ಗದಗ(ನ.20): ಕೆಲದಿನಗಳಿಂದ ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗುತ್ತಿದೆ. ಹೀಗಾಗಿ ಜನತೆ ಆತಂಕದಲ್ಲಿದ್ದಾರೆ. ಇದೀಗ ಮತ್ತೆ ಭೂಕುಸಿತವಾದ ಘಟನೆ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಮಂಗಳವಾರ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭೂಕುಸಿತ ಉಂಟಾಗಿದ್ದರಿಂದ ಮನೆಯ ಮಾಲೀಕ ಮನೆ ಬಿಟ್ಟು ಹೋಗಿದ್ದಾನೆ. ನಬೀಸಾಬ್ ಮೊಕಾಶಿ ಅವರ ಮನೆಯಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. 

ನರಗುಂದದಲ್ಲಿ ದಿಢೀರ್‌ ಭೂ ಕುಸಿತ: ನಿದ್ದೇ ಮಾಡೋಕು ಭಯ ಪಡ್ತಿದ್ದಾರೆ ಜನ!

ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಎಂಟನೇ ಬಾರಿ ಕುಸಿದ ಭೂಕುಸಿತ ಉಂಟಾಗಿದಡೆ. ಇದರಿಂದ ಜನರು ‌ಕಂಗಾಲಾಗಿದ್ದಾರೆ. ಕಳೆದ ಎರಡು ಮೂರು ತಿಂಗಳಲ್ಲಿ ನಿರಂತರವಾಗಿ ಮಳೆಯಾಗಿದ್ದರಿಂದ ಹೀಗೆ ಭೂಕುಸಿತ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.