ಕೊರೋನಾ ಪಾಸಿಟಿವ್‌ ಕೇಸ್‌ ರಾಜ್ಯದಲ್ಲೇ ಉತ್ತರ ಕನ್ನಡದಲ್ಲಿ ಅತಿ ಕಡಿಮೆ

ಉತ್ತರ ಕನ್ನಡ ಜಿಲ್ಲೆಯ ಸಾಧನೆ ಬಗ್ಗೆ ಟ್ವೀಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ಡಾ. ಸುಧಾಕರ್‌| ಹಾವೇರಿ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳು ನಿಗದಿತ ಗುರಿಗಿಂತ ಹೆಚ್ಚಿನ ಕೋವಿಡ್‌ ಪರೀಕ್ಷೆ ನಡೆಸುತ್ತಿವೆ| ಹಾವೇರಿಯಲ್ಲಿ ಪಾಸಿಟಿವ್‌ ಪ್ರಮಾಣ ಶೇ. 0.3, ಉತ್ತರ ಕನ್ನಡದಲ್ಲಿ ಶೇ. 0.2 ಹಾಗೂ ಧಾರವಾಡದಲ್ಲಿ ಶೇ. 1ರಷ್ಟು ಪಾಸಿಟಿವ್‌ ಕೇಸ್‌ಗಳು ದಾಖಲು| 

Lowest Corona Positive Cases Uttara Kannada District grg

ಕಾರವಾರ(ಅ.29): ಕೋವಿಡ್‌- 19 ಪಾಸಿಟಿವ್‌ ಪ್ರಮಾಣ (ಶೇ.0.2) ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕಡಿಮೆ ಇದ್ದು, ಆರೋಗ್ಯ ಸಚಿವರು ಜಿಲ್ಲೆಯ ಸಾಧನೆಯನ್ನು ಟ್ವೀಟ್‌ ಮಾಡಿ ಪ್ರಶಂಸಿಸಿದ್ದಾರೆ.

ರಾಜ್ಯದ ಹಾವೇರಿ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳು ನಿಗದಿತ ಗುರಿಗಿಂತ ಹೆಚ್ಚಿನ ಕೋವಿಡ್‌ ಪರೀಕ್ಷೆಗಳನ್ನು ನಡೆಸುತ್ತಿವೆ. ಹಾವೇರಿಯಲ್ಲಿ ಪಾಸಿಟಿವ್‌ ಪ್ರಮಾಣ ಶೇ. 0.3, ಉತ್ತರಕನ್ನಡದಲ್ಲಿ ಶೇ. 0.2 ಹಾಗೂ ಧಾರವಾಡದಲ್ಲಿ ಶೇ. 1ರಷ್ಟು ಪಾಸಿಟಿವ್‌ ಕೇಸ್‌ಗಳು ದಾಖಲಾಗಿವೆ.

 

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮಾಚ್‌ರ್‍ ತಿಂಗಳಿನಿಂದಲೆ ಕೊರೋನಾ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದು, ಕ್ವಾರಂಟೈನ್‌ಗೆ ಒಳಪಡಿಸುವುದು ನಿರಂತರವಾಗಿ ನಡೆಯುತ್ತಿದೆ. ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಸೋಂಕಿತರು ಗುಣಮುಖವಾಗುತ್ತಿರುವ ಪ್ರಮಾಣವೂ ಉಳಿದ ಜಿಲ್ಲೆಗಳಿಗಿಂತ ಹೆಚ್ಚಿದೆ. ಜತೆಗೆ ಮರಣ ಪ್ರಮಾಣ ಉಳಿದ ಜಿಲ್ಲೆಗಳಿಗಿಂತ ಕಡಿಮೆ ಇದೆ.

ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್ ಧರಿಸಬೇಕಿಲ್ಲ: ಸುಧಾಕರ್ ಸ್ಪಷ್ಟನೆ

ಈಗ ಲಾಕ್‌ಡೌನ್‌ ಸಡಿಲಗೊಂಡಿದೆ. ಆದರೆ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಮಾಸ್ಕ್‌ ಧರಿಸದೆ ಇರುವವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ. ಎಲ್ಲೆಡೆ ಅಲ್ಲದಿದ್ದರೂ ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲಿಸಲಾಗುತ್ತದೆ. ಈ ಎಲ್ಲ ಅಂಶಗಳು ಪಾಸಿಟಿವ್‌ ದರ ಕಡಿಮೆಯಾಗಲು ಕಾರಣವಾಗಿದೆ.

ಆರೋಗ್ಯ ಇಲಾಖೆ ಹಾಗೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿ, ಕೊರೋನಾ ವಾರಿಯರ್ಸ್‌ ಹೀಗೆ ಎಲ್ಲರ ಸಂಘಟಿತ ಪ್ರಯತ್ನದಿಂದ ಪಾಸಿಟಿವ್‌ ರೇಟ್‌ ಕಡಿಮೆಯಾಗಿದೆ. ಎಲ್ಲರೂ ಅಭಿನಂದನಾರ್ಹರು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್‌ ಕೆ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios