ ಮಹೋತ್ಸವ ಯಾತ್ರೆ: ರಾಜ್ಯಪಾಲರಿಂದ ಚಾಲನೆ
ರಾಷ್ಟ್ರೀಯ ಸೈನಿಕ ಸ್ಮಾರಕ ಚಂದ್ರಶೇಖರ್ ಕನಸಿನ ಕೂಸು: ರವಿ ಹೆಗಡೆ
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಏರ್ ಕಮೋಡರ್ ಎಂ.ಕೆ.ಚಂದ್ರಶೇಖರ್ ಅವರು ಭಾರತ ಕಂಡ ಅದ್ಭುತ ಯೋಧ. ಈಶಾನ್ಯ ಭಾಗದ ಅನೇಕ ವಾಯು ಗಡಿಗಳಲ್ಲಿನ ರಕ್ಷಣಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದವರು. ಅವರ ಕನಸಿನ ಕೂಸು ಈ ರಾಷ್ಟ್ರೀಯ ಸೈನಿಕ ಸ್ಮಾರಕ ಎಂದು ವಿವರಿಸಿದರು. ವಿಶೇಷ ಎಂದರೆ, ಸಿವಿಲಿಯನ್ ಸ್ಥಾಪಿಸಿದ ಮೊಟ್ಟಮೊದಲ ಸ್ಮಾರಕ ಇದು. ದೇಶದಲ್ಲೇ ಎರಡನೇ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಹಾಗೂ ದೇಶದ ಅತಿ ಎತ್ತರದ ವೀರಗಲ್ಲು ಇಲ್ಲಿದೆ ಎಂದು ಎನ್‌ಸಿಸಿ ಕೆಡೆಟ್‌ಗಳಿಗೆ ಮಾಹಿತಿ ನೀಡಿದರು.