15 ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿ: ಶ್ರೀನಿವಾಸ್‌

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 15 ಕ್ಷೇತ್ರಗಳಲ್ಲಿ ಪ್ರವರ್ಗ-1ರ ಜಾತಿಗಳ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಡುವಂತೆ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್‌ ಒತ್ತಾಯಿಸಿದರು.

Allow to contest in 15 constituencies: Srinivas snr

 ತುಮಕೂರು : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 15 ಕ್ಷೇತ್ರಗಳಲ್ಲಿ ಪ್ರವರ್ಗ-1ರ ಜಾತಿಗಳ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಡುವಂತೆ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್‌ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್‌ ಪಕ್ಷದಿಂದ 8, ಬಿಜೆಪಿಯಿಂದ 6, ಜೆಡಿಎಸ್‌ನಿಂದ 3 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸಾಹ ತೋರಿದ್ದು ರಾಜ್ಯದಲ್ಲಿ ಪ್ರವರ್ಗ -1ರಡಿಯಲ್ಲಿ ಬರುವ ಸಮಾಜಗಳು ಸುಮಾರು 15 ಸಾವಿರದಿಂದ 1 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದು, 65 ರಿಂದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಲು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ನಮ್ಮ ಒಕ್ಕೂಟದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ 3 ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಇದರಂತೆ ನಮ್ಮ ಒಕ್ಕೂಟದ ಅಭ್ಯರ್ಥಿಗಳಿಗೆ ಆಧ್ಯತೆ ನೀಡುವ ಪಕ್ಷಗಳಿಗೆ ನಮ್ಮ ಬೆಂಬಲ ಮತ್ತು ಸಹಕಾರ ಸಂಪೂರ್ಣವಾಗಿರುತ್ತದೆ ಎಂದರು.

ಯಾವ ರಾಜಕೀಯ ಪಕ್ಷ ನಮಗೆ ಅವಕಾಶ ನೀಡುವುದಿಲ್ಲವೊ ಅಂತಹ ಪಕ್ಷದ ವಿರುದ್ಧ ಕೆಲಸ ಮಾಡುವುದಾಗಿ ತಿಳಿಸಿದ ಅವರು, ಪ್ರಮುಖ ಮೂರು ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯ ವನ್ನು ಸೇರಿಸುವಂತೆ ಒತ್ತಾಯಿಸಿದರು.

ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಎಚ್‌.ವಿ.ಬಂಡಿ, ಪ್ರಧಾನ ಕಾರ್ಯದರ್ಶಿ ಎ.ವಿ.ಲೋಕೇಶಪ್ಪ, ಕಾರ್ಯದರ್ಶಿ ನರಸಿಂಹಮೂರ್ತಿ, ಸಂಘಟನಾ ಕಾರ್ಯ ದರ್ಶಿ ಎಂ.ಎ.ಶ್ರೀನಿವಾಸ್‌, ಮುಖಂಡರಾದ ಧನಿಯಾಕುಮಾರ್‌ ಮತ್ತಿತರರು ಇದ್ದರು.

ಯುವ ನಾಯಕರ ತಂಡ ರಚನೆ

ಚಿಕ್ಕಮಗಳೂರು (ಮಾ.02): ಇನ್ನು ಐದು ವರ್ಷ ಹೋದರೆ ನಾವೆಲ್ಲ 70 ವರ್ಷ​ದ ಗಡಿಗೆ ಬರುತ್ತೇವೆ. 2028ರ ಚುನಾವಣೆ ವೇಳೆ ಜೆಡಿಎಸ್‌ ಯುವ ನಾಯಕತ್ವದ ತಂಡ ರಚನೆಯಾಗಲಿದೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2028ರಲ್ಲಿ ಹೊಸ ನಾಯಕತ್ವಕ್ಕೆ ಉತ್ತಮ ಕುಟುಂಬದಿಂದ ಬಂದಿರುವ, ಒಳ್ಳೆಯ ಜನ​ಪರ ಕೆಲಸ ಮಾಡುವಂಥ ಯುವಕರನ್ನು ಆಯ್ಕೆ ಮಾಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದರು. ವಿಧಾನಪರಿಷತ್‌ ಮಾಜಿ ಉಪ ಸಭಾಪತಿ, ದಿವಂಗತ ಎಸ್‌.ಎಲ್‌.ಧರ್ಮೇಗೌಡರ ಪುತ್ರನಿಗೆ ಈ ಬಾರಿ ಟಿಕೆಟ್‌ ನೀಡುತ್ತೀರಾ ಎಂಬ ಪ್ರಶ್ನೆಗೆ ಆತ ಇನ್ನೂ ರಾಜಕಾರಣದಲ್ಲಿ ಅಂಬೆಗಾಲು ಇಡುತ್ತಿದ್ದಾನೆ ಎಂದರು.

ಕಾರ್ಯ ಕ್ಷಮತೆ ನೋಡಿ ಟಿಕೆಟ್‌: ರಾಜ್ಯದ 93 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಪ್ರಕಟಿಸಲಾಗಿದೆ. ಅವರ ಕಾರ್ಯಕ್ಷಮತೆ ನೋಡಿ ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಾಗುವುದು. ಚುನಾವಣೆ ಘೋಷಣೆಗೂ ಮುನ್ನ ಅಭ್ಯರ್ಥಿಗಳ ಪಟ್ಟಿಪ್ರಕಟಿಸಲಾಗಿದ್ದು, ಅವರವರ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಚುರುಕಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ಸದ್ಯದ ಅಂದಾಜಿನ ಪ್ರಕಾರ ಚುನಾವಣೆಗಿನ್ನು 2 ತಿಂಗಳು ಬಾಕಿ ಇದೆ. ಸಂಭವನೀಯ ಅಭ್ಯರ್ಥಿಗಳ ಕಾರ್ಯಕ್ಷಮತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಪಟ್ಟಿಅಂತಿಮಗೊಳಿಸಲಾಗುವುದು. ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸದವ​ರನ್ನು ಬದಲಾವಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಿದರು.

ಜೆಡಿಎಸ್‌ ಬಗ್ಗೆ ಚರ್ಚೆ ಮಾಡಬೇಡಿ: ಸಿದ್ಧರಾಮಯ್ಯಗೆ ಎಚ್‌ಡಿಕೆ ಟಾಂಗ್‌

ಚನ್ನಪಟ್ಟಣದಿಂದ ನನ್ನ ಕೊನೆ ಚುನಾವಣೆ: ಚನ್ನಪಟ್ಟಣ ಕ್ಷೇತ್ರದಿಂದ ಇದು ನನ್ನ ಕೊನೆಯ ವಿಧಾನಸಭೆ ಚುನಾವಣೆಯಾಗಿದ್ದು, 2028ರ ವಿಧಾನಸಭೆ ಚುನಾವಣೆಗೆ ನಿಮ್ಮಲ್ಲೇ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಅವರನ್ನೇ ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ತಾಲೂಕಿನ ದೊಡ್ಡಮಳೂರು ಗ್ರಾಮದ ಬಳಿ ಹಮ್ಮಿಕೊಂಡಿದ್ದ ಬೊಂಬೆನಾಡಿನ ಬಮೂಲ್‌ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ನೊಂದಿದ್ದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ಪಕ್ಷ ಉಳಿಸಬೇಕೆಂಬ ಉದ್ದೇಶದಿಂದ ಕಳೆದ ಬಾರಿ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದೆ. ನಿಮ್ಮಲ್ಲಿ ಒಬ್ಬರು ಬಲಿಷ್ಠರಾಗಿ ಬೆಳೆದಿದ್ದರೆ ಈ ಬಾರಿಯೇ ಕ್ಷೇತ್ರ ಬಿಟ್ಟುಕೊಡುತ್ತಿದ್ದೆ. ಆದರೆ ಅಂತಹ ಪರಿಸ್ಥಿತಿ ಇಲ್ಲದ ಕಾರಣ ಕೊನೆಯ ಬಾರಿ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇನೆ ಎಂದರು.

Latest Videos
Follow Us:
Download App:
  • android
  • ios