Asianet Suvarna News Asianet Suvarna News

'ಬಿಜೆಪಿಯಲ್ಲಿ ಸಿಗೋ ಗೌರವ ಬೇರೆಡೆ ಸಿಕ್ತಿದ್ರೆ ಪಕ್ಷ ಬಿಡ್ತಿರ್ಲಿಲ್ಲ'..!

ಜೆಪಿಯಲ್ಲಿ ನಮ್ಮನ್ನ ಅವರಲ್ಲಿ ಒಬ್ಬರಂತೆ ಕಾಣುತ್ತಾರೆ. ಬಿಜೆಪಿಯಲ್ಲಿ ಸಿಗುತ್ತಿರುವ ಗೌರವ ಬೇರೆ ಪಕ್ಷದಲ್ಲಿ ಸಿಕ್ಕಿದ್ರೆ ನಾವು ಪಕ್ಷ ಬಿಡ್ತಿರಲಿಲ್ಲ. ಯಡಿಯೂರಪ್ಪ ಅವರ ಮನೆಗೆ ಹೋದಾಗ ಅವರು ಕೊಡುವ ಗೌರವದಲ್ಲಿ ಶೇ‌.10 ರಷ್ಟು ಸಹ ಗೌರವ ಹಿಂದಿನ ಪಕ್ಷದಲ್ಲಿರಲಿಲ್ಲ. ಅವರು ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. 

JDS dont respect mlas like bjp says kc narayan gowda in mandya
Author
Bangalore, First Published Jan 19, 2020, 2:07 PM IST
  • Facebook
  • Twitter
  • Whatsapp

 ಮಂಡ್ಯ(ಜ.19): ಬಿಜೆಪಿಯಲ್ಲಿ ನಮ್ಮನ್ನ ಅವರಲ್ಲಿ ಒಬ್ಬರಂತೆ ಕಾಣುತ್ತಾರೆ. ಬಿಜೆಪಿಯಲ್ಲಿ ಸಿಗುತ್ತಿರುವ ಗೌರವ ಬೇರೆ ಪಕ್ಷದಲ್ಲಿ ಸಿಕ್ಕಿದ್ರೆ ನಾವು ಪಕ್ಷ ಬಿಡ್ತಿರಲಿಲ್ಲ. ಯಡಿಯೂರಪ್ಪ ಅವರ ಮನೆಗೆ ಹೋದಾಗ ಅವರು ಕೊಡುವ ಗೌರವದಲ್ಲಿ ಶೇ‌.10 ರಷ್ಟು ಸಹ ಗೌರವ ಹಿಂದಿನ ಪಕ್ಷದಲ್ಲಿರಲಿಲ್ಲ. ಅವರು ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ.  

ಜೆಡಿಎಸ್ ನಾಯಕರ ವಿರುದ್ದ ಮತ್ತೆ ಅಸಮಾಧಾನ ಹೊರ ಹಾಕಿದ ನಾರಾಯಣಗೌಡ, ಇಲ್ಲಿ ಜನರ ನಡುವೆ ಹೇಗಿರಬೇಕು, ಕೆಲಸ‌ ಹೇಗೆ ಮಾಡಬೇಕು ಅನ್ನೋದ್ರ ಬಗೆಗೆ ತರಬೇತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಚಿತ: ನಾರಾಯಣ ಗೌಡ

ನಾನು ಎರಡು ಬಾರಿ ಜೆಡಿಎಸ್ ಶಾಸಕನಾಗಿದ್ದೆ ಆದ್ರೆ ಈ ರೀತಿಯ ತರಬೇತಿ ಅವರೆಂದೂ‌ ಕೊಟ್ಟಿಲ್ಲ ಎನ್ನೋ ಮೂಲಕ ಜೆಡಿಎಸ್‌ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಅವರು ಎಲ್ಲ ಶಾಸಕರಿಗೂ ಸಚಿವ ಸ್ಥಾನ ಸಿಗುವ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios