ಮೈಸೂರು(ಜ.19): ಅಮಿತ್‌ ಶಾ ರಾಜ್ಯಕ್ಕೆ ಬಂದು ಹೋದ ಹಿನ್ನಲೆಯಲ್ಲೇ ಸಂಪುಟ ವಿಸ್ತರಣೆಯ ವಿಚಾರ ಇನ್ನಷ್ಟು ಹುರುಪು ಪಡೆದುಕೊಂಡಿದೆ. 17 ಶಾಸಕರೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದು ಈ ಬಗ್ಗೆ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

ಸಂಪುಟ ವಿಸ್ತರಣೆ ವಿಚಾರ‌ವಾಗಿ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವುದು ನಿಜ. ಆದರೆ ವಿಸ್ತರಣೆ ವೇಳೆ 17 ಜನರನ್ನೂ ಪರಿಗಣಿಸಲೇಬೇಕು ಎಂದು ಕೆ.ಆರ್.ನಗರದಲ್ಲಿ ಪರಾಜಿತ ಅನರ್ಹ ಶಾಸಕ ಎಚ್‌.ವಿಶ್ವನಾಥ್ ಪುನರುಚ್ಛರಿಸಿದ್ದಾರೆ.

ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಚಿತ: ನಾರಾಯಣ ಗೌಡ

ಅಮಿತ್ ಶಾ ಬಂದು ಹೋಗಿದ್ದಾರೆ. ಆದರೆ ಏನೂ ಆಗಿಲ್ಲ. ಆದರೆ ನಮ್ಮ ನಿರೀಕ್ಷೆಗಳು ಹುಸಿ ಆಗಿಲ್ಲ. ಹುಸಿಯಾದರೆ ಅದರ ಪರಿಣಾಮ ಏನಾಗುತ್ತೆ ಎಂಬುದನ್ನು ನೋಡೋಣ. ಬಿಜೆಪಿ ರಾಷ್ಟ್ರೀಯ ಪಕ್ಷ, ದೊಡ್ಡ ಪಕ್ಷ. ಆದ್ದರಿಂದ ಒಡಕು ಧ್ವನಿಗಳು ಸಹಜ ಎಂದು ಹೇಳಿದ್ದಾರೆ.
 
ಯಾರು ಏನೇ ಮಾತನಾಡಿದರೂ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾವೆಲ್ಲರೂ ಕಾರಣ. ಆದ್ದರಿಂದ ಎಲ್ಲ 17 ಜನರಿಗೂ ಸಚಿವ ಸ್ಥಾನ ನೀಡಬೇಕು ಎಂದು ಸಚಿವ ಸ್ಥಾನದ ಆಕಾಂಕ್ಷಿ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

'ಬಿಜೆಪಿಯಲ್ಲಿ ಸಿಗೋ ಗೌರವ ಬೇರೆಡೆ ಸಿಕ್ತಿದ್ರೆ ಪಕ್ಷ ಬಿಡ್ತಿರ್ಲಿಲ್ಲ'..!