ಕಲಬುರಗಿ(ಫೆ.06):  ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸುವುದಕ್ಕೆ ಅಡ್ಡಿಯಾಗಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಕನ್ನಡ ಹೋರಾಟಗಾರರು ಹಾಗೂ ಹಿರಿಯ ಸಾಹಿತಿಗಳ ಜೊತೆ ಸಭೆ ನಡೆಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. 

ನುಡಿ ಜಾತ್ರೆ: ಪುಸ್ತಕ ಮಾರಾಟ ಸ್ವಲ್ಪ ಸಿಹಿ, ಸ್ವಲ್ಪ ಕಹಿ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಸೂಚಿಸಿದ್ದಾರೆ. ನಾಡು, ನುಡಿ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತದೆ. ಬಜೆಟ್ ಅಧಿವೇಶನದ ನಂತರ ಪ್ರತಿಪಕ್ಷಗಳು, ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರ ಜೊತೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 

ಕಲಬುರಗಿ ಸಾಹಿತ್ಯ ಸಮ್ಮೇಳನದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾಷಾ ಮಾಧ್ಯಮವೆಂಬುದು ಕನ್ನಡದ ಸಮಸ್ಯೆ ಮಾತ್ರ ಅಲ್ಲ, ಎಲ್ಲ ಪ್ರಾದೇಶಿಕ ಭಾಷೆಗಳ ಸಮಸ್ಯೆ. ಹೀಗಾಗಿ ಅಗತ್ಯಬಿದ್ದರೆ ಇತರ ರಾಜ್ಯಗಳ ಸರ್ಕಾರದ ಜೊತೆಗೂ ಚರ್ಚೆ ಮಾಡಿ ಒಟ್ಟಿಗೇ ನ್ಯಾಯಾಲಯಕ್ಕೆ ಅಥವಾ ಕೇಂದ್ರ ಸರ್ಕಾರದ ಬಳಿಗೆ ಹೋಗುವ ಬಗ್ಗೆ ಯೋಚಿಸೋಣ. ಅದಕ್ಕೆ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೇತೃತ್ವ ವಹಿಸುತ್ತಾರೆ ಎಂದೂ ತಿಳಿಸಿದ್ದಾರೆ. 

ಕನ್ನಡ ಸಾಹಿತ್ಯ ಸಮ್ಮೇಳನ: ತಾಯಿ ಭುವನೇಶ್ವರಿಗೆ ಪದಾರತಿ ಎತ್ತಿದ ಎಚ್‌ಎಸ್‌ವಿ!

ಇಂಗ್ಲಿಷ್ ವ್ಯಾಮೋಹ ಪೂತನಿಯಿದ್ದಂತೆ: 

ಹಿಂದೆ ಕೃಷ್ಣನನ್ನು ಕೊಲ್ಲಲು ಪೂತನಿ ಬಂದಂತೆ ಇಂದು ಇಂಗ್ಲಿಷ್ ವ್ಯಾಮೋಹವೆಂಬ ಪೂತನಿ ನಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಕೊಲ್ಲಲು ಬಂದಿದೆ. ಈ ವ್ಯಾಮೋಹದ ಪೂತನಿ ನಮ್ಮ ಮನೆ ಹಾಗೂ ಮನವನ್ನು ಆಕ್ರಮಿಸಿಕೊಂಡಿದೆ. ಇದನ್ನು ಮುಗಿಸಲು ಒಬ್ಬ ಕೃಷ್ಣ ಸಾಲದು. ಎಲ್ಲರೂ ಒಗ್ಗೂಡಿ ಕನ್ನಡದ ತೇರು ಎಳೆಯುವ ಸಂಕಲ್ಪ ಮಾಡಿದರೆ ಸಾಧ್ಯವಿದೆ. ಚೀನಾ, ರಷ್ಯಾ, ಜರ್ಮನಿಯಂತಹ ದೇಶಗಳಲ್ಲಿ ಇಂಗ್ಲಿಷ್ ಭಾಷೆಯೇ ಇಲ್ಲ. ಅವು ಮುಂದುವರೆದಿಲ್ಲವೇ? ಇಂಗ್ಲಿಷ್ ಅನ್ನ ಕೊಡುವ ಭಾಷೆ ಎಂಬುದು ಬರೀ ಭ್ರಮೆ ಎಂದು ವ್ಯಾಖ್ಯಾನಿಸಿದರು. ರೈತರು ಅಸಹಕಾರ ಚಳವಳಿ ಮಾಡಿದರೆ ಯಾವ ಭಾಷೆ, ಯಾವ ಕಂಪ್ಯೂಟರ್ ಕೂಡ ಅನ್ನ ಕೊಡುವುದಿಲ್ಲ. ರೈತನೇ ನಮಗೆ ಅನ್ನದಾತ. ಕನ್ನಡ ನುಡಿಯೇ ನಮಗೆ ಜೀವ ಎಂದು ರವಿ ಹೇಳಿದ್ದಾರೆ.