ಬೆಂಗಳೂರು, [ಫೆ. 23]: ಇಂದು ಸಂಭವಿಸಿದ ಅಗ್ನಿ ದುರಂತದಿಂದ ನಾಳೆ ಕೊನೆ ದಿನ ಅಂದ್ರೆ ಭಾನುವಾರ ಏರ್ ಶೋ ನಡೆಯುತ್ತೋ ಇಲ್ವೋ? ಎನ್ನುವ ಅನುಮಾನ ಬೇಡ. 

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್​ ಶೋ ನಾಳೆಯೂ ಎಂದಿನಂತೆ ನಡೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸಕ್ತ ಏರ್​ ಶೋ ನಾಳೆಗೆ [ಭಾನುವಾರ] ಕೊನೆಗೊಳ್ಳಲಿದ್ದು, ಅಂತಿಮ ದಿನದ ಪ್ರದರ್ಶನಗಳನ್ನ ಸ್ಥಗಿತಗೊಳಿಸದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ಈ ಹಿನ್ನೆಲೆಯಲ್ಲಿ ನಾಳೆಯೂ ಯಥಾಸ್ಥಿತಿಯಲ್ಲಿ ಬೆಳಗ್ಗೆ 10 ರಿಂದ 12 ಗಂಟೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರಗೆ 2 ಪ್ರದರ್ಶನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದ್ದರಿಂದ ಈಗಾಗಲೇ ಟಿಕೆಟ್ ಬುಕ್ ಮಾಡಿದವರು ಯಾವುದೇ ಆತಂಕ ಪಡದೆ ಏರ್ ಶೋವನ್ನು ಕಾಣ್ತುಂಬಿಕೊಳ್ಳಬಹುದು. ಅಗ್ನಿ ಅವಘಡದಿಂದ ಭಯಭೀತರಾಗಿರುವ ಜನರು, ಭಾನುವಾರ ಏರ್​ ಶೋ ಪ್ರದರ್ಶ ವೀಕ್ಷಣೆಗೆ ಬರುವವರ ಸಂಖ್ಯೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. 

ಏರೋ ಶೋನಲ್ಲಿ ಕಾರುಗಳು ಭಸ್ಮ, ವಾಹನ ಮಾಲೀಕರ ಅನುಕೂಲಕ್ಕಾಗಿ RTO ಸಹಾಯ ಕೇಂದ್ರ

ಏರ್​ ಶೋ ಗೇಟ್​ ನಂ. 5ರ ಪಾರ್ಕಿಂಗ್​ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೂರಾರು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಈ ಘಟನೆಯಿಂದ ಕೆಲಸಮಯ ಏರ್​ ಶೋ ಸ್ಥಗಿತಗೊಳಿಸಲಾಗಿತ್ತು. 

ಇನ್ನು ಏರ್​ ಶೋ ಉದ್ಘಾಟನೆಗೂ ತಾಲೀಮು ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಪೈಲೆಟ್ ಸಾವನ್ನಪ್ಪಿದ್ದ.