ಉಡುಪಿ: ವ್ಯಾಪಾರದ ಜತೆ ಮಾನವೀಯ ಕಳಕಳಿ, ಇದು ಅಮ್ಮ ಪಟಾಕಿ ಮೇಳದ ವಿಶೇಷ..!
ಕಳೆದ ಮೂರು ವರ್ಷಗಳಿಂದ ಪಟಾಕಿ ಮೇಳ ಆಯೋಜಿಸುತ್ತಿರುವ ಅಮ್ಮ ಪಟಾಕಿ ಮೇಳ ನಿರಂತರವಾಗಿ ಅಶಕ್ತರಿಗೆ, ಅನಾರೋಗ್ಯ ಪೀಡಿತರ ನೆರವಿಗೆ ಬರುತ್ತಿದೆ.
ಉಡುಪಿ(ಅ.27): ದೀಪಾವಳಿ ಬಂತಂದರೆ ಪಟಾಕಿ ಹೊಡೆಯುವುದು ಮಾಮೂಲಿ. ಪಟಾಕಿ ಅಂದರೆ ದುಂದು ವೆಚ್ಚ ಅನ್ನುವ ಭಾವನೆ ಇದೆ. ಒಂದರ್ಥದಲ್ಲಿ ಅದು ನಿಜವಾದರೂ ಕೂಡ ಜನರಿಗೆ ಪಟಾಕಿ ಬಿಡುವುದರಿಂದ ಸಖತ್ ಮನರಂಜನೆ ಸಿಗುತ್ತೆ ಅನ್ನೋದು ಸುಳ್ಳಲ್ಲ. ಮನೋರಂಜನೆಯ ಜೊತೆಗೆ ಸದಾಶಯವಿದ್ದರೆ ಅದೊಂದು ಮಾದರಿ ನಡೆಯಾಗುತ್ತದೆ ಅನ್ನೋದು ಸುಳ್ಳಲ್ಲ.
ಪ್ರತಿ ವರ್ಷ ದೀಪಾವಳಿ ಬಂತೆಂದರೆ ಎಲ್ಲಾ ಊರಿನಲ್ಲೂ ಪಟಾಕಿ ಮೇಳ ಆಯೋಜಿಸಲಾಗುತ್ತದೆ. ಗ್ರಾಹಕರಿಗೆ ಥರ ಥರದ ಪಟಾಕಿಗಳು ಒಂದೇ ಸೂರಿನಡಿ ಲಭ್ಯವಾಗುವ ಉದ್ದೇಶಕ್ಕೆ ಈ ಮೇಳ ಆಯೋಜಿಸುವುದು ವಾಡಿಕೆ. ಆದರೆ ಕುಂದಾಪುರದಲ್ಲಿ ಆಯೋಜಿಸಲಾಗುವ ಪಟಾಕಿ ಮೇಳ ಮಾತ್ರ ವಿಭಿನ್ನ ವಿಶಿಷ್ಟ, ಹಾಗಂತ ಇಲ್ಲಿ ಪಟಾಕಿ ಮಾರೋದಿಲ್ವಾ ಅನ್ಕೋಬೇಡಿ ಇಲ್ಲಿ ಪಟಾಕಿ ವ್ಯವಹಾರದ ಜೊತೆ ಇರೋ ಉದ್ದೇಶ ಎಲ್ಲರಿಗೂ ಅಚ್ಚುಮೆಚ್ಚು.
ಅಸ್ತಮಾನದ ಜೊತೆ ಗ್ರಹಣ, ಸೂರ್ಯನನ್ನು ಬೀಳ್ಕೊಟ್ಟ ಕಡಲತೀರದ ಖಗೋಳಾಸಕ್ತರು
ಎಲ್ಲರೂ ಲಾಭಕ್ಕಾಗಿ, ಹಣ ಮಾಡುವ ಉದ್ದೇಶದಿಂದ ವ್ಯವಹಾರ ನಡೆಸಿದರೆ ಕುಂದಾಪುರದ ಅಮ್ಮ ಪಟಾಕಿ ಮೇಳ ಮಾತ್ರ ಭಿನ್ನವಾಗಿದೆ. ಪಟಾಕಿ ಮೇಳ ಮೂಲಕ ಅಶಕ್ತರಿಗೆ ನೆರವು ನೀಡುವ ಕೆಲಸ ಅಮ್ಮ ಪಟಾಕಿ ಮೇಳ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಪಟಾಕಿ ಮೇಳ ಆಯೋಜಿಸುತ್ತಿರುವ ಅಮ್ಮ ಪಟಾಕಿ ಮೇಳ ನಿರಂತರವಾಗಿ ಅಶಕ್ತರಿಗೆ, ಅನಾರೋಗ್ಯ ಪೀಡಿತರ ನೆರವಿಗೆ ಬರುತ್ತಿದೆ. ಪಟಾಕಿ ವ್ಯಾಪಾರದಿಂದ ಬರುವ ಒಂದು ಪಾಲನ್ನು ಸಮಾಜ ಸೇವೆ ಅಮ್ಮ ಪಟಾಕಿ ಮೇಳ ತೆಗೆದಿಡುತ್ತಿರುವುದು ಜನರ ಆಕರ್ಷಣೆಯ ಕಾರಣವಾಗಿದೆ.
ಕುಂದಾಪುರ ಆಸುಪಾಸಿನ ನಾಲ್ಕೈದು ಜನ ಪಾಲುದಾರರು ಸೇರಿ ಮೂರು ವರ್ಷಗಳಿಂದ ಈ ಪಟಾಕಿ ಮೇಳ ನಡೆಸುತ್ತಿದ್ದಾರೆ. ಉತ್ತಮ ಗುಣಮಟ್ಟದ ಪಟಾಕಿ ನೀಡುವ ಮೂಲಕ ಹೆಸರು ಮಾಡಿರುವ ಅಮ್ಮ ಪಟಾಕಿ ಮೇಳ ಸಮಾಜ ಸೇವೆಯಲ್ಲೂ ಹೆಸರು ಮಾಡಿದೆ.
ಉಡುಪಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚು ಹರಿಸಿದ ಕರಾವಳಿಯ ಯಕ್ಷಗಾನ
ಪ್ರತಿ ವರ್ಷ ಅನಾರೋಗ್ಯ ಪೀಡಿತ, ಅಶಕ್ತರನ್ನು ಗುರುತಿಸಿ ಸಹಾಯಧನ ವಿತರಿಸುವ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಈ ಪಟಾಕಿ ಮೇಳದ ಈ ಯೋಜನೆಗೆ ಜನರ ಉತ್ತಮ ಬೆಂಬಲವು ದೊರಕುತ್ತಿದ್ದು, ನಾವು ಖರೀದಿಸುವ ಪಟಾಕಿ ಮೂಲಕವಾದರು ಸಮಾಜ ಸೇವೆಯಾಗಲಿ ಎನ್ನುವ ಉದ್ದೇಶ ಕ್ಕೆ ಸಾಕಷ್ಟು ಮಂದಿ ಇಲ್ಲಿಯೇ ಪಟಾಕಿ ಖರೀದಿಸುತ್ತಿರುವುದು ವಿಶೇಷ.
ಒಟ್ಟಾರೆಯಾಗಿ ಕುಂದಾಪುರದ ನೆಹರು ಮೈದಾನದಲ್ಲಿರುವ ಅಮ್ಮ ಪಟಾಕಿ ಮೇಳ ದೀಪಾವಳಿ ಪಟಾಕಿ ಜೊತೆ ಸಮಾಜ ಸೇವೆಯೂ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ. ಮುಂದೆಯೂ ಇಂತಹ ಜನೋಪಯೋಗಿ ಕಾರ್ಯಗಳು ನಡೆಯಲಿ ಎನ್ನುವುದು ನಮ್ಮ ಆಶಯ.