Asianet Suvarna News Asianet Suvarna News

ಕಾಡಾನೆ ಹಾವಳಿ ತಡೆ: ಸಿಎಂ ಭೇಟಿ ಮಾಡಿದ ಸಂಸದ ಡಿ.ಕೆ.ಸುರೇಶ್‌

ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳುವ ಸಂಬಂಧ ಸಂಸದ ಡಿ.ಕೆ.ಸುರೇಶ್ ಅವರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ಕುರಿತು ತಮ್ಮ ಸಾಮಾಜಿಕ ಎಕ್ಸ್ ಟ್ವೀಟರ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 

Prevention of wild elephant menace CM Siddaramaiah met MP DK Suresh gvd
Author
First Published Nov 12, 2023, 8:14 PM IST

ರಾಮನಗರ (ನ.12): ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳುವ ಸಂಬಂಧ ಸಂಸದ ಡಿ.ಕೆ.ಸುರೇಶ್ ಅವರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ಕುರಿತು ತಮ್ಮ ಸಾಮಾಜಿಕ ಎಕ್ಸ್ ಟ್ವೀಟರ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ನಿರಂತರವಾಗಿ ಆನೆ ದಾಳಿ ನಡೆಯುತ್ತಿದೆ. ರೈತರ ತೋಟಕ್ಕೆ ನುಗ್ಗುವ ಆನೆಗಳು ಫಸಲು ನಾಶ ಮಾಡುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜತೆಗೆ, ಆನೆದಾಳಿ ನಿಯಂತ್ರಣ ಮಾಡುವಂತೆ ಆಗ್ರಹಿಸಿ ರೈತರು ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಹಲವು ಬಾರಿ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ಹಾಗಾಗಿ ಸಂಸದ ಡಿ.ಕೆ.ಸುರೇಶ್ ಅವರು, ಕಾಡಾನೆ ಹಾವಳಿ ನಿಯಂತ್ರಣ ಸಂಬಂಧ ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ ನಿರಂತರವಾಗಿ ಜಮೀನುಗಳ ಮೇಲೆ ಆಗುತ್ತಿರುವ ಕಾಡಾನೆ ದಾಳಿಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಕಾಡಾನೆ ದಾಳಿಯ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಹಾಗೂ ಅದಕ್ಕೆ ಬೇಕಾದ ಅನುದಾನದ ಬಗ್ಗೆ ಮನವಿ ಮಾಡಲಾಗಿದೆ. 

ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು

ಪ್ರಮುಖವಾಗಿ ರಾಮನಗರ ಜಿಲ್ಲೆಯ ಮೂರು ದಿಕ್ಕುಗಳಲ್ಲೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ವಿಭಾಗ ಹಾಗೂ ರಾಮನಗರ ಪ್ರಾದೇಶಿಕ ವಿಭಾಗ ಬರುವ ಹಿನ್ನೆಲೆಯಲ್ಲಿ ನಿರಂತರ ಕಾಡಾನೆ ದಾಳಿ ಉಂಟಾಗುವ 221 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಯ ತಡೆಗೋಡೆಗೆ ಅನುದಾನ ಬಿಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ವಿವಿಧ ಕಾಮಗಾರಿಗಳ ಅನುದಾನ ಬಿಡುಗಡೆ ವಿಚಾರವಾಗಿಯೂ ಪ್ರಸ್ತಾಪಿಸಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ, ನೆಲಮಂಗಲ ಶಾಸಕ ಎನ್.ಶ್ರೀನಿವಾಸ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್ ಇತರರು ಹಾಜರಿದ್ದರು.

ಬರಗಾಲದ ನಡುವೆ ಚಿಗುರಿದ್ದ ಬೆಳೆಗೆ ಕಾಡಂದಿ ಕಾಟ:

ಬರಗಾಲದ ನಡುವೆಯೂ ಬಿತ್ತಿದ ರಾಗಿ ಬೆಳೆ ಚೆನ್ನಾಗಿ ಫಸಲು ಬಂದಿದ್ದು, ಇನ್ನೇನು ಲಾಭಗಳಿಸುವ ನಿರೀಕ್ಷೆಯಲ್ಲಿದ್ದ ರೈತನಿಗೆ ಕಾಡುಹಂದಿಗಳು ಶಾಕ್ ಕೊಟ್ಟಿದೆ. ರಾಮನಗರ ತಾಲೂಕು ಕೈಲಾಂಚ ಹೋಬಳಿ ತುಂಬೇನಹಳ್ಳಿಯ ರೈತರಿಗೆ ಕಾಡು ಹಂದಿಗಳ‌ ಕಾಟ‌ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರೈತರು ಏನು ಬೆಳೆದರೂ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲಾರದಂಥಾ ಪರಿಸ್ಥಿತಿ ಎದರಾಗಿದೆ. ಇನ್ನೂ ತುಂಬೇನಹಳ್ಳಿಯ ರೈತ ರಾಮಯ್ಯ ಕೂಡ ಕಾಡುಹಂದಿಗಳ‌ ಹಾವಳಿಯಿಂದಾಗಿ ಲಕ್ಷಾಂತರ ರೂಪಾಯಿ‌ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಕಾಡು ಪ್ರಾಣಿ ಕಾಯದ ಅರಣ್ಯ ಇಲಾಖೆ ಪರಿಹಾರ ನೀಡಲಿ ಅಂತ ರೈತ ರಾಮಯ್ಯ ಅರಣ್ಯಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.

ತುಂಬೇನಹಳ್ಳಿಯ ಒಂದು ಎಕರೆ ತೋಟದಲ್ಲಿ ಸಾಗುವಳಿ ಭೂಮಿಯಲ್ಲಿ ರಾಗಿ ಬೆಳೆದಿದ್ದ ರಾಮಯ್ಯ ಎಂಬ ರೈತ ಬರಗಾಲದಲ್ಲೂ ರಾಗಿ‌ ತೆನೆ ಉತ್ತಮ ಫಸಲು ಬಂದಿದ್ದಕ್ಕೆ ಬಹಳ‌ ಖಷಿಯಾಗುದ್ರು, ಆದರೆ ಅವರ ಹೊಲಕ್ಕೆ ನುಗ್ಗಿದ್ದ ಕಾಡಂದಿಗಳ ಗುಂಪು ಒಂದು ತೆನೆಯೂ ಬಿಡದೆ ಎಲ್ಲವನ್ನೂ ತಿಂದು ಹಾಕಿದೆ. ಮಗ ಸಾಲ ಮಾಡಿ, ಹೊಲ‌ ಬಿತ್ತಿದ್ದು ಈಗ ಉಪವಾಸ ಬೀಳೋ ಪರಿಸ್ಥಿತಿ ಬಂದಿದೆ ಅಂತ ರಾಮಯ್ಯ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.

ತಮ್ಮ ಹೊಲಗದ್ದೆಗಳಿಗೆ ಪದೇ ಪದೇ ಕಾಡಂದಿಗಳ ಬರುತ್ತಿದ್ದು ಕಾಡು ಮೃಗಗಳ ಕಾಟ‌ ಹೆಚ್ಚಾಗಿದೆ ಅಂತ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡ್ರೂ ಅರಣ್ಯಾಧಿಕಾರಿಗಳು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ,‌ ಹುಲಿಯುಗುರು ವಿಚಾರಕ್ಕೆ ಇಡೀ ರಾಜ್ಯಾಂದ್ಯಂತ ಕಾರ್ಯಾಚರಣೆ ಮಾಡಿದ ಅಧಿಕಾರಿಗಳು ರೈತರ ಗೋಳು ಯಾಕೆ ಕೇಳುತ್ತಿಲ್ಲ ಅಂತ ರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ನೊಂದಿರುವ ರೈತರ ಕಣ್ಣೀರು ಒರೆಸುವ ಕೆಲಸ ಅರಣ್ಯ ಇಲಾಖೆ ಮಾಡಬೇಕಾಗಿದೆ. 

Follow Us:
Download App:
  • android
  • ios