Asianet Suvarna News Asianet Suvarna News

Love Jihad ಮತ್ತೆ ಸದ್ದು : ಅನ್ಯಧರ್ಮೀಯ ಮೆಡಿಕಲ್ ಜೋಡಿ ವಿವಾಹ ತಡೆಯಲು ಯತ್ನ

  • ಕರಾವಳಿಯಲ್ಲಿ ಮತ್ತೆ ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದ ಲವ್ ಜಿಹಾದ್ ಸುದ್ದಿ
  •  ಅನ್ಯ ಧರ್ಮದ ಮೆಡಿಕಲ್ ಜೋಡಿಯ ವಿವಾಹಕ್ಕೆ ಲವ್ ಜಿಹಾದ್ ಎಂದು ಸಂಧಾನದ ಯತ್ನ
Against Love jihad sounds in Mangalore Swamiji try to convince Girl snr
Author
Bengaluru, First Published Nov 21, 2021, 10:37 AM IST
  • Facebook
  • Twitter
  • Whatsapp

ಮಂಗಳೂರು (ನ.21):  ಕರಾವಳಿಯಲ್ಲಿ (Coastal)  ಮತ್ತೆ ಲವ್ ಜಿಹಾದ್ (Love Jihad) ಸುದ್ದಿಯೊಂದು ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದೆ.  ಅನ್ಯ ಧರ್ಮದ ಮೆಡಿಕಲ್ ಜೋಡಿಯ (Medical Students) ವಿವಾಹಕ್ಕೆ (Marriage) ಲವ್ ಜಿಹಾದ್ ಎಂದು ಸಂಧಾನದ ಯತ್ನ ನಡೆಸಲಾಗಿದೆ. ಸದ್ಯ ಸಾಮಾಜಿಕ ತಾಣಗಳಲ್ಲಿ (Social media) ಹಿಂದೂ ಹುಡುಗಿ - ಮುಸ್ಲಿಂ ಹುಡುಗನ (Hindu Girl - Muslim Boy) ಮದುವೆ ಕಾರ್ಡ್ (wedding Card)  ವೈರಲ್ ಆಗಿದ್ದು,  ಲವ್ ಜಿಹಾದ್ ಚರ್ಚೆ ಬೆನ್ನಲ್ಲೇ ‌ಮದುವೆ ತಡೆಯಲು ಕರಾವಳಿಯ ಸ್ವಾಮೀಜಿಯೋರ್ವರು (Swamiji) ಮಧ್ಯಸ್ಥಿಕೆ ವಹಿಸಿದ್ದಾರೆ.

ಹಿಂದೂ ಯುವತಿ ಮನೆಗೆ ತೆರಳಿ ವಜ್ರದೇಹಿ ರಾಜಶೇಖರಾ ನಂದ ಸ್ವಾಮೀಜಿ ಮನವೊಲಿಕೆ ಯತ್ನ ನಡೆಸಿದ್ದಾರೆ. ಮುಸ್ಲಿಂ (Muslim) ಯುವಕನನ್ನು ವಿವಾಹವಾಗದಂತೆ ತಡೆಯಲು ಸಾಕಷ್ಟು ರೀತಿಯಲ್ಲಿ ಸ್ವಾಮೀಜಿ ಪ್ರಯತ್ನಿಸಿದ್ದಾರೆ.

ಮಂಗಳೂರಿನ (Mangaluru) ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ (Medical college) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಂದಿಗೆ ಸಾಕಷ್ಟು ಸಮಯ ಮಾತುಕತೆ ನಡೆಸಿ ಮನವೊಲಿಕೆ ಯತ್ನ ಮಾಡಿದ್ದಾರೆ

ಮೆಡಿಕಲ್ ವಿದ್ಯಾರ್ಥಿಯೇ ಆಗಿರುವ ಕೇರಳದ (Kerala) ಕಣ್ಣೂರಿನ (Kannur) ಯುವಕನ ಜೊತೆ ಯುವತಿ ವಿವಾಹ ಫಿಕ್ಸ್ ಆಗಿದ್ದು, ಕಣ್ಣೂರಿನಲ್ಲೇ ನವೆಂಬರ್ 29 ರಂದು ಇಬ್ಬರ ವಿವಾಹಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. 

ಕಳೆದ ಮೂರು ವರ್ಷಗಳಿಂದ ಪರಸ್ಪರ ಜೋಡಿ ಪ್ರೀತಿಸುತ್ತಿದ್ದು (Love), ಇದೀಗ ಕುಟುಂಬದವರು ಸೇರಿ ವಿವಾಹ ಮಾಡಲು ನಿಶ್ಚಯಿಸಿದ್ದಾರೆ. ಅದರೆ ಸದ್ಯ ಮದುವೆ ತಡೆಯಲು ಯುವತಿ ಮನೆಗೆ ಭೇಟಿ ನೀಡಿದ ವಜ್ರದೇಹಿ ಸ್ವಾಮೀಜಿ ಬಜರಂಗ (Bajarang dal) ದಳದ ಪ್ರಮುಖರ ಜೊತೆ ಯುವತಿ ಮತ್ತು ಮನೆಯವರ ಮನವೊಲಿಕೆ ಯತ್ನ ಮಾಡಿದ್ದಾರೆ. ಅಲ್ಲದೇ  ಸದ್ಯ ಮದುವೆ ಮುಂದೂಡಿ ಈ ಬಗ್ಗೆ ಯೋಚಿಸುವಂತೆ ಒತ್ತಾಯ ಮಾಡಿದ್ದಾರೆ. 

ಸ್ವಾಮೀಜಿ ಭೇಟಿಯ ವೇಳೆಯೂ ನಿರ್ಧಾರ ಬದಲಿಸದ ಯುವತಿ ಮತ್ತು ಕುಟುಂಬದವರು (Family) ಮುಸ್ಲಿಂ ಯುವಕನ ಮದುವೆಯಾದರೂ ಹಿಂದೂ ಧರ್ಮದಲ್ಲೇ ಮುಂದುವರೆಯುವ ಬಗ್ಗೆ ಸ್ವಾಮೀಜಿಗೆ ತಿಳಿಸಿದ್ದಾರೆ. ಸದ್ಯ ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿರೋ ಅನ್ಯ ಧರ್ಮೀಯ ವಿವಾಹ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. 

ಕ್ರೈಸ್ತ ಯುವತಿಯರ ಮೇಲೆ ಲವ್ ಜಿಹಾದ್ : 

 ಕೇರಳದ ಕ್ರೈಸ್ತ ಪಾದ್ರಿ ಜೋಸೆಫ್‌ ಕಲ್ಲ ರಂಗಟ್‌ ಅವರು ನೀಡಿದ ‘ಲವ್‌ ಜಿಹಾದ್‌’ (Love Jihad) ಹಾಗೂ ‘ಮಾದಕ ವಸ್ತು ಜಿಹಾದ್‌’ ಹೇಳಿಕೆ ಈಗ ಕೇರಳ ರಾಜಕೀಯದಲ್ಲಿ (Politics) ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಗುರುವಾರ ಸಭೆಯೊಂದರಲ್ಲಿ ಮಾತನಾಡಿದ್ದ ಜೋಸೆಫ್‌ ಅವರು, ‘ಕ್ರೈಸ್ತ ಯುವತಿಯರನ್ನು ಲವ್‌ ಜಿಹಾದ್‌ ಹಾಗೂ ಡ್ರಗ್ಸ್‌ ಜಿಹಾದ್‌ ಖೆಡ್ಡಾಗೆ ಕೆಡವಲಾಗುತ್ತಿದೆ. ಎಲ್ಲ ತೋಳ್ಬಲ ಶಕ್ತಿ ನಡೆಯುವುದಿಲ್ಲವೋ ಅಲ್ಲಿ ಇದರ ಪ್ರಯತ್ನ ನಡೆಸಿ, ಇತರ ಧರ್ಮದ ಯುವ ಸಮುದಾಯಗಳನ್ನು ತೀವ್ರವಾದಿಗಳು ಹಾಳು ಮಾಡುತ್ತಿದ್ದಾರೆ’ ಎಂದು ಹೇಳಿದ್ದರು.

ಈ ಹೇಳಿಕೆ ಒಂದು ಧರ್ಮವನ್ನು ಉದ್ದೇಶಿಸಿ ನೀಡಿದ್ದಾಗಿದೆ ಎಂದು ಕೇರಳದ (Kerala) ಮುಸ್ಲಿಂ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ ನಡೆಸಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಇದು ವಾಕ್ಸಮರಕ್ಕೆ ಕಾರಣವಾಗಿದೆ.

ಜೋಸೆಫ್‌ ಅವರ ಹೇಳಿಕೆಯ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆದರೆ, ‘ಸತ್ಯ ಹೇಳಿದ ಜೋಸೆಫ್‌ರನ್ನು ಕಾಂಗ್ರೆಸ್‌ ಹಾಗೂ ಸಿಪಿಎಂ ಟಾರ್ಗೆಟ್‌ ಮಾಡುತ್ತಿವೆ. ಡ್ರಗ್ಸ್‌ ಜಿಹಾದ್‌ ಹಾಗೂ ಲವ್‌ ಜಿಹಾದ್‌ ತಡೆಗೆ ಕೇಂದ್ರವೇ ಕಾನೂನು ರೂಪಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.

Follow Us:
Download App:
  • android
  • ios