ಮಂಡ್ಯ(ಜ.19): ಬಿಜೆಪಿ ಪಕ್ಷದಲ್ಲಿ ಏನೇ ಮಾಡಬೇಕಾದ್ರು ಕಾಲ, ದಿನ, ಘಳಿಗೆ ಎಲ್ಲವನ್ನೂ ನೋಡಿ ಮಾಡಲಾಗುತ್ತೆ. ಸಂಪುಟ ವಿಸ್ತರಣೆಯೂ ಹಾಗೆ ಶೀಘ್ರದಲ್ಲೇ ನೆರವೇರಲಿದೆ ಎಂದು ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಹೇಳಿದ್ದಾರೆ.

ಮಂಡ್ಯದ ಕೆ. ಆರ್. ಪೇಟೆಯಲ್ಲಿ ಮಾತನಾಡಿದ ಅವರು, ಗೆದ್ದಿರುವ ಎಲ್ಲರೂ ಸ್ಥಾನ ಮಾನ ತುಂಬಲಿದ್ದಾರೆ. ಗೆದ್ದವರಲ್ಲಿ ಕೆಲವರಿಗೆ ಮಾತ್ರ ಸಚಿವ ಸ್ಥಾನ ಅನ್ನೋದು ಸುಳ್ಳು. ಸಿಎಂ ಯಡಿಯೂರಪ್ಪ ಮಾತು ತಪ್ಪುವವರಲ್ಲ. ಅವರು ಈ ವರೆಗೂ ಮಾತು ತಪ್ಪಿಲ್ಲ. ಸಚಿವ ಸ್ಥಾನ ಸಿಗುವ ಬಗೆಗೆ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗುತ್ತೇವೆ ಎಂದಿದ್ದಾರೆ.

ಸಚಿವಾಕಾಂಕ್ಷಿಗಳ ಖಣ ಇನ್ನೆರಡು ದಿನದಲ್ಲಿ ತೀರುತ್ತೆ: ಈಶ್ವರಪ್ಪ

ನಾವು 17 ಜನರು ಒಟ್ಟಿಗೆ ಇದ್ದೀವಿ. ಸೋತವರಿಗೂ ಮಂತ್ರಿ ಸ್ಥಾನ ಸಿಗಲಿದೆ. ಈ ಬಗೆಗೆ ವರಿಷ್ಠರು ಸಿಎಂಗೆ ಸೂಚಿಸಿದ್ದಾರೆ. ಅವರನ್ನ ಕೈ ಬಿಡೊ ಪ್ರಶ್ನೆಯೇ ಇಲ್ಲ. ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಯಾರಿಗೆ ಯಾವ ಖಾತೆ ಕೊಡಬೇಕು ಅನ್ನೋದು ಅವರಿಗೆ ಗೊತ್ತಿದೆ. ಯಾವ ಯಾವ ಜಿಲ್ಲೆಗೆ ಯಾವ ಯಾವ ಖಾತೆ ನೀಡಬೇಕೆಂದು ಸಿಎಂಗೆ ಗೊತ್ತಿದೆ ಎಂದು ಹೇಳಿದ್ದಾರೆ.