ಮೈಸೂರು, [ಫೆ.02]: ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತ್ಯುನ್ನತ ಸ್ಥಾನಕ್ಕೆ ತಲುಪಿದ್ದರೂ ತಮ್ಮ ಸರಳತೆಯನ್ನು ಮರೆತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಘಟನೆಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. 

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಮಠದಲ್ಲಿ ಇಂದು [ಶನಿವಾರ] ನಡೆದ ಜಾತ್ರಾ ಮಹೋತ್ಸವದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಕಾಲಿಗೆ ನಮಸ್ಕರಿಸಿ ತಮ್ಮ ಸರಳತೆಯನ್ನು ಮೆರೆದಿದ್ದಾರೆ. 

ದರ್ಶನ್ ವೇದಿಕೆ ಮೇಲೆ ಕುಳಿತ್ತಿದ್ದರು. ನಂತರ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಬರುತ್ತಿದ್ದಂತೆಯೇ ಅವರ ಬಲಿಗೆ ಹೋಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

 ಅಭಿಮಾನಿಗಳನ್ನು ಸದಾ ಕಾಲ ಸ್ಮರಿಸುವ ದರ್ಶನ್, ಹಿರಿಯರನ್ನೂ ಗೌರವಿಸುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ. 

"

ಇನ್ನು ಸಿದ್ದರಾಮಯ್ಯ ಎಲ್ಲೇ ಹೋಗಲಿ ಅಭಿಮಾನಿಗಳು ಕಾಲಿಗೆ ಕಾಲಿಗೆರಗಿರುವುದನ್ನು ಇಲ್ಲಿ ಸ್ಮರಿಸಬಹುದು. ಮೊನ್ನೇ ಅಷ್ಟೇ ಮಹಿಳೆಯರು ಸಹ ಸಿದ್ದ ಕಾಲಿಗೆ ಮನಸ್ಕರಿಸಿದ್ದರು.

ಇದೇ ವೇಳೆ ತಾವು ಸುತ್ತೂರು ಮಠದಿಂದ ನಡೆಸಲ್ಪಡುತ್ತಿರುವ ಜೆಎಸ್‌ಎಸ್ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡಿರುವುದನ್ನು ಸ್ಮರಿಸಿಕೊಂಡರು. ತಮ್ಮ ತಂದೆ ಅನಾರೋಗ್ಯಕ್ಕೊಳಗಾದ ವೇಳೆ ಜೆಎಸ್‌ಎಸ್ ಆಸ್ಪತ್ರೆ ನಮಗೆ ತುಂಬಾ ಸಹಾಯ ಮಾಡಿದೆ ಎಂದು ಹೇಳಿದರು.