ಆನೆಗೊಂದಿಯಲ್ಲಿ ರಾಯರಮಠ, ಉತ್ತರಾದಿ ಮಠದ ಅರ್ಚಕರ ಜಗಳ

*  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆನೆಗೊಂದಿ 
*  ಎರಡೂ ಕಡೆಯವರು ಪರಸ್ಪರ ವಾಗ್ವಾದ 
*  ಜು.29ರಂದು ಇದ್ದ ಜಯತೀರ್ಥರ ಉತ್ತರಾರಾಧನೆ 

Altercation Between Rayara Matha and Uttaradhi Matha's Priests at Gangavati in Koppal grg

ಗಂಗಾವತಿ(ಆ.02):  ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನಗಡ್ಡೆಯಲ್ಲಿ ಜಯತೀರ್ಥರ ಉತ್ತರಾರಾಧನೆ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠ ಮತ್ತು ಉತ್ತರಾದಿ ಮಠದ ಅರ್ಚಕರ ಮಧ್ಯೆ ವಾಗ್ವಾದ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಜು.29ರಂದು ಜಯತೀರ್ಥರ ಉತ್ತರಾರಾಧನೆ ಇತ್ತು. ರಾಘವೇಂದ್ರ ಸ್ವಾಮಿಗಳ ಮಠದ ಅರ್ಚಕರು ಜಯತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ ಸಂದರ್ಭದಲ್ಲಿ ಉತ್ತರಾದಿ ಮಠದ ಅರ್ಚಕರು ಅಡ್ಡಿಪಡಿಸಿ ಆಕ್ಷೇಪ ಎತ್ತಿದರು. ಇದರಿಂದ ಎರಡೂ ಕಡೆಯವರು ಪರಸ್ಪರ ವಾಗ್ವಾದ ನಡೆಸಿದರು. ಆದರೂ ರಾಘವೇಂದ್ರ ಸ್ವಾಮಿಗಳ ಮಠದವರು ಜಯತೀರ್ಥರ ವೃಂದಾವನಕ್ಕೆ ಪೂಜಾ ಕಾರ್ಯಕ್ರಮ ನಡೆಸಿದರು. 

ಗಂಗಾವತಿ: ಆನೆಗೊಂದಿಯಲ್ಲಿ ಶ್ರೀನಿವಾಸ ತೀರ್ಥರ ಆರಾಧನೆ, ಭಕ್ತರಿಂದ ಪೂಜೆ

ನವ ವೃಂದಾವನಗಡ್ಡೆಯಲ್ಲಿರುವ 9 ಯತಿವರೇಣ್ಯರ ವೃಂದಾವನಗಳಲ್ಲಿ ಜಯತೀರ್ಥರ ವೃಂದಾವನವೂ ಇದೆ ಎಂಬುದು ರಾಘವೇಂದ್ರ ಸ್ವಾಮಿಗಳ ಮಠದ ವಾದ. ಆದರೆ ನವವೃಂದಾವನದಲ್ಲಿರೋದು ರಘುವರ್ಯರ ವೃಂದಾವನ. ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿದೆ ಎಂದು ಉತ್ತರಾದಿ ಮಠದ ಅರ್ಚಕ ಆನಂದತೀರ್ಥಚಾರ್‌ ವಾಗ್ವಾದ ಮಾಡಿದ್ದಾರೆ. ಇದನ್ನು ರಾಘವೇಂದ್ರ ಸ್ವಾಮಿಗಳ ಮಠದವರು ವಿರೋಧಿಸಿದ್ದಾರೆ.
 

Latest Videos
Follow Us:
Download App:
  • android
  • ios