Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಗಣಿಗಾರಿಗೆ ವಿರೋಧಿಸಿ ಅಂಬೇಡ್ಕರ್ ಸೇನೆ ಬೃಹತ್ ಪ್ರತಿಭಟನೆಗೆ ಪ್ಲಾನ್

ಕಾನೂನು ಬಾಹೀರ ಹಾಗೂ ಅಪಾಯಕಾರಿ ಗಣಿಗಾರಿಕೆ ಚಟುವಟಿಕೆಯನ್ನು ವಿರೋಧಿಸಿ ಫೆಬ್ರವರಿ 9 ರಂದು ಚಿತ್ರದುರ್ಗ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ  ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

Ambedkar Sena plans a massive protest against mining in Chitradurga gow
Author
First Published Jan 24, 2023, 4:16 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.24): ಕಾನೂನು ಬಾಹೀರ ಹಾಗೂ ಅಪಾಯಕಾರಿ ಗಣಿಗಾರಿಕೆ ಚಟುವಟಿಕೆಯನ್ನು ವಿರೋಧಿಸಿ ಫೆಬ್ರವರಿ 9 ರಂದು ಚಿತ್ರದುರ್ಗ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಡಾ.ಪಿ.ಮೂರ್ತಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೀಮಸಮುದ್ರದಲ್ಲಿ ಗಣಿಗಾರಿಕೆ ನಡೆಸುತ್ತಿರುವ ವೇದಾಂತ ಕಂಪನಿ ಬಹಳಷ್ಟು ಅಕ್ರಮವನ್ನು ಎಸಗಿದ್ದಾರೆ. ಇವರು ನಡೆಸುತ್ತಿರುವ ಗಣಿಗಾರಿಕೆಗೆ ಜನರು, ದನಕರುಗಳು ಜೀವಿಸುವುದೇ ಕಷ್ಟಕರವಾಗಿದೆ ಎಂದರು.

ಕವರ್‌ ಸ್ಟೋರಿ ಬಿಗ್ ಇಂಪ್ಯಾಕ್ಟ್: ಅಕ್ರಮ ಪೆಬಲ್ಸ್ ಮರಳು ಗಣಿಗಾರಿಕೆಗೆ ಬ್ರೇಕ್

ಅಲ್ಲದೆ ರಸ್ತೆಯಲ್ಲಿ ಓಡಾಡು ಲಾರಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಧೂಳು ಬರುತ್ತಿದೆ. ಇದರಿಂದ ಕುಡಿಯುವ ನೀರು, ಆಹಾರ ಪದಾರ್ಥಗಳು ಮಲಿನವಾಗಿ ಜನರು ದಿನೇ ದಿನೇ ಅನಾರೋಗ್ಯಕ್ಕೆ ಓಳಗಾಗುತ್ತಿದ್ದಾರೆ. ಇವರ ನಡೆಸುತ್ತಿರು ಗಣಿಗಾರಿಕೆ ಕಾನೂನಿನ ಎಲ್ಲೆ ಮೀರಿ ಹೋಗಿದೆ ಎಂದರು.  ಈ ಬಗ್ಗೆ ನಮ್ಮ ಸಂಘಟನೆ ಹೋರಾಟ ಮಾಡಲು ಮುಂದಾದರೆ ನ್ಯಾಯಾಲಯದಿಂದ ನಿರ್ಭಂದ ಆದೇಶ ತರುತ್ತಾರೆ. ಅದರೂ ಇದಕ್ಕೆ ನಾವು ಬಗ್ಗುವುದಿಲ್ಲ. ಇವರ ಅಕ್ರಮವನ್ನು ನೋಡಿಕೊಂಡು ಸಂಘಟನೆ ಸುಮ್ಮನೆ ಕೂರುವುದಿಲ್ಲ. ನಮ್ಮ ಹೋರಾಟ ಜನಪರವಾಗಿದೆ. ಆದ್ದರಿಂದಲೇ ಬರುವ ಫೆಬ್ರವರಿ 9 ರಂದು ಚಿತ್ರದುರ್ಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ರಾಲಿ ಮೂಲಕ ಹೊರಟು ಬೊಮ್ಮನಹಳ್ಳಿ ಗ್ರಾಮದ ದುರ್ಗಾಂಭಿಕ ದೇವಸ್ಥಾನದ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೆವೆ ಎಂದರು.

ತುಂಗಾಭದ್ರ ನದಿಯ ಒಡಲು ಬರಿದು ಮಾಡುವ ಮಾಫಿಯಾ: ಅಕ್ರಮ ಮರಳು ಗಣಿಗಾರಿಕೆ ದಂಧೆ

ಕಳೆದ 2019 ರಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ಧೇಶ್ವರ್ ಅವರ ಪತ್ನಿ ಶ್ರೀಮತಿ ಗಾಯಿತ್ರಿ ಅವರು ತಮ್ಮ ನೇತೃತ್ವದಲ್ಲಿ ಗಣಿಗಾರಿಕೆ ಲಾರಿಗಳನ್ನು ನಿಲ್ಲಿಸಬೇಕೆಂದು ಪ್ರತಿಭಟಿಸಿ, ಇದೀಗ ತಮ್ಮ ನೂರಾರು ಲಾರಿಗಳ ಅದಿರು ಸಾಗಿಸುವ ಅವಕಾಶ ಪಡೆದು ಜನಸಾಮಾನ್ಯರಿಗೆ ಮಾರಕವಾಗಿದ್ದಾರೆ ಇಂತಹವರ ವಿರುದ್ದ ನಮ್ಮ ಅಂಬೇಡ್ಜರ್ ಸೇನೆ ನಿರಂತರ ಹೋರಾಟ ಮಾಡಲಿದೆ ಎಂದು ಹೇಳಿದ ಅವರು, ಧರಣಿ ಸತ್ಯಾಗ್ರಹ ಕ್ಕೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗಣಿಬಾಧಿತ ಗ್ರಾಮಗಲಕ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಹೊಳೆಯಪ್ಪ, ವಕೀಕರಾದ ಪ್ರೋ.ಹರಿರಾಮ್, ವಿಶ್ವನಾಥ್ ಪಟ್ಟಿ, ನರಸಿಂಹ ಮೂರ್ತಿ, ಲಿಂಗರಾಜು, ಶ್ರೀನಿವಾಸ್, ಶಶಿಕುಮಾರ್, ಸತೀಶ್ ನಾರಾಯಣ್ ಸೇರಿದಂತೆ ಇತರರು ಭಾಗವಹಿಸಿದ್ದರು.

Follow Us:
Download App:
  • android
  • ios