Assembly election: ವೇಶ್ಯೆ ಮಾದರಿಯಲ್ಲಿ ಶಾಸಕ ಆನಂದ್ ಸಿಂಗ್ ಸ್ಥಾನ ಮಾರಾಟ: ಬಿಕೆ. ಹರಿಪ್ರಸಾದ್ ವಾಗ್ದಾಳಿ
: ವೇಶ್ಯೆಯ ಮಾದರಿಯಲ್ಲಿ ತಮ್ಮ ಶಾಸಕ (ಆನಂದ್ ಸಿಂಗ್) ಸ್ಥಾನವನ್ನು ಮಾರಾಟ ಮಾಡಿಕೊಂಡು ಕೆಲವರ ಜೊತೆಗೂಡಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದಾರೆ. ಸಮೃದ್ಧವಾಗಿರುವ ಕರ್ನಾಟಕ ರಾಜ್ಯವನ್ನು ರೋಗಗ್ರಸ್ಥ ರಾಜ್ಯವನ್ನು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.
ವಿಜಯನಗರ (ಜ.17): ವೇಶ್ಯೆಯ ಮಾದರಿಯಲ್ಲಿ ತಮ್ಮ ಶಾಸಕ (ಆನಂದ್ ಸಿಂಗ್) ಸ್ಥಾನವನ್ನು ಮಾರಾಟ ಮಾಡಿಕೊಂಡು ಕೆಲವರ ಜೊತೆಗೂಡಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದಾರೆ. ಸಮೃದ್ಧವಾಗಿರುವ ಕರ್ನಾಟಕ ರಾಜ್ಯವನ್ನು ರೋಗಗ್ರಸ್ಥ ರಾಜ್ಯವನ್ನು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಇದೊಂದು ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಆರೋಪಸಿದ್ದಾರೆ.
ಹೊಸಪೇಟೆ ನಗರದಲ್ಲಿ ಇಂದು ಆರಂಭವಾದ ಕಾಂಗ್ರೆಸ್‌ನ ಪ್ರಜಾಪ್ರತಿಧ್ವನಿ ಬಸ್ ಯಾತ್ರೆಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯವನ್ನು ರೋಗಗ್ರಸ್ಥವನ್ನಾಗಿ ಮಾಡಿದೆ. ನರೇಂದ್ರ ಮೋದಿ ಸುಳ್ಳಿನ ಸರದಾರ. ಎಪ್ಪತ್ತು ವರ್ಷ ಕಾಂಗ್ರೆಸ್ ಏನು ಮಾಡಿಲ್ಲ ಎನ್ನುವ ಮೋದಿ ಸುಳ್ಳಿನ ಸರದಾರ ಆಗಿದ್ದಾರೆ. 2018ರಲ್ಲಿ ಬಿಜೆಪಿಯನ್ನು ಜನರು ತಿರಸ್ಕರ ಮಾಡಿದ್ದರು. ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ಆದರೆ, ವೇಶ್ಯೆಯ ಮಾದರಿಯಲ್ಲಿ ತಮ್ಮ ಶಾಸಕ (ಆನಂದ್ ಸಿಂಗ್) ಸ್ಥಾನವನ್ನು ಮಾರಾಟ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಕಾಂಗ್ರೆಸ್ ಬಂಪರ್ ಗಿಫ್ಟ್: ಮಾಸಿಕ 2 ಸಾವಿರ ರೂ. ಸಹಾಯಧನ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ 22 ಜಿಲ್ಲೆಗಳಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಜನರ ಧ್ವನಿ ಆಲಿಸಲು ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಜನಾಭಿಪ್ರಾಯ, ಜನರ ಸಲಹೆ ಪಡೆಯಲು ಈ ಯಾತ್ರೆ ಮಾಡುತ್ತಿದ್ದು, ಅಧಿಕಾರಕ್ಕೆ ಬಂದರೆ ಜನರ ಸಲಹೆಯಂತೆ ಸರ್ಕಾರ ನಡೆಸುತ್ತೇವೆ. ಕೊಟ್ಟ ಮಾತನ್ನು ತಪ್ಪುವ ಕೆಲಸ ಮಾಡೋದಿಲ್ಲ. 2013 -28 ರಲ್ಲಿ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವೆ ಬೇಕಾದರೆ ದಾಖಲೆ ಪರಿಶೀಲಿಸಿ. ಬಿಜೆಪಿ 2018ರಲ್ಲಿ ಕೊಟ್ಟ 600 ಭರವಸೆಯಲ್ಲಿ ಎಷ್ಟು ಭರವಸೆ ಈಡೇರಿಸಿದ್ದೀರಾ ಬೊಮ್ಮಯಿ ಅವರೇ..? ತಾಕ್ಕತ್ತು ದಮ್ಮಿನ ಬಗ್ಗೆ ಮತನ ಮಾಡೋ ಬೊಮ್ಮಯಿ, ನಿಮಗೆ ದಮ್ಮು ಇದ್ರೇ ಅಭಿವೃದ್ಧಿ ಕುರಿತು ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದರು.
ಸಮಾನಾಂತರ ಜಲಾಶಯ ಕಟ್ಟುತ್ತೇವೆ: ತುಂಗಭದ್ರಾ ಡ್ಯಾಂನಲ್ಲಿ 37 ಟಿಎಂಸಿ ಹೂಳು ತುಂಬಿದೆ. ಈ ವರ್ಷ ಆಂಧ್ರಕ್ಕೆ 200 ಟಿಎಂಸಿ ನೀರು ಹರಿದು ಹೋಗಿದೆ. ಪರ್ಯಾಯ ಡ್ಯಾಂ ಕಟ್ಟುತ್ತೇವೆ ಎಂದು ಹೇಳಿದ ಮಾತು ಏನಾಯ್ತು-? ನಾವು ಅಧಿಕಾಕ್ಕೆ ಬಂದ್ರೇ ಸಮಾನಾಂತರ ಜಲಾಶಯ ಕಟ್ಟುತ್ತೇವೆ. ನೀರಾವರಿಗೆ ಕೇವಲ 45 ಸಾವಿರ ಕೋಟಿ ಖರ್ಚು ಮಾಡಿದ್ದೀರಾ ಉಳಿದದ್ದು ಯಾಕೆ ಖರ್ಚು ಮಾಡಲಿಲ್ಲ. ನೀರಾವರಿಗೆ ನಮ್ಮ ಅವಧಿಯಲ್ಲಿ ಐವತ್ತು ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದ್ರೇ ನೀರಾವರಿಗೆ ಎರಡು ಲಕ್ಷ ಕೋಟಿ ಹಣ ಖರ್ಚು ಮಾಡುತ್ತೇವೆ. ಹೊಸಪೇಟೆ ಮತ್ತು ಕಂಪ್ಲಿ ಶುಗರ್ ಫ್ಯಾಕ್ಟರಿ ಬಂದ್ ಆಗಿದ್ದರೂ, ಆನಂದ ಸಿಂಗ್ ಯಾಕೆ ಫ್ಯಾಕ್ಟರಿ ತೆಗೆಸೋಕೆ ಆಗಲಿಲ್ಲ? ನಾವು ಅಧಿಕಾರಕ್ಕೆ ಬಂದ್ರೇ ಕಂಪ್ಲಿ ಮತ್ತು ಹೊಸಪೇಟೆ ಶುಗರ್ ಫ್ಯಾಕ್ಟರಿ ಓಪನ್ ಮಾಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ ಆರೋಪಿ ಹೊರಗಿದ್ದಾರೆ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಬೊಮ್ಮಯಿ ಅವರ ಭ್ರಷ್ಟ ಸರ್ಕಾರದ ಬೇಸತ್ತು ಹೋಗಿದ್ದಾರೆ. ದೇಶದ ಅತಿದೊಡ್ಡ ಭ್ರಷ್ಟ ಸರ್ಕಾರ ಇದಾಗಿದೆ.ಇದೊಂದು ಶೇ. 40 ಪರ್ಸೆಂಟ್ ಸರ್ಕಾರ. ಕಾಂಗ್ರೆಸ್ ಅಲ್ಲ ಹಣಕ್ಕಾಗಿ ಬಿಜೆಪಿ ಅವರನ್ನು ( ಶಾಸಕ ಕಾರ್ಯಕರ್ತರನ್ನು ) ಬಿಡೋದಿಲ್ಲ. ಅಧಿಕಾರಿಗಳು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ, ಬೆಂಗಳೂರಿನಲ್ಲಿ ತಲೆಗೆ ಗುಂಡು ಹೊಡೆದುಕೊಂಡು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳಲಲು ಬೊಮ್ಮಯಿ ಸರ್ಕಾರ ಕಾರಣ. 2,500 ಕೋಟಿಗೆ ಮುಖ್ಯಮಂತ್ರಿ ಸ್ಥಾನ ಸೇಲಾಗಿದೆ ಎಂದು ಬಿಜೆಪಿಯ ಶಾಸಕ ಯತ್ನಳ ಅವರೇ ಹೇಳುತ್ತಾರೆ. ವೇಶ್ಯೆ ಗೃಹ ನಡೆಸೋ ಸ್ಯಾಟ್ರೋ ರವಿ ಸರ್ಕಾರ ನಡೆಸುತ್ತಾನೆ. ಸ್ಯಾಟ್ರೋ ರವಿ ಎಸ್ಪಿ ಲೇವಲ್ ಅಧಿಕಾರಿಗಳನ್ನು ವರ್ಗಾವಣೆ ಮಾಡ್ತಾನೆ. ಕೇಂದ್ರದ ಗೃಹ ಮಂತ್ರಿ ಗುಂಡಾ ಎಂದು ಯೋಗಿಶ್ವರ ಹೇಳ್ತಾರೆ. ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದ ಆರೋಪಿ ( ಆನಂದ ಸಿಂಗ್) ಹೊರಗಡೆ ಇದ್ದಾರೆ ಎಂದು ಆರೋಪಿಸಿದರು.
ಎಲೆಕ್ಷನ್ ಗಿಮಿಕ್: ಬಳ್ಳಾರಿಯಲ್ಲಿ ಹಕ್ಕುಪತ್ರ ವಿತರಣೆಗೆ ಮುಂದಾದ ಶಾಸಕ ಸೋಮಶೇಖರ್ ರೆಡ್ಡಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಯಾವೆಲ್ಲ ಸಂಸ್ಥೆ ಮಾಡಿದ್ದಾರೋ ಅದನ್ನು ಬಿಜೆಪಿ ಮಾರಾಟ ಮಾಡುತ್ತಿದೆ. ಕಾಂಗ್ರೆಸ್ ರಾಷ್ಟ್ರೀಕರಣ ಮಾಡಿದ್ರೇ ಬಿಜೆಪಿ ಖಾಸಗಿಕರಣ ಮಾಡಿದೆ. ಆಪರೇಷನ್ ಕಮಲದಿಂದ ಈ ಸರ್ಕಾರ ರಚನೆಯಾಗಿದೆ. ಬಿಜೆಪಿ ಪಾಪದ ಪುರಾಣದ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಯಾವೊಬ್ಬ ಬಿಜೆಪಿ ನಾಯಕರು ಉತ್ತರ ಕೊಡ್ತಿಲ್ಲ. ಉದ್ಯೋಗ ಕೊಟ್ಟಿಲ್ಲ, ಭ್ರಷ್ಟಾಚಾರ ತಾಂಡವವಾಡ್ತಿದೆ. ಯಾವ ಪೋಸ್ಟ್ ಗೆ ಅರ್ಜಿ ಹಾಕಿದ್ರೇ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರ ಮಾಡಿದ ಅಧಿಕಾರಿಗಳು ಒಳಗೆ ಇದ್ದಾರೆ. ಬ್ರೋಕರ್ ಕೆಲಸ ಮಾಡಿದ ಶಾಸಕ ಸಚಿವರು ಹೊರಗೆ ಇದ್ದಾರೆ. ಎಲ್ಲ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕುತ್ತಿರುವ ಸರ್ಕಾರವಾಗಿದೆ. ಯಾವುದೇ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿದ್ದಿರೋ, ಅದೆಲ್ಲವೊ ಮರು ತನಿಖೆ ಮಾಡಿಸುತ್ತೇವೆ. ವಿಶ್ವವಿದ್ಯಾಲಯ ಕುಲಪತಿ ಹುದ್ದೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ರಾಜ್ಯಪಾಲರ ಹುದ್ದೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಉಚಿತ ವಿದ್ಯುತ್ ವಿಚಾರದ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ: ರಾಜ್ಯದಲ್ಲಿ ಪ್ರತಿ ಮನೆಗೆ 200ಯೂನಿಟ್ ಉಚಿತ ವಿದ್ಯುತ್ ಕೊಡ್ತೇವೆ. ಮಹಿಳೆಯರಿಗೆ ಎರಡು ಸಾವಿರ ಕೊಡ್ತೇವೆ. ನಾನು ಇಂಧನ ಸಚಿವರಾಗಿದ್ದಾಗ ಏನು ಮಾಡಿದ್ದೆ ಎನ್ನುವುದನ್ನು ನಿಮ್ಮ ಸೆಂಟ್ರಲ್ ಪವರ್ ಮಿನಿಷ್ಟುನ್ನು ಕೇಳಿ. ನಮ್ಮ ಕಾರ್ಯಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ರೈತರ ಜಮೀನು ಪಡೆಯದೇ, ಪಾವಗಡದ ಬಳಿ ಸೋಲರಾ ಪಾರ್ಕ್ ಮಾಡಿದೆ. ಉಚಿತ ಪವರ್ ನೀಡೋದು ಹೇಗೆ ಅಂತೀರಾ ಈ ಬಗ್ಗೆ ಬಹಿರಂಗವಾಗಿ ಬನ್ನಿ ಚರ್ಚೆ ಮಾಡೋಣ. ಹೇಗೆ ಕಡುತ್ತೇನೆ ಎಂದು ವಿವರವಾಗಿ ಹೇಳುತ್ತೇನೆ. ಉಚಿತ ಘೋಷಣೆ ಬಜೆಟ್ ನಲ್ಲಿ ಘೋಷಣೆ ಮಾಡಬಹುದು. ನಾವು ಮಾಡೋಕೆ ಅಗಲ್ಲಾ.? ನಮ್ಮದು ಲೆಕ್ಕಾಚಾರ ಇರಲ್ವಾ.? ಈ ಸರ್ಕಾರದಲ್ಲಿ ಓಟು ಕದಿಯುವವರು ಇದ್ದಾರೆ ಎಂದು ಆರೋಪಿಸಿದರು.