ಬೆಂಗಳೂರು ಉತ್ತರ ತಾಲೂಕಿನ ಮಾದವಾರದ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ ಬೆಳಗಾವಿ ವರೆಗೂ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಮಾಡಲು ಎಎನ್‌ಪಿಆರ್‌ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಹೆಚ್ಚು ಎಎನ್‌ಪಿಆರ್‌ ಕ್ಯಾಮೆರಾಗಳನ್ನು ಹಾಕಲಾಗಿದೆ ಎಂದು ತಿಳಿಸಿದ ಎಡಿಜಿಪಿ ಅಲೋಕ್‌ ಕುಮಾರ್‌

ಬೆಂಗಳೂರು(ಆ.04):  ಹೆಚ್ಚು ರಸ್ತೆ ಅಪಘಾತ ಆಗುತ್ತಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಪರಿಶೀಲನೆ ನಡೆಸಿದ ಎಡಿಜಿಪಿ ಅಲೋಕ್‌ ಕುಮಾರ್‌, ಈಗ ಬೆಂಗಳೂರು-ತುಮಕೂರು ರಸ್ತೆಯಲ್ಲಿಯೂ ಸಮೀಕ್ಷೆ ನಡೆಸಿದ್ದಾರೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಳವಡಿಸಿರುವ ಆಟೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನೀಷನ್‌ (ಎಎನ್‌ಪಿಆರ್‌) ಕ್ಯಾಮೆರಾಗಳನ್ನು ವೀಕ್ಷಿಸಿದ ಎಡಿಜಿಪಿ, ಬಳಿಕ ಅಧಿಕಾರಿಗಳಿಂದ ಸ್ಥಳಗಳ ಮಾಹಿತಿ ಪಡೆದರು.

ಬೆಂಗಳೂರು ಉತ್ತರ ತಾಲೂಕಿನ ಮಾದವಾರದ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ ಬೆಳಗಾವಿ ವರೆಗೂ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಮಾಡಲು ಎಎನ್‌ಪಿಆರ್‌ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಹೆಚ್ಚು ಎಎನ್‌ಪಿಆರ್‌ ಕ್ಯಾಮೆರಾಗಳನ್ನು ಹಾಕಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಎಐ ಸ್ಪೀಡ್‌ ಡಿಟೆಕ್ಟರ್‌ ಐದೇ ದಿನಕ್ಕೆ ಸ್ಟಾಪ್‌: ಅಪಫಾತ ತಡೆ ಚಿಂತನೆ ಫ್ಲಾಪ್‌..?

ಹೆದ್ದಾರಿಯ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 67 ಮಂದಿ ಸಾವು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ 49, ತುಮಕೂರು ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ 48 ಜನ ಸಾವನ್ನಪ್ಪಿದ್ದಾರೆ ಎಂದು ಅಲೋಕ್‌ ಕುಮಾರ್‌ ಮಾಹಿತಿ ನೀಡಿದರು.

ಹೆಚ್ಚು ಅಪಘಾತಗಳು ಆಗುವುದಕ್ಕೆ ರಸ್ತೆಯಲ್ಲಿ ಸೂಚನಾ ಫಲಕಗಳು ಇಲ್ಲದೇ ಇರುವುದು, ವಾಹನಗಳು ಅತೀ ವೇಗವಾಗಿ ಬರುವುದು, ಜೊತೆಗೆ ರಸ್ತೆಯಲ್ಲಿನ ಹಳ್ಳ ಗುಂಡಿಗಳೇ ಕಾರಣವಿರಬಹುದು. ಹಾಗಾಗಿ ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳನ್ನು ಕಡಿಮೆ ಮಾಡುದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಟೋಲ್‌ ಸಿಬ್ಬಂದಿ ಜೊತೆಯಲ್ಲಿ ಅಪಘಾತ ಸಂಭವಿಸಬಹುದಾದ ಬ್ಲಾಕ್‌ ಸ್ಪಾಟ್‌ಗಳಿಗೆ ಭೇಟಿ ಚರ್ಚೆ ನಡೆಸಿದರು.

ಈ ವೇಳೆ ನೆಲಮಂಗಲ ಡಿವೈಎಸ್‌ಪಿ ಗೌತಮ್‌ಮಾದನಾಯಕನಹಳ್ಳಿ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌, ನೆಲಮಂಗಲ ಹಾಗೂ ಗ್ರಾಮಾಂತರದ ಪೊಲೀಸರು ಇದ್ದರು.