Asianet Suvarna News Asianet Suvarna News

ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ

ಗುಂಪು ಗುಂಪಾಗಿ ಪ್ರವೇಶಿಸಿ ಮತದಾನಕ್ಕೆ ಸಾಲಿನಲ್ಲಿದ್ದ ಮತದಾನರಾರನ್ನು ಭೇಟಿ ಮಾಡಿ ಮತಯಾಚಿಸಿದಸಿದ ಶಾಸಕಿ ರೂಪಾಲಿ ನಾಯ್ಕ ಮತ್ತು ಬಿಜೆಪಿ ಕಾರ್ಯಕರ್ತರು| ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕಪಡಿಸಿದ ಹಿನ್ನೆಲೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ| 

Altercation Between Congress BJP Activist in Ankola in Uttara Kannada District grg
Author
Bengaluru, First Published Oct 29, 2020, 3:33 PM IST

ಅಂಕೋಲಾ(ಅ.29):ಇಲ್ಲಿಯ ತಹಸೀಲ್ದಾರ್‌ ಕಚೇಯಲ್ಲಿ ಸ್ಥಾಪಿಸಲಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತಗಟ್ಟೆಯ 200 ಮೀಟರ್‌ ಅಂತರದೊಳಗೆ ಶಾಸಕಿ ರೂಪಾಲಿ ನಾಯ್ಕ ಮತ್ತು ಬಿಜೆಪಿ ಕಾರ್ಯಕರ್ತರು ಗುಂಪು ಗುಂಪಾಗಿ ಪ್ರವೇಶಿಸಿ ಮತದಾನಕ್ಕೆ ಸಾಲಿನಲ್ಲಿದ್ದ ಮತದಾನರಾರನ್ನು ಭೇಟಿ ಮಾಡಿ ಮತಯಾಚಿಸಿದರು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕಪಡಿಸಿದ ಹಿನ್ನೆಲೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ತಹಸೀಲ್ದಾರ್‌ ಕಚೇರಿಗೆ ಆಗಮಿಸಿದ ಶಾಸಕಿ ರೂಪಾಲಿ ನಾಯ್ಕ ಹಾಗೂ 10ಕ್ಕೂ ಅಧಿಕ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು, ಮತದಾರರನ್ನು ಮಾತನಾಡಿಸಿದ್ದಾರೆ. ಬಳಿಕ ತಹಸೀಲ್ದಾರ್‌ ಕಚೇರಿಯ ಆವರಣದಿಂದ ಹೊರಬಂದ ಶಾಸಕಿ ಹಾಗೂ ಸಂಗಡಿಗರು, ಹೊರಭಾಗದಲ್ಲಿ ಗುಂಪು ಕಟ್ಟಿನಿಂತಿದ್ದರು. ಇದನ್ನು ಕಂಡ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಗಾಂವ್ಕರ್‌, ಅಧಿಕಾರಿಗಳು ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಇಬ್ಬಗೆ ನೀತಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರೋನಾ ಪಾಸಿಟಿವ್‌ ಕೇಸ್‌ ರಾಜ್ಯದಲ್ಲೇ ಉತ್ತರ ಕನ್ನಡದಲ್ಲಿ ಅತಿ ಕಡಿಮೆ

ಹೀಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ವಾಗ್ವಾದಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಮೊಬೈಲ್‌ನಲ್ಲಿ ವಿಡಿಯೋ ಮಾಡಿದನ್ನು ಗಮನಿಸಿದ ಶಾಸಕಿ ಆತನನ್ನು ತರಾಟೆಗೆ ತೆಗದುಕೊಳ್ಳಲು ಮುಂದಾದರು. ಅವನ ಬಳಿ ಇದ್ದ ಮೊಬೈಲ್‌ ಕಸಿದುಕೊಳ್ಳಲು ಮುಂದಾದಾಗ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಮತಗಟ್ಟೆಯ ಹೊರಗೆ ಕೆಲಕಾಲ ಗೊಂದಲಮಯ ವಾತಾವರಣ ಸೃಷ್ಟಿಯಾಗುತ್ತಲೇ ಸ್ಥಳಕ್ಕೆ ಸಹಾಯಕ ಆಯುಕ್ತ ಅಜೀತ ಎಂ. ಮತ್ತು ಸಿಪಿಐ ಕೃಷ್ಣಾನಂದ ನಾಯ್ಕ ಆಗಮಿಸಿ ಎರಡು ಪಕ್ಷದವರನ್ನು ಅಲ್ಲಿಂದ ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
 

Follow Us:
Download App:
  • android
  • ios