Asianet Suvarna News Asianet Suvarna News

ಕೋಲಿ-ಕಬ್ಬಲಿಗ ಎಸ್‌ಟಿ ಪಟ್ಟಿಗೆ ಸೇರಿಸಿ: ಕಲಬುರಗಿ ಸಂಸದ ಉಮೇಶ ಜಾಧವ

ಟೋಕ್ರೆ ಕೋಲಿ, ಕೋಯಾ, ಡೋರ ಕೋಲಿಗಳಲ್ಲಿ ಉಳಿದಿರುವ ಕೋಲಿ, ಕಬ್ಬಲಿಗ, ಗಂಗಾಮತ ಮತ್ತು ಅದರ 34 ಸಮಾನಾರ್ಥಕ ಪದಗಳು ಕರ್ನಾಟಕದ ಎಸ್ ಟಿ ಪಟ್ಟಿಯ ಸೂಚಿಯಲ್ಲಿ ಸೇರಿಸುವುದು ಅವಶ್ಯಕವಾಗಿದೆ ಎಂದ ಕಲಬುರಗಿ ಸಂಸದ ಡಾ ಉಮೇಶ ಜಾಧವ.

Add to Koli Kabbaliga ST List Says Kalaburagi BJP MP Umesh Jadhav grg
Author
First Published Dec 14, 2023, 12:30 AM IST

ಕಲಬುರಗಿ(ಡಿ.14):  ಕುರುಬ, ಕೋಲಿ ಕಬ್ಬಲಿಗ, ಗಂಗಾಮತ ಮತ್ತು ಅದರ ಸಮಾನಾರ್ಥಕ ಪದಗಳನ್ನು ಕರ್ನಾಟಕದ ಎಸ್ಟಿ ಪಟ್ಟಿಗೆ ಸೇರಿಸಲು ಲೋಕಸಭೆಯಲ್ಲಿ ಶೂನ್ಯ ವೇಳೆ ಕಲಬುರಗಿ ಸಂಸದ ಡಾ ಉಮೇಶ ಜಾಧವ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರಕಾರಕ್ಕೆ ಈಗಾಗಲೇ ಶಿಫಾರಸು ಮಾಡಿದ್ದು ಪ್ರಸ್ತುತ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (rgi)ದಲ್ಲಿ ಮೌಲ್ಯಮಾಪನಕ್ಕಾಗಿ ಕಾದಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರದ ಎಲ್ಲಾ ಆಯೋಗಗಳನ್ನು ಕರ್ನಾಟಕದ ಎಸ್ಟಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರವು ಕಳುಹಿಸಿದ 1901 -1931ರ ಜನಗಣತಿ ವರದಿಯಲ್ಲಿ ಮತ್ತು ಜನಾಂಗೀಯ ಅಧ್ಯಯನ ವರದಿಯಲ್ಲಿ ಈ ಸಮೂದಯಾಗಳು ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ ಎಂದು ಸೂಚಿಸಿದ್ದಾರೆ.

ಕಲಬುರಗಿಗೆ ಹೊಸ ಆಸ್ಪತ್ರೆ ಮಂಜೂರು ಇಲ್ಲ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್

ಪ್ರಸ್ತುತ ಕೆಲವು ಸಮುದಾಯಗಳಾದ ಟೋಕ್ರೆ ಕೋಲಿ, ಡೋರ ಕೋಲಿ, ಕೋಯಾ, ಕೋಲ್ಚಾ, ಕೋಲ್ಗಾ, ರಾಜ್ ಕೋಯಾ, ಬಿನ್ ಕೋಯಾ ಇವೆಲ್ಲವೂ 1976ರಲ್ಲಿ ಕರ್ನಾಟಕದ ಎಸ್ಟಿ ಪಟ್ಟಿಯಲ್ಲಿ ಕ್ರಮವಾಗಿ 22 ಮತ್ತು 26ರಲ್ಲಿ ಸೇರಿಸಲಾಗಿದೆ. ಆದರೆ ಟೋಕ್ರೆ ಕೋಲಿ, ಕೋಯಾ, ಡೋರ ಕೋಲಿಗಳಲ್ಲಿ ಉಳಿದಿರುವ ಕೋಲಿ, ಕಬ್ಬಲಿಗ, ಗಂಗಾಮತ ಮತ್ತು ಅದರ 34 ಸಮಾನಾರ್ಥಕ ಪದಗಳು ಕರ್ನಾಟಕದ ಎಸ್ ಟಿ ಪಟ್ಟಿಯ ಸೂಚಿಯಲ್ಲಿ ಸೇರಿಸುವುದು ಅವಶ್ಯಕವಾಗಿದೆ ಎಂದರು.

ಗೋಂಡ–ಕುರುಬ ಸಮುದಾಯ ಎಸ್ ಟಿ ಪಟ್ಟಿಗೆ ಸೇರಿಸಿ:

ಹಾಗೆಯೇ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿಯೂ ಹಿಂದುಳಿದಿರುವ ಗೊಂಡ (ಕುರುಬ) ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಲು ಒತ್ತಾಯಿಸಿದರು.

ಸ್ವಾತಂತ್ರ್ಯದ ನಂತರ ಕುರುಬ ಸಮುದಾಯವು ಎಸ್ಟಿ ಸ್ಥಾನಮಾನವನ್ನು ಹೊಂದಿತ್ತು. 1977ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವವಹಿಸಿದ್ದ ನ್ಯಾಯಮೂರ್ತಿ ಎಲ್.ಜಿ. ಹಾವನೂರ್ ಅವರು ಕುರುಬರನ್ನು ಎಸ್ಟಿ ಪಟ್ಟಿಯಿಂದ ‘ಅತಿ ಹಿಂದುಳಿದ ವರ್ಗ’ ವರ್ಗಕ್ಕೆ ಸ್ಥಳಾಂತರಿಸಿದರು.

ಆದಾಗ್ಯೂ, ಕುರುಬ ಸಮಾನಾರ್ಥಕ ಪದಗಳೊಂದಿಗೆ ಬೀದರ್, ಯಾದಗಿರಿ, ಕಲಬುರಗಿ ಮತ್ತು ಮಡಿಕೇರಿಯಲ್ಲಿ ವಾಸಿಸುವವರು ಎಸ್‌ಟಿ ಪ್ರಯೋಜನಗಳನ್ನು ಪಡೆಯುವುದನ್ನು ಆಯೋಗವು ಪ್ರದೇಶ ನಿರ್ಬಂಧವನ್ನು ತಂದಿದೆ. ಆದರೆ ಇನ್ನೂ ಈ ಜಿಲ್ಲೆಗಳ ಜನರಿಗೆ ಶಿಕ್ಷಣಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಎಸ್‌ಟಿ ಪ್ರಮಾಣಪತ್ರಗಳನ್ನು ಪಡೆಯಲು ನಿರಾಕರಿಸಲಾಗಿದೆ. ಇತರೇ ರಾಜ್ಯಗಳಲ್ಲಿ ಕುರುಬರನ್ನು ಮಹಾರಾಷ್ಟ್ರದಲ್ಲಿ ಧನಗರ, ಗುಜರಾತ್‌ನಲ್ಲಿ ರಬಾರಿಸ ಅಥವಾ ರೈಕಾಸ್, ರಾಜಸ್ಥಾನದಲ್ಲಿ ದೇವಸಿಗಳು ಮತ್ತು ಹರಿಯಾಣದಲ್ಲಿ ಗಡರಿಯ ಎಂದು ಕರೆಯಲಾಗುತ್ತದೆ.

ಈ ನಿಟ್ಟಿನಲ್ಲಿ ನಾವು ಎಸ್‌ಟಿ ಸ್ಥಾನಮಾನ ಪಟ್ಟಿಗೆ ಹೊಸ ಸೇರ್ಪಡೆ ಕೇಳುತ್ತಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಕುರುಬರನ್ನು ಎಸ್ಟಿ ಎಂದು ವರ್ಗೀಕರಿಸಲಾಗಿತ್ತು. ಅವರು ಕೇವಲ ಆ ಪಟ್ಟಿಯಲ್ಲಿ ಮರುಸ್ಥಾಪಿಸಲು ಒತ್ತಾಯಿಸುತ್ತಿದ್ದಾರೆ. ಸಮುದಾಯದ ಬಹುಪಾಲು ಇನ್ನೂ ಕುಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಹುಲ್ಲುಗಾವಲುಗಳಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾರೆ. ಕಾಡು ಕುರುಬ ಮತ್ತು ಜೇನು ಕುರುಬರನ್ನು ಎಸ್ಟಿ ಎಂದು ಪರಿಗಣಿಸಿದಾಗ ಎಲ್ಲ ಕುರುಬರನ್ನು ಏಕೆ ಪರಿಗಣಿಸಬಾರದು?. ಗೊಂಡ, ರಾಜಗೊಂಡ ಮತ್ತು ಕುರುಬರು ಒಂದೇ ಆದರೆ ಕುರುಬರಿಗೆ ಎಸ್‌ಟಿ ಪ್ರಮಾಣಪತ್ರವನ್ನು ನೀಡುವುದಿಲ್ಲ.

ಕಲಬುರಗಿ: ಭೂಮಿಗಾಗಿ ನಡೆಯಿತೆ ವಕೀಲ ಈರಣ್ಣಗೌಡ ಹತ್ಯೆ?

ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ, ಕುರುಬ, ಗೊಂಡ ಎಂಬ ಪರ್ಯಾಯ ಪದವು ಸಂಪೂರ್ಣ ವಂಶಾವಳಿಯ ಅಧ್ಯಯನದ ವರದಿಯೊಂದಿಗೆ ಮಾ.4, 2014ರಂದು ಕರ್ನಾಟಕ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಅಂಗೀಕರಿಸಲ್ಪಟ್ಟಿದೆ ಮತ್ತು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಮನವರಿಕೆ ಮಾಡಿದರು.

ಕಳೆದ 3 ವರ್ಷಗಳಲ್ಲಿ ಈ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಲು ನಾನು ಸಚಿವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ್ದೇನೆ. ಇದು ನನ್ನ ಸಂಸದೀಯ ಕ್ಷೇತ್ರದಿಂದ ಮತ್ತು ಕರ್ನಾಟಕ ರಾಜ್ಯದಿಂದ ಬಹುಕಾಲದ ಬೇಡಿಕೆಯಾಗಿದೆ. ಈ ಎರಡು ಸಮುದಾಯದ ಜನರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದಾರೆ. ಅವರನ್ನು ಎಸ್ಟಿ ಪಟ್ಟಿಗೆ ಸೇರಿಸಿದರೆ, ಶಿಕ್ಷಣ ಮತ್ತು ಉದ್ಯೋಗ ಎರಡರಲ್ಲೂ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಸಹಾಯ ಆಗುತ್ತದೆ. ಅದ್ದಕ್ಕೆ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ರವರಿಗೆ ಮನವಿ ಮಾಡಲು ಬಯಸುತ್ತೇನೆ ಅದೇನೆಂದರೆ ಈಗ ಈ ಫೈಲ್ ಮೌಲ್ಯಮಾಪನಕ್ಕಾಗಿ RGI ಅಡಿಯಲ್ಲಿದೆ, ಈ ವಿಷಯವನ್ನು ತ್ವರಿತಗೊಳಿಸಿ ಕೋಲಿ ಕಬ್ಬಲಿಗ ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ನಾನು ವಿನಂತಿಸುತ್ತೇನೆ ಎಂದು ಲೋಕಸಭಾ ಅಧ್ಯಕ್ಷರ ಮೂಲಕ ಮನವಿ ಸಲ್ಲಿಸಿದರು.

Follow Us:
Download App:
  • android
  • ios