ಸಚಿವ ಆನಂದ ಸಿಂಗ್ ಕುಟುಂಬಸ್ಥರ ವಿರುದ್ಧ ಭೂಮಿ ಪರಭಾರೆ ಆರೋಪಕ್ಕೆ ಬಿಗ್ ಟ್ವಿಸ್ಟ್!
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕುಟುಂಬದ ವಿರುದ್ಧ ಇನಾಂ ಜಮೀನು ಪರಾಭಾರೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಚಿವ ಆನಂದ್ ಸಿಂಗ್ ಗೆ ಬ್ಲ್ಯಾಕ್ ಮೇಲ್ ಆಗಿದೆ ಎಂದಿದ್ದು ಯಾಕೆ?. ಆಣೆ - ಪ್ರಮಾಣ ಮಾಡಲಿ ಅಂದಿದ್ಯಾಕೆ?
ವಿಜಯನಗರ (ಮಾ.23) : ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕುಟುಂಬದ ವಿರುದ್ಧ ಇನಾಂ ಜಮೀನು ಪರಾಭಾರೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಸಚಿವ ಆನಂದ್ ಸಿಂಗ್(Anand singh) ಅವರ ಪ್ರಭಾವ ಬಳಸಿಕೊಂಡು ಪುತ್ರ ಆಸ್ತಿಪರಾಭಾರೆ ಮಾಡ್ಕೊಂಡಿದ್ದಾರೆ ಅನ್ನೋ ಆರೋಪ ಮಾಡಲಾಗಿದೆ. ಆದರೆ ಸಚಿವರ ವಿರುದ್ಧಆರೋಪಕ್ಕೆ 50 ಲಕ್ಷರೂ. ಹಣ, ರಾಜಿ ಪಂಚಾಯ್ತಿಯ ವಿಫಲವಾಗಿರುವುದೇ ಕಾರಣವಾಗಿದೆಯಾ ಎಂಬ ಅನುಮಾನ ಮೂಡಿಸಿದೆ. ಸಚಿವ ಆನಂದ್ ಸಿಂಗ್ ಗೆ ಬ್ಲ್ಯಾಕ್ ಮೇಲ್ ಆಗಿದೆ. ಆಣೆ - ಪ್ರಮಾಣ ಮಾಡಲಿ ಅಂದಿದ್ಯಾಕೆ ಸಚಿವರು?
Karnataka election 2023: ತೀರ್ಥಹಳ್ಳಿ: ಆರಗ-ಕಿಮ್ಮನೆ ನಡುವೆ ದೈವ ಆಧಾರಿತ ಭರ್ಜರಿ ಪಾಲಿಟಿಕ್ಸ್!
ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಇನಾಮ್ ಜಮೀನು ನೋಂದಣಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ(Social worker kumaraswamy) ಆರೋಪಿಸಿದ್ದಾರೆ. ಇದಕ್ಕೆ ಸಚಿವ ಆನಂದ್ ಸಿಂಗ್ ರೋಷಾವೇಷಗೊಂಡಿದ್ದು, ಸಾಮಾಜಿಕ ಕಾರ್ಯಕರ್ತ ಒಬ್ಬ ಬ್ಲ್ಯಾಕ್ ಮೇಲರ್ ಎಂದಿದ್ದಾರೆ.
50 ಲಕ್ಷಕ್ಕೆ ಬೇಡಿಕೆ:
ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ನನಗೆ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ, ನಾನು ಆಗ ಸಚಿವನಾಗಿರಲಿಲ್ಲ. ನನಗೆ 50 ಲಕ್ಷ ಹಣ ಕೊಡಲಿಲ್ಲಾಂದ್ರೆ, ನಾವು ನಿಮ್ಮ ವಿರುದ್ಧ ಇರ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದ ಅಲ್ಲದೆ ನನಗೆ ಇನ್ನೊಬ್ಬರ ಮೂಲಕ ಹಣಕ್ಕೆ ಒತ್ತಾಯಿಸಿದ್ದ ಆತ ಕರೆ ಕೂಡ ಮಾಡಿದ್ದ. ಆದರೆ ನಾನು ಸಾರಸಗಟಾಗಿ 50 ಲಕ್ಷ ಕೊಡೋದಿಲ್ಲ ಅಂದಿದ್ದಕ್ಕೆ ಈ ರೀತಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಕೆಂಡಮಂಡಲಾರಾದ ಸಚಿವ ಆನಂದ್ ಸಿಂಗ್.
ಸಿದ್ಧಾರ್ಥ ದೇವಸ್ಥಾನ ಜಮೀನು ಅಕ್ರಮ ನೋಂದಣಿ, ಹಾಗೂ ಪರಾಬಾರೆ ಮಾಡಿಲ್ಲ ನಾನು ಸುಳ್ಳು ಹೇಳುವುದಿಲ್ಲ. ಸಂಡೂರು ಕುಮಾರಸ್ವಾಮಿ ದೇವಸ್ಥಾನಕ್ಕೆ ನಾನು ಬರ್ತಿನಿ, ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಬರಲಿ, ನಾನು ಈ ವಿಚಾರವಾಗಿ ಕರ್ಪೂರ ಹಚ್ಚುವೆ. ಕುಮಾರಸ್ವಾಮಿ ದೇವಸ್ಥಾನದ ಮೇಲೆ ಪ್ರಮಾಣ ಮಾಡಲಿ, ನಾನು ಮಾಡುತ್ತೇನೆ ಎಂದಿರುವ ಸಚಿವ ಆನಂದ್ ಸಿಂಗ್
Assembly election: ವೇಶ್ಯೆ ಮಾದರಿಯಲ್ಲಿ ಶಾಸಕ ಆನಂದ್ ಸಿಂಗ್ ಸ್ಥಾನ ಮಾರಾಟ: ಬಿಕೆ. ಹರಿಪ್ರಸಾದ್ ವಾಗ್ದಾಳಿ
ಲೋಕಾಯುಕ್ತದಲ್ಲಿ ದೂರು ದಾಖಲು:
ಈ ಪ್ರಕರಣ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ, ಏನೇ ನಿರ್ಧಾರ ಆದ್ರೂ ಅಲ್ಲೇ ಆಗಲಿ. ಹೊಸಪೇಟೆಯ ನಗರಸಭೆ ಸದಸ್ಯ ಅಬ್ದುಲ್ ಖದೀರ್ ಒಬ್ಬ ರೌಡಿಶೀಟರ್ ಆಗಿದ್ದು, ಅವರು ಈ ಹಿಂದೆ ಮಾಜಿ ಸದಸ್ಯರೊಬ್ಬರ ಪರ ವಕಾಲತ್ತು ವಹಿಸಿ, ರಾಜಿ ಪಂಚಾಯ್ತಿ ಮಾಡಿದ್ರು. ಮಾಜಿ ಸದಸ್ಯರೊಬ್ಬರು ಮತ್ತು ಪೊಲಪ್ಪ ಕೇಸ್ ನಲ್ಲಿ ಮುಂದುವರಿಸೋದು ಬೇಡ ಅಂತ ನನ್ನ ಬಳಿ ಬಂದು ಪಂಚಾಯತಿಗೆ ಬಂದಿದ್ರು. ಆದ್ರೆ ಅದು ಕಾನೂನು ಪ್ರಕಾರ ತಾವು ಹೋಗಿದ್ದೀರಿ ಆಗಲಿ ಎಂದಿದ್ದೆ, ನಾನು ರಾಜಿಯಾಗೋ ಮಾತೇ ಇಲ್ಲಾ ಎಂದಿದ್ದೆ. ಈ ವಿಚಾರವಾಗಿ ಅಬ್ದುಲ್ ಖದೀರ್ ನನ್ನ ವಿರುದ್ಧ ಈ ರೀತಿ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಚಿವ ಆನಂದ ಸಿಂಗ್.