ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣೆಗೆ ಹೋಗುವ ಮುನ್ನಾ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ.

 ಅಂಶಿ ಪ್ರಸನ್ನಕುಮಾರ್‌

 ಮೈಸೂರು : ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣೆಗೆ ಹೋಗುವ ಮುನ್ನಾ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ.

ಮೈಸೂರು ವಿಮಾನ ನಿಲ್ದಾಣವನ್ನು ಉನ್ನತೀಕರಿಸಲು ಭೂ ಸ್ವಾಧೀನಕ್ಕಾಗಿ ಕ್ರಮ ವಹಿಸಲಾಗಿದ್ದು, ಇದಕ್ಕಾಗಿ 320 ಕೋಟಿ ರು. ಗಳಷ್ಟುಹಂಚಿಕೆ ಮಾಡಲಾಗಿದೆ. ಸಂಸದ ಪ್ರತಾಪ್‌ ಸಿಂಹ ಅವರು ಇದಕ್ಕಾಗಿ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು.

ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಲಾಗಿದೆ.

ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಎರಡೂವರೆ ಎಕರೆ ಜಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಯನ್ನು 10 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು. ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟದಲ್ಲಿ ಸಮಗ್ರ ಅಭಿವೃದ್ಢಿಪಡಿಸಲಾಗುವುದು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಶಾಶ್ವತ ಸೌಲಭ್ಯ ಒದಗಿಸಲಾಗುವುದು.

ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗೆ 202 ಕೋಟಿ ರು. ಒದಗಿಸಲಾಗಿದೆ. ಮೈಸೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಐವಿಎಫ್‌ ಕ್ಲಿನಿಕ್‌ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ

ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ 6 ಕೋಟಿ ರು. ನೀಡಲಾಗಿದೆ.

ಮೈಸೂರು ಸೇರಿದಂತೆ ಆರು ಕಡೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಖಾಸಗಿ ಸಂಸ್ಥೆಗಳಿಂದ ಎಕ್ಸ್‌ಪ್ರೆಶನ್‌ ಆಫ್‌ ಇಂಟ್‌ರೆಸ್ಟ್‌ ಆಹ್ವಾನಿಸಲಾಗಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ಕೋಲಾರ ಮತ್ತು ರಾಮನಗರ ಇದಕ್ಕಾಗಿ ಆಯ್ಕೆಯಾದ ಇತರೆ ನಗರಗಳಾಗಿವೆ.

ಕಾಡಾನೆ ಹಾವಳಿ ತಡೆಗಟ್ಟಲು ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಕಾರ್ಯಪಡೆಯನ್ನು ರಚಿಸಲಾಗಿದೆ.

ಮೈಸೂರು- ಕುಶಾಲನಗರ ನಡುವೆ ಚತುಷ್ಫಥ ಹೆದ್ದಾರಿ ನಿರ್ಮಾಣಕ್ಕೂ 4,128 ಕೋಟಿ ರು. ಒದಗಿಸಲಾಗಿದೆ. 

ಮೈಸೂರು ವಿಮಾನ ನಿಲ್ದಾಣಕ್ಕೆ ನಗರ ಬಸ್‌ ನಿಲ್ದಾಣದಿಂದ ವೋಲ್ವೋ ಬಸ್‌ ಸೇವೆ

ಮೈಸೂರು : ಮೈಸೂರು ವಿಮಾನ ನಿಲ್ದಾಣಕ್ಕೆ ನಗರ ಬಸ್‌ ನಿಲ್ದಾಣದಿಂದ ವೋಲ್ವೋ ಬಸ್‌ ಸೇವೆ ಆರಂಭಿಸಿದೆ. ಮಂಡಕಳ್ಳಿಯಲ್ಲಿನ ವಿಮಾನ ನಿಲ್ದಾಣಕ್ಕೂ ನಗರ ಬಸ್‌ ನಿಲ್ದಾಣ, ಗ್ರಾಮಾಂತರ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಜೆ.ಪಿ. ನಗರ ಮಾರ್ಗವಾಗಿ ವೋಲ್ವೋ ಬಸ್‌ ಸಂಚರಿಸಲಿದೆ.

ಬೆಂಗಳೂರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಜಸ್ಟಿಕ್‌ನಿಂದ ಮತ್ತು ಮೈಸೂರಿನಿಂದ ಫ್ಲೈ ಬಸ್‌ ಹೆಸರಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್‌ ಸೇವೆ ಒದಗಿಸಿರುವ ಮಾದರಿಯಲ್ಲಿಯೇ ಮೈಸೂರಿನ ಮಂಡಕಳ್ಳಿಯಲ್ಲಿನ ವಿಮಾನ ನಿಲ್ದಾಣಕ್ಕೂ ನಗರ ಬಸ್‌ ನಿಲ್ದಾಣ, ಗ್ರಾಮಾಂತರ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಜೆ.ಪಿ. ನಗರ ಮಾರ್ಗವಾಗಿ ವೋಲ್ವೋ ಬಸ್‌ ಸಂಚರಿಸಲಿದೆ.

ಡಿ.5 ರಂದು ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ವೇತನ ಸಹಿತ ರಜೆ

ಮೈಸೂರಿನಿಂದ ಪ್ರತಿನಿತ್ಯ ಚೆನ್ನೈಗೆ ಎರಡು ಬಾರಿ, ಹೈದರಾಬಾದ್‌ಗೆ ಎರಡು ಬಾರಿ, ಗೋವಾ, ಕೊಚ್ಚಿನ್‌ ಮತ್ತು ಕೊಚ್ಚಿನ್‌ಗೆ ವಿಮಾನಗಳು ಸಂಚರಿಸುವುದರಿಂದ ವಿಮಾನಗಳು ಬಂದಿಳಿಯುವ ವೇಳೆಗೆ ಸರಿಯಾಗಿ ವೋಲ್ವೋ ಬಸ್‌ ಸಿದ್ಧವಿರುತ್ತದೆ. ಪ್ರಯಾಣಿಕರಿಂದಲೂ ಬಸ್‌ಗೆ ಬೇಡಿಕೆ ಹೆಚ್ಚಾಗಿದೆ.

ವಿಮಾನ ನಿಲ್ದಾಣ ನಗರದ ಹೊರ ವಲಯದಲ್ಲಿ ಇರುವುದರಿಂದ ಟ್ಯಾಕ್ಸಿ ಅಥವಾ ಸ್ವಂತ ಕಾರನ್ನು ಪ್ರಯಾಣಿಕರು ಅವಲಂಬಿಸಬೇಕು. ಕೆಲವೊಂದು ವೇಳೆ ತುರ್ತಾಗಿ ಟ್ಯಾಕ್ಸಿ ವ್ಯವಸ್ಥೆ ದೊರಕದಿದ್ದಲ್ಲಿ ಅಥವಾ ಟ್ಯಾಕ್ಸಿ ವೆಚ್ಚವೇ ದುಬಾರಿಯಾಗುವುದರಿಂದ ವೋಲ್ವೋ ಬಸ್‌ ಸೇವೆಯನ್ನು ಕಲ್ಪಿಸಿರುವುದು ವಿಮಾನಯಾನಾರ್ಥಿಗಳಿಗೆ ಅನುಕೂಲವಾಗಿದೆ. ಬಸ್‌ಗಳಲ್ಲಿ ಅಳವಡಿಸಿರುವ ತಂತ್ರಜ್ಞಾನದ ಸಾಹಯದಿಂದ ವಿಮಾನ ಎಷ್ಟೊತ್ತಿಗೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ.

ಆ ಸಮಯಕ್ಕೆ ಹತ್ತು ನಿಮಿಷ ಮುಂಚಿತವಾಗಿ ವೋಲ್ವೋ ಬಸ್‌ ತೆರಳುತ್ತದೆ. ಪ್ರಸ್ತುತ ಪ್ರತಿ ಟ್ರಿಪ್‌ಗೆ ಕನಿಷ್ಠ 15 ರಿಂದ 20 ಮಂದಿ ಪ್ರಯಾಣಿಕರು ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಮಧ್ಯಾಹ್ನ ಮತ್ತು ಸಂಜೆಯ ವೇಳೆ ಬಸ್‌ಗೆ ಬೇಡಿಕೆ ಹೆಚ್ಚಾಗಿದೆ. ರಾತ್ರಿ ವೇಳೆ ಕುಟುಂಬ ಸಮೇತರಾಗಿ ಆಗಮಿಸುವವರು ಮತ್ತು ಒಬ್ಬರೇ ಆಗಮಿಸುವ ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ.

ಚಿಕ್ಕಬಳ್ಳಾಪುರ: ಕುಮಾರಸ್ವಾಮಿಗೆ ಕೈ ಕೊಟ್ಟ ಹೆಲಿಕಾಪ್ಟರ್‌