ಗಾಂಜಾ ಸೇವಿಸಿದ್ರೆ 2 ಲಕ್ಷ ಸಂಬಳ: ಕಂಪನಿಯ ವಿಚಿತ್ರ ಆಫರ್!
ಗಾಂಜಾ ಸೇವೆನಗೆ 2 ಲಕ್ಷ ಸಂಬಳ ಕೊಡುವ ಕಂಪನಿ| ಮರಿಜುವಾನಾ ಹಾಗೂ ಉಪ ಉತ್ಪನ್ನಗಳ ಸೇವೆನೆಗೆ ತಿಂಗಳಿಗೆ 2 ಲಕ್ಷ ವೇತನ| ಅಮೆರಿಕನ್ ಮರಿಜುವಾನಾ ಎಂಬ ಆನ್’ಲೈನ್ ಸಂಶೋಧನಾ ಸಂಸ್ಥೆ| ಸಂಶೋಧನಾ ಕ್ರಮದ ಭಾಗವಾಗಿ ಮರಿಜುವಾನಾ ಸೇವನೆ| ತಿಂಗಳಿಗೆ ಬರೋಬ್ಬರಿ 3,000 ಡಾಲರ್(2,15,000 ರೂ.)ನೀಡುವುದಾಗಿ ಘೋಷಣೆ| ಪ್ರಕಟಣೆ ಹೊರಡಿಸಿದ ಗಂಟೆಗಳಲ್ಲೇ ಸುಮಾರು 3,000 ಅಪ್ಲಿಕೇಶನ್| ಗಾಂಜಾ ಸೇವನೆಯ ಪರಿಣಾಮಗಳ ಕುರಿತು ವಿವರಣೆ ನೀಡುವ ಉದ್ಯೋಗ|
ನ್ಯೂಯಾರ್ಕ್(ನ.21): ಕಷ್ಟ ಪಟ್ಟು ದುಡಿದವನಿಗೆ ಸರಿಯಾದ ಸಂಬಳ ಸಿಗದ ಕಾಲವಿದು. ಬದುಕಿಗಾಗಿ ಒಂದು ಉದ್ಯೋಗದ ಹುಡುಕಾಟದಲ್ಲಿರುವ ಯುವ ಮನಸ್ಸುಗಳು, ತಮ್ಮ ಶಕ್ತಿ ಸಾಮರ್ಥ್ಯವನ್ನು ಧಾರೆ ಎರೆಯಲು ಸಜ್ಜಾಗಿ ಕುಳಿತಿವೆ.
ಆದರೆ ನಿರುದ್ಯೋಗ ಎಂಬ ಜಾಗತಿಕ ಸಮಸ್ಯೆ ಯುವ ಪೀಳಿಗೆಯ ಶತ್ರುವಾಗಿ ಪರಿಣಮಿಸಿದೆ. ಎಲ್ಲಿಯಾದರೂ ಸರಿ ಕೆಲಸವೆಂಬ ಊರುಗೋಲು ಸಿಕ್ಕರೆ ಸಾಕು ಎಂದು ಪರಿತಪಿಸುತ್ತಿದೆ ಮನಸ್ಸು.
ಜಗತ್ತಿನ ಅತಿ ಯಶಸ್ವಿ ವ್ಯಕ್ತಿಗಳ ಉದ್ಯೋಗ ಸಂಬಂಧಿ ಅಭ್ಯಾಸಗಳಿವು
ಆದರೆ ಅಮೆರಿಕದ ಕಂಪನಿಯೊಂದು ಮರಿಜುವಾನಾ(ಗಾಂಜಾದ ವೈಜ್ಞಾನಿಕ ಹೆಸರು) ಸೇವಿಸುವವರಿಗೆ ತಿಂಗಳಿಗೆ ಎರಡು ಲಕ್ಷ ರೂ. ವೇತನ ನೀಡುವುದಾಗಿ ಘೋಷಿಸಿದೆ.
ಅಮೆರಿಕನ್ ಮರಿಜುವಾನಾ ಎಂಬ ಆನ್’ಲೈನ್ ಸಂಶೋಧನಾ ಸಂಸ್ಥೆ ಮರಿಜುವಾನಾ ಹಾಗೂ ದರ ಉಪ ಉತ್ಪನ್ನಗಳ ಸೇವನೆಗೆಂದೇ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ.
ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಈ ದೇಶಗಳು ದುಡ್ಡು ಕೊಟ್ಟು ನಿಮ್ಮನ್ನು ಕರೆಸಿಕೊಳ್ಳುತ್ತವೆ!
ಸಂಶೋಧನಾ ಕ್ರಮದ ಭಾಗವಾಗಿ ಮರಿಜುವಾನಾ ಮತ್ತು ಅದರ ಉಪ ಉತ್ಪನ್ನಗಳನ್ನು ಸೇವಿಸಿ ಅದರಿಂದಾಗುವ ಪರಿಣಾಮಗಳ ಕುರಿತು ವಿವರಸಿವುದೇ ಉದ್ಯೋಗಿಯ ಕೆಲಸ.
ಈ ಕೆಲಸಕ್ಕಾಗಿ ಅಮೆರಿಕನ್ ಮರಿಜುವಾನಾ ತಿಂಗಳಿಗೆ ಬರೋಬ್ಬರಿ 3,000 ಡಾಲರ್(2,15,000 ರೂ.)ನೀಡುವುದಾಗಿ ಘೋಷಿಸಿದೆ. ಗಾಂಜಾ, ವೇಪ್ಸ್, ಎಡಿಬ್ಲಸ್ ಹಾಗೂ ಸಿಬಿಡಿ ಸೇವೆನೆ ಮಾಡಿ ಅದರ ಪರಿಣಾಮಗಳ ಕುರಿತು ವಿವರಣೆ ನೀಡಬೇಕು ಎಂದು ಕಂಪನಿ ತಿಳಿಸಿದೆ.
ಅರ್ಹತೆ:
ಆಕಾಂಕ್ಷಿ ಗಾಂಜಾ ಸೇವನೆ ಕಾನೂನುಬದ್ಧವಾಗಿರುವ ಅಮೆರಿಕ ಹಾಗೂ ಕೆನಾಡಾದ ಪ್ರದೇಶದ ನಿವಾಸಿಯಾಗಿರಬೇಕು.
ಮರಿಜುವಾನಾ ಹಾಗೂ ಅದರ ಉಪ ಉತ್ಪನ್ನಗಳನ್ನು ಸೇವಿಸಿ ಅದರ ಪರಿಣಾಮಗಳ ಕುರಿತು ನೈಜ ವಿವರಣೆ ನೀಡಬೇಕು.
2019 ರ ಡಿಮ್ಯಾಂಡಿಂಗ್ ಕೆಲಸಗಳು ಯಾವುವು ಗೊತ್ತಾ?
ಅಮೆರಿಕನ್ ಮರಿಜುವಾನಾ ಈ ಪ್ರಕಟಣೆ ಹೊರಡಿಸಿದ ಗಂಟೆಗಳಲ್ಲೇ ಸುಮಾರು 3,000 ಅಪ್ಲಿಕೇಶನ್ ಬಂದಿದ್ದು, ಸಂದರ್ಶನದ ಬಳಿಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಮ್ಯಾಗಜೀನ್ ಪ್ರಧಾನ ಸಂಪಾದಕ ಡ್ವೈಟ್ ಕೆ ಬ್ಲೇಕ್ ಸ್ಪಷ್ಟಪಡಿಸಿದ್ದಾರೆ.