ಚಾಮರಾಜನಗರ ಜಿಲ್ಲೆಯಲ್ಲಿ ಬರ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಆರೋಪ: ಜಿಲ್ಲಾಧಿಕಾರಿ ಹೇಳಿದ್ದೇನು?

ಸರ್ಕಾರದ ಬರ ಪರಿಹಾರ ವಿತರಣೆಯಲ್ಲೂ ಕೂಡ ತಾರತಮ್ಯ ಆರೋಪ ಕೇಳಿಬಂದಿದೆ. ಕೇವಲ  5%  ಮಂದಿಗೆ ಮಾತ್ರ ಬರ ಪರಿಹಾರದ ಹಣ ಬಂದಿದ್ದು, ಉಳಿದ  95%  ರಷ್ಟು ಮಂದಿಗೆ ಪರಿಹಾರ ಹಣ ಜಮೆ ಆಗಿಲ್ಲ ಅನ್ನೋ ಆರೋಪ ಮಾಡ್ತಿದ್ದು, ಈಗಾಗ್ಲೇ ನಾವು ಬರದಿಂದ ತತ್ತರಿಸಿದ್ದೀವಿ.

Allegation of discrimination in distribution of drought relief in Chamarajanagar district gvd

ವರದಿ: ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮೇ.25): ಸರ್ಕಾರದ ಬರ ಪರಿಹಾರ ವಿತರಣೆಯಲ್ಲೂ ಕೂಡ ತಾರತಮ್ಯ ಆರೋಪ ಕೇಳಿಬಂದಿದೆ. ಕೇವಲ  5%  ಮಂದಿಗೆ ಮಾತ್ರ ಬರ ಪರಿಹಾರದ ಹಣ ಬಂದಿದ್ದು, ಉಳಿದ  95%  ರಷ್ಟು ಮಂದಿಗೆ ಪರಿಹಾರ ಹಣ ಜಮೆ ಆಗಿಲ್ಲ ಅನ್ನೋ ಆರೋಪ ಮಾಡ್ತಿದ್ದು, ಈಗಾಗ್ಲೇ ನಾವು ಬರದಿಂದ ತತ್ತರಿಸಿದ್ದೀವಿ, ಈಗಲಾದ್ರೂ ಬರ ಪರಿಹಾರ ಹಣ ಬಂದ್ರೆ ಬಿತ್ತನೆ ಬೀಜ ಖರೀದಿ ಮಾಡಿ ಬೇಸಾಯ ಶುರು ಮಾಡ್ತೀವಿ ಅಂತಾ ರೈತರು ಡಿಸಿ ಮೊರೆ ಹೋಗಿದ್ದಾರೆ. ಹೌದು! ಚಾಮರಾಜನಗರ ಜಿಲ್ಲೆಯಲ್ಲಿ ಬರ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಆರೋಪ ಕೇಳಿಬಂದಿದೆ. ಕೆಲವು ಗ್ರಾಮಗಳಲ್ಲಿ ಶೇಕಡಾ 5 ರಷ್ಟು ರೈತರಿಗೆ ಮಾತ್ರ ಬರ ಪರಿಹಾರ ಬಿಡುಗಡೆಯಾಗಿದ್ದು ಉಳಿದ 95 ರಷ್ಟು ರೈತರಿಗೆ ಅನ್ಯಾಯವಾಗಿದೆ ಎಂದು ವಂಚಿತ ರೈತರು ಆರೋಪಿಸಿದ್ದಾರೆ. 

ಇದರಿಂದ ಬೇಸತ್ತ ರೈತರು ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವಿಧಾನಸಭಾಕ್ಷೇತ್ರದ ಹಲವಾರು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬೆಳೆ ಹಾನಿಯಾದ ಪ್ರತಿಯೊಬ್ಬ ರೈತರಿಗೂ ಸೂಕ್ತ ಬರ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ ಸರ್ಕಾರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡುತ್ತಿದೆ ಬರ ಪರಿಹಾರದಲ್ಲಿಯೂ ಯಾಕಿಷ್ಟು ತಾರತಮ್ಯವೆಂದು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಅನ್ನದಾತರು ಈಗ ಮಳೆಗಾಲ ಶುರುವಾಗಿದೆ ಬರ ಪರಿಹಾರ ನೀಡಿದ್ರೆ ಆ ಹಣದಿಂದ ಬಿತ್ತನೆ ಬೀಜ ಖರೀದಿಸಲು ಅನುಕೂಲವಾಗತ್ತೆ ಎನ್ನುತ್ತಿದ್ದಾರೆ.

ಇನ್ನೂ ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿದ್ದು, ಯಾವುದೇ ತಾರತಮ್ಯ ಎಸಗಿಲ್ಲ ಫ್ರೂಟ್ಸ್ ಐಡಿ ಯಲ್ಲಿ ನಮೂದಾಗಿರುವ  ಬೆಳೆಹಾನಿ ವಿವರಗಳ ಆಧಾರದಲ್ಲಿ ರೈತರ ಖಾತೆಗೆ ಬರ ಪರಿಹಾರ ಜಮೆ ಮಾಡಲಾಗಿದೆ, ಜಿಲ್ಲೆಯಲ್ಲಿ 47,552 ರೈತರಿಗೆ 31.11 ಕೋಟಿ  ರೂಪಾಯಿ ಹಣ ಬಿಡುಗಡೆಯಾಗಿದ್ದು  ಮೊದಲ ಹಂತದಲ್ಲಿ 2 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದ  5390 ರೈತರಿಗೆ 1ಕೋಟಿ 39 ಲಕ್ಷ ರೂಪಾಯಿ ಮಾತ್ರ ಬಾಕಿಯಿದ್ದು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸ್ತೇವೆ ಎಂದು ಹೇಳಿದ್ದಾರೆ. 

ರಾಜ ವೈಭವದಿಂದ ಕೆಂಪು ದೀಪದ ತನಕ: ಹೀರಾ ಮಂಡಿಯ ಏಳು ಬೀಳಿನ ಹಾದಿ

ಯಾರಿಗಾದ್ರು ಇನ್ಪುಟ್ ಸಬ್ಸಿಡಿ ಬಂದಿಲ್ಲ ಅಂದ್ರೆ 1077 ಸಂಖ್ಯೆ ಕರೆ ಮಾಡಿ ಮಾಹಿತಿ ನೀಡಿದರೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಒಟ್ನಲ್ಲಿ ಬರದಿಂದ ತತ್ತರಿಸಿದ ಜನರಿಗೆ ವರುಣ ತಂಪೆರೆದಿದ್ದಾನೆ. ಕೃಷಿ ಚಟುವಟಿಕೆ ಕೂಡ ಆರಂಭವಾಗಿದೆ. ಬಿತ್ತನೆ ಬೀಜ ಖರೀದಿಸಲು ಬರ ಪರಿಹಾರ ಹಣ ಬಂದ್ರೆ ಅನುಕೂಲವಾಗುತ್ತೆ ಅನ್ನೋದು ಅನ್ನದಾತರ ಅಭಿಪ್ರಾಯ ವಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಬರ ಪರಿಹಾರ ಹಣವನ್ನು ರೈತರಿಗೆ ಕೊಡಿಸಬೇಕಿದೆ.

Latest Videos
Follow Us:
Download App:
  • android
  • ios