ಬೆಳಗಾವಿ (ಆ.24) :  ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ತಪ್ಪಲು ಅಳಿಯ ಅಂಬಿರಾಯ ಕಾರಣವಾದರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

ಬಿಜೆಪಿ ಸರಕಾರದಲ್ಲಿ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ಕೊಡಲಿಸಲು ಮುಂದಾಗಿ, ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎನ್ನುವ ಆರೋಪ ರಮೇಶ್ ಜಾರಕಿಹೊಳಿಗೆ ಎದುರಾಗಿದೆ. ಈ ಮಾತು ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 

ಬಾಲಚಂದ್ರ ಜಾರಕಿಹೊಳಿ ಹಾಗೂ ಅಂಬಿರಾಯ ಪಾಟೀಲ್ ನಡುವೆ ವೈಮನಸ್ಸು ಇದ್ದು ಇದೇ ಕಾರಣದಿಂದ  ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪುವಂತೆ ರಮೇಶ್ ಜಾರಕಿಹೊಳಿ ಯತ್ನಿಸಿದರಾ ಎನ್ನುವ  ಪ್ರಶ್ನೆ ಎದ್ದಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೊದಲಿನಿಂದಲೂ ಅಂಬಿರಾಯ ಪಾಟೀಲ್ ಹೇಳುವುದನ್ನೇ ಕೇಳಿಕೊಂಡು ಬಂದಿದ್ದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಲಕ್ಷ್ಮಣ್ ಸವದಿಯನ್ನು ಸಚಿವ ಸ್ಥಾನದಲ್ಲಿ ಕೂರಿಸಲು ಯತ್ನಿಸಿದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಅಂಬಿರಾಯನೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ.