ಆಧಾರ್ ಜೋಡಣೆ, ತಿದ್ದುಪಡಿಗೆ ಹಣ ವಸೂಲಿ: ಜನಸಾಮಾನ್ಯರ ಆಕ್ರೋಶ..!
ಬೇಕಾಬಿಟ್ಟಿಯಂತೆ ಹಣ ವಸೂಲಿ ಮಾಡುವ ಕೇಂದ್ರಗಳ ವಿರುದ್ಧ ತಹಸೀಲ್ದಾರ್‌ಗೆ ಸಂಘ ಸಂಸ್ಥೆಗಳ ಮುಖಂಡರು ದೂರು ನೀಡಿದ್ದಾರೆ. ಆದರೆ ಇಲ್ಲಿವರೆಗೆ ಯಾರೊಬ್ಬರ ವಿರುದ್ಧ ಕ್ರಮಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಮಿನಿ ವಿಧಾನಸೌಧ ಎದುರಲ್ಲೇ ಕೇಂದ್ರಗಳು ಇದ್ದು, ಒಂದು ಬಾರಿಯೂ ಭೇಟಿ ನೀಡದೆ ಸಿಬ್ಬಂದಿಯನ್ನು ವಿಚಾರಣೆ ಮಾಡದೇ ಇರುವುದು ಅನುಮಾನ ದಾರಿ ಮಾಡಿ ಕೊಟ್ಟಿದೆ.
ದೇವದುರ್ಗ(ಜು.21): ರಾಜ್ಯ ಸರ್ಕಾರ ಐದು ಗ್ಯಾರೆಂಟಿ ಜಾರಿ ಬಳಿಕ ಆಧಾರ್ ಕಾರ್ಡ್ ಜೋಡಣೆ, ತಿದ್ದುಪಡಿಗೆ ಮನಬಂದಂತೆ ಜನರಿಂದ ಹಣ ವಸೂಲಿ ಮಾಡುವ ಆರೋಪಗಳು ಕೇಳಿ ಬರುತ್ತಿವೆ. ಕರ್ನಾಟಕ್ ಒನ್, ಗ್ರಾಮ ಒನ್ ಕೇಂದ್ರದಲ್ಲಿ 30 ರು. ದರ ನಿಗದಿ ಮಾಡಲಾಗಿದೆ. ಆದರೆ, ಏಜೆನ್ಸಿ ಮೂಲಕ ಆರಂಭಿಸಿರುವ ಕೇಂದ್ರಗಳು ಏಜೆನ್ಸಿ ದರದ ನಾಮಫಲಕ ಹಾಕದೆ ಬಡವರ ಜೇಬಿಗೆ ಕತ್ತರಿ ಹಾಕುವಂತ ಕೆಲಸ ನಡೆದಿದೆ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ.
ಬೇಕಾಬಿಟ್ಟಿಯಂತೆ ಹಣ ವಸೂಲಿ ಮಾಡುವ ಕೇಂದ್ರಗಳ ವಿರುದ್ಧ ತಹಸೀಲ್ದಾರ್‌ಗೆ ಸಂಘ ಸಂಸ್ಥೆಗಳ ಮುಖಂಡರು ದೂರು ನೀಡಿದ್ದಾರೆ. ಆದರೆ ಇಲ್ಲಿವರೆಗೆ ಯಾರೊಬ್ಬರ ವಿರುದ್ಧ ಕ್ರಮಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಮಿನಿ ವಿಧಾನಸೌಧ ಎದುರಲ್ಲೇ ಕೇಂದ್ರಗಳು ಇದ್ದು, ಒಂದು ಬಾರಿಯೂ ಭೇಟಿ ನೀಡದೆ ಸಿಬ್ಬಂದಿಯನ್ನು ವಿಚಾರಣೆ ಮಾಡದೇ ಇರುವುದು ಅನುಮಾನ ದಾರಿ ಮಾಡಿ ಕೊಟ್ಟಿದೆ.
ದುರ್ಗಾ ದೇವಸ್ಥಾನಕ್ಕೆ ನುಗ್ಗಿ ದಾಂಧಲೆ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಗೃಹ ಲಕ್ಷ್ಮೀ ಯೋಜನೆಗೆ ಸಿಎಂ ಚಾಲನೆ ನೀಡಿದ್ದಾರೆ. ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಕ್ಕೆ ಗುರುವಾರದಿಂದಲೇ ಮಹಿಳೆಯ ಸಂಖ್ಯೆ ಹೆಚ್ಚಾಗಲಿದೆ. ಆಧಾರ್ ಲಿಂಕ್, ತಿದ್ದುಪಡಿಗೆ ಇಂತಿಷ್ಟುಹಣ ದರ ನಿಗದಿ ಮಾಡಿದ್ದಾರೆ. ಆದರೆ, ಕೇಂದ್ರಗಳಲ್ಲಿ 150 ರಿಂದ 250 ರು. ಹಣ ವಸೂಲಿ ಮಾಡಲಾಗುತ್ತಿದೆ. ನಾಡಕಚೇರಿಗಳು ಇದ್ದು ಇಲ್ಲದಂತಾಗಿವೆ ಎಂದು ರೈತ ಸಂಘದ ಮುಖಂಡ ಶಿವನಗೌಡ ಆರೋಪಿಸಿದ್ದಾರೆ.
ಹಳ್ಳಿಗಳಿಂದ ಜನರು ಬೆಳ್ಳಂಬೆಳಗ್ಗೆ ಆಧಾರ್ ಕೇಂದ್ರಗಳಿಗೆ ಬರುತ್ತಿದ್ದಾರೆ. ಹಣ ಕೊಟ್ಟವರಿಗೆ ಆಧಾರ್ ಲಿಂಕ್ ಎಂಬ ವಾತಾವರಣ ನಿರ್ಮಾಣವಾದ್ದರಿಂದ ಮೂರ್ನಾಲ್ಕು ದಿನಗಳಿಂದ ಪಟ್ಟಣಕ್ಕೆ ಅಲೆಯುವಂತ ದುಸ್ಥಿತಿ ನಿರ್ಮಾಣಗೊಂಡಿದೆ. ಶಾಲಾ ಮಕ್ಕಳ ಬ್ಯಾಂಕ್ ಪಾಸ್‌ಬುಕ್‌ಗೆ ಆಧಾರ್ ಲಿಂಕ್‌ಗಾಗಿ ಅಲೆದಾಟ ತಪ್ಪುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟಂತ ಅಧಿಕಾರಿಗಳು ಕರ್ನಾಟಕ ಒನ್, ಗ್ರಾಪ ಒನ್ ಕೇಂದ್ರದ ಮೇಲೆ ಕ್ರಮಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಏಜೆನ್ಸಿ ಮೂಲಕ ಕಾರ‍್ಯನಿರ್ವಹಿಸುತ್ತಿರುವ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಆಧಾರ್ ಲಿಂಕ್, ತಿದ್ದುಪಡಿ ಮನಬಂದಂತೆ ಹಣ ವಸೂಲಿ ಮಾಡಲಾಗುತ್ತಿದೆ. ತಹಸೀಲ್ದಾರ್ ಕ್ರಮಕೈಗೊಳ್ಳದೆ ಹೋದಲ್ಲಿ ಹೋರಾಟ ಅನಿವಾರ್ಯ ಅಂತ ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ, ಅಕ್ಕರಕಿ ತಿಳಿಸಿದ್ದಾರೆ.
ಸಿಂಧನೂರು: ಅಶ್ಲೀಲ ಮೆಸೇಜ್ 2 ಕೋಮುಗಳ ನಡುವೆ ಘರ್ಷಣೆ, ಪರಿಸ್ಥಿತಿ ಉದ್ವಿಗ್ನ!
ಆಧಾರ್ ಲಿಂಕ್, ತಿದ್ದುಪಡಿ ಒಬ್ಬರಿಗೆ 150ರಿಂದ 200ರು. ಹಣ ವಸೂಲಿ ಮಾಡಲಾಗುತ್ತಿದೆ. ಇಲ್ಲಿನ ಸಮಸ್ಯೆ ಕುರಿತು ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದು ಒಪ್ಪದ ಅನುಮಾನ ವ್ಯಕ್ತವಾಗುತ್ತಿದೆ ಎಂದು ವಿಎಸ್‌ಎಸ್‌ಎನ್ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಪಾಟೀಲ್ ಹೇಳಿದ್ದಾರೆ.
ಆಧಾರ್ ಲಿಂಕ್, ತಿದ್ದುಪಡಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. ಕರ್ನಾಟಕ ಒನ್, ಗ್ರಾಮ ಒನ್ ಸಿಬ್ಬಂದಿಯನ್ನು ಕರೆದು ವಾರ್ನಿಂಗ್ ಮಾಡುತ್ತೇನೆ. ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ವಸೂಲಿ ಮಾಡಿದ್ದಲ್ಲಿ ಪರವಾನಗಿ ರದ್ದು ಮಾಡುತ್ತೇನೆ ಎಂದು ತಹಸೀಲ್ದಾರ್ ವೈ.ಕೆ.ಬಿದರಿ ತಿಳಿಸಿದ್ದಾರೆ.