ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್‌ ಮತ್ತು ಐಎಚ್‌ಜಿ ಹೊಟೇಲ್ಸ್ ಭಾರತದಲ್ಲಿ ಐದು ಹೊಸ ಹೋಟೆಲ್‌ಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಡಿ, ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈನಲ್ಲಿ ಕಿಂಪ್ಟನ್‌, ಹಾಲಿಡೇ ಇನ್‌ ಬ್ರ್ಯಾಂಡ್‌ಗಳ ಹೋಟೆಲ್‌ಗಳು ತಲೆ ಎತ್ತಲಿವೆ. ಇದು ವಿಮಾನ ನಿಲ್ದಾಣ ಆಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.

ಮಂಗಳೂರು: ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ಹಾಗೂ ಐಎಚ್‌ಜಿ ಹೊಟೇಲ್ಸ್ ಅಂಡ್‌ ರೆಸಾರ್ಟ್ಸ್‌ ಭಾರತದಲ್ಲಿ ಐದು ಹೊಸ ಹೋಟೆಲ್‌ಗಳನ್ನು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಯೋಜನೆಯಡಿ ಸುಮಾರು 1,500 ಕೊಠಡಿಗಳಿರುವ ಹೋಟೆಲ್‌ಗಳು ನಿರ್ಮಾಣವಾಗಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರವಾಸೋದ್ಯಮ ವಲಯಕ್ಕೆ ಹೊಸ ಉತ್ತೇಜನ

ಈ ಒಪ್ಪಂದದ ಮೂಲಕ ಜೈಪುರದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಕಿಂಪ್ಟನ್ಸ್‌ ಹೊಟೇಲ್‌ ಅಂಡ್‌ ರೆಸ್ಟೋರೆಂಟ್‌ ಬ್ರ್ಯಾಂಡ್ ಪ್ರವೇಶಿಸಲಿದೆ. ಜೊತೆಗೆ ಹಾಲಿಡೇ ಇನ್‌ ಹಾಗೂ ಹಾಲಿಡೇ ಇನ್‌ ಎಕ್ಸ್‌ಪ್ರೆಸ್‌ ಹೋಟೆಲ್‌ಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಈ ಹೋಟೆಲ್‌ಗಳು ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ನಿರ್ಮಾಣವಾಗಲಿವೆ. ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ವಲಯಕ್ಕೆ ಈ ಯೋಜನೆ ಹೊಸ ಉತ್ತೇಜನ ನೀಡಲಿದೆ.

ಅದಾನಿ ಎಂಟರ್‌ಪ್ರೈಸಸ್ ನಿರ್ದೇಶಕ ಪ್ರಣವ್‌ ಅದಾನಿ ಮಾತನಾಡಿ, ಭಾರತದ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರಕ್ಕೆ ಅನುಗುಣವಾಗಿ ವಿಶ್ವಮಟ್ಟದ ಪ್ರವಾಸ ಮತ್ತು ವಸತಿ ಅನುಭವವನ್ನು ರೂಪಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.

ಐಎಚ್‌ಜಿ ದಕ್ಷಿಣ ಪಶ್ಚಿಮ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಸುದೀಪ್‌ ಜೈನ್‌, ಭಾರತದಲ್ಲಿ ಲಕ್ಸುರಿ ಮತ್ತು ಬಿಸಿನೆಸ್ ಹೋಟೆಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಸಹಭಾಗಿತ್ವ ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.