Asianet Suvarna News Asianet Suvarna News

ಯಾದಗಿರಿ: ಮೋದಿ ಆಗಮನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಪ್ರಧಾನಿ ಭಾಗವಹಿಸುವಲ್ಲಿ ಜರ್ಮನ್‌ ಶೈಲಿಯ ಹೊಸ ತಂತ್ರಜ್ಞಾನದ ಚಪ್ಪರ, ವೇದಿಕೆ ನಿರ್ಮಿಸುತ್ತಿದ್ದು, ಗಣ್ಯರು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೆ ಸೂಕ್ತ ಸೌಲಭ್ಯ ಸುರಕ್ಷೆ, ಊಟ, ಉಪಹಾರ ಪಾರ್ಕಿಂಗ್‌ ಹಾಗೂ ಇನ್ನಿತರ ಮೂಲ ಸೌಕರ್ಯ ವ್ಯವಸ್ಥೆಯನ್ನು ಎಲ್ಲಾ ಇಲಾಖೆಗಳ ಮಧ್ಯೆ ಸಮನ್ವಯ ಮೂಲಕ ಸಿದ್ಧತೆ ನಡೆಸಲಾಗುತ್ತಿದೆ.

All Preparations Being Made by the Yadgir District Administration for PN Narendra Modi Visit grg
Author
First Published Jan 17, 2023, 7:30 PM IST

ಕೊಡೇಕಲ್‌/ಹುಣಸಗಿ(ಜ.17):  ಕೊಡೇಕಲ್‌ ಗ್ರಾಮಕ್ಕೆ ಸ್ಕಾಡಾ ಗೇಟ್‌ಗಳ ಲೋಕಾರ್ಪಣೆ ಹಾಗೂ ಜಲಾಧಾರೆ ಯೋಜನೆಯ ಅಡಿಗಲ್ಲು ಕಾರ್ಯಕ್ರಮಕ್ಕಾಗಿ ಜ.19 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಜರುಗುವ ಸ್ಥಳಕ್ಕೆ ಕೇಂದ್ರದ ಎಸ್‌ಪಿಜಿ ತಂಡದ ಡಿಐಜಿ ನವನೀತ ಕುಮಾರ ಮೆಹತಾ ನೇತೃತ್ವದ ತಂಡ ಭೇಟಿ ನೀಡಿ ಸ್ಥಳ ಪರಿಶೀಲಿಸಲಾಯಿತು. ಕೊಡೇಕಲ್‌ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್‌ ವೇದಿಕೆ ಸೇರಿದಂತೆ ಇತರ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿ ಶಾಸಕ ರಾಜೂಗೌಡ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿ, ಕಾರ್ಯಕ್ರಮದ ನೀಲ ನಕ್ಷೆಯನ್ನು ನೋಡಿ ನಿಗಮದ ಅಧಿಕಾರಿಗಳಿಗೆ ಅಗತ್ಯ ಸಲಹೆಗಳನ್ನು ನೀಡಿದರು.

ಜರ್ಮನ್‌ ಶೈಲಿಯ ವೇದಿಕೆ ನಿರ್ಮಾಣ :

ಪ್ರಧಾನಿ ಭಾಗವಹಿಸುವಲ್ಲಿ ಜರ್ಮನ್‌ ಶೈಲಿಯ ಹೊಸ ತಂತ್ರಜ್ಞಾನದ ಚಪ್ಪರ, ವೇದಿಕೆ ನಿರ್ಮಿಸುತ್ತಿದ್ದು, ಗಣ್ಯರು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೆ ಸೂಕ್ತ ಸೌಲಭ್ಯ ಸುರಕ್ಷೆ, ಊಟ, ಉಪಹಾರ ಪಾರ್ಕಿಂಗ್‌ ಹಾಗೂ ಇನ್ನಿತರ ಮೂಲ ಸೌಕರ್ಯ ವ್ಯವಸ್ಥೆಯನ್ನು ಎಲ್ಲಾ ಇಲಾಖೆಗಳ ಮಧ್ಯೆ ಸಮನ್ವಯ ಮೂಲಕ ಸಿದ್ಧತೆ ನಡೆಸಲಾಗುತ್ತಿದೆ.

ಯಾದಗಿರಿಯಲ್ಲಿ ಮೈಲಾರಲಿಂಗನ ಜಾತ್ರಾ ವೈಭವ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು

ಎಸ್‌ಪಿಜಿ ಭದ್ರತೆ :

ಪ್ರಧಾನ ಮಂತ್ರಿಯವರು ಎಸ್‌ಪಿಜಿ ಭದ್ರತೆ ಹೊಂದಿರುವ ಹಿನ್ನಲೆ ಕಾರ್ಯಕ್ರಮ ಜರುಗುವ ಸ್ಥಳಕ್ಕೆ ಎಸ್‌ಪಿಜಿ ಭದ್ರತೆವಿರುವ ಕಾರಣ ಸ್ಥಳಕ್ಕೆ ಯಾವುದೇ ಆಕ್ಷೇಪಾರ್ಹ ವಸ್ತುಗಳು ಬರದಂತೆ ನೋಡಿಕೊಂಡು, ಪೊಲೀಸ್‌ ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗುತ್ತಿದೆ.

ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ವ್ಯವಸ್ಥೆ :

ಪ್ರಧಾನಿಗಳ ಸುರಕ್ಷಿತ ಮತ್ತು ಸುಲಲಿತ ಸಂಚಾರ, ಪ್ರತಿಯೊಬ್ಬ ಸಾರ್ವಜನಿಕರಿಗೂ ಅತೀ ಹತ್ತಿರದಿಂದ ವಾಹನದಿಂದ ಇಳಿದು ಸಭಾ ಕಾರ್ಯಕ್ರಮಕ್ಕೆ ಬರಲು ಅವಕಾಶ, ಕಾರ್ಯಕ್ರಮ ಮುಗಿದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪುವ ಹಿನ್ನೆಲೆಯಲ್ಲಿ ಸಂಚಾರ ನಿಷೇಧ, ಸಂಚಾರ ಬದಲಾವಣೆ, ಪಾಕಿಂರ್‍ಗ್‌ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರಿಗಾಗಿ ಮೊಬೈಲ್‌ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಆಂಬ್ಯುಲೆನ್ಸ್‌ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳತ್ತಿದ್ದು, ಅದರಂತೆ ತುರ್ತು ಆರೋಗ್ಯ ಚಿಕಿತ್ಸಾ ವ್ಯವಸ್ಥೆಗೆ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

PSI Recruitment Scam: ಪಿಎಸ್ಐ ಮರುಪರೀಕ್ಷೆ ರದ್ದತಿ ಕೋರಿದ್ದ ಅರ್ಜಿ ಕೆಎಟಿಯಿಂದ ವಜಾ

ಕಾರ್ಯಕ್ರಮಕ್ಕೆ ಪ್ರಧಾನಿ ಹಾಗೂ ಇನ್ನಿತರ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆ 6 ಹೆಲಿಪ್ಯಾಡ್‌ಗಳನ್ನು ನಿರ್ಮಿಸುತ್ತಿದ್ದು, ಅಧಿಕಾರಿಗಳು ಸ್ಥಳವನ್ನು ಪರಿಶೀಲಿನೆ ನಡೆಸಿ, ಅದರಲ್ಲಿ 3 ಹೆಲಿಪ್ಯಾಡ್‌ಗಳನ್ನು ಅಂತಿಮವಾಗಿಸಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭಾ ಸದಸ್ಯ ರಾಜಾ ಅಮರೇಶ ನಾಯಕ್‌, ಸುರಪುರ ಶಾಸಕ ರಾಜೂಗೌಡ, ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಆರ್‌. ನಾಯ್ಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ . ವೇದಮೂರ್ತಿ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್‌, ಹುಣಸಗಿ ತಹಸೀಲ್ದಾರ್‌ ಜಗದೀಶ ಚೌರ್‌, ಡಿಹೆಚ್‌ಒ ಡಾ. ಗುರುರಾಜ ಹಿರೇಗೌಡ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios