ಸಿಂಧನೂರು: ಅಶ್ಲೀಲ ಮೆಸೇಜ್ 2 ಕೋಮುಗಳ ನಡುವೆ ಘರ್ಷಣೆ, ಪರಿಸ್ಥಿತಿ ಉದ್ವಿಗ್ನ!
ತಾಲೂಕಿನ ಬಂಗಾಲಿ ಕ್ಯಾಂಪ್ ನಂ.2ನ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಅನ್ಯಕೋಮಿನ ಯುವಕನೊಬ್ಬ ಅಶ್ಲೀಲ ಮೆಸೇಜ್ ಮಾಡಿದ ಹಿನ್ನೆಲೆಯಲ್ಲಿ ಎರಡು ಕೋಮಿನ ಯುವಕರ ಮಧ್ಯೆ ಗುಂಪು-ಘರ್ಷಣೆ ನಡೆದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸಿಂಧನೂರು(ರಾಯಚೂರು (ಜು.18) : ತಾಲೂಕಿನ ಬಂಗಾಲಿ ಕ್ಯಾಂಪ್ ನಂ.2ನ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಅನ್ಯಕೋಮಿನ ಯುವಕನೊಬ್ಬ ಅಶ್ಲೀಲ ಮೆಸೇಜ್ ಮಾಡಿದ ಹಿನ್ನೆಲೆಯಲ್ಲಿ ಎರಡು ಕೋಮಿನ ಯುವಕರ ಮಧ್ಯೆ ಗುಂಪು-ಘರ್ಷಣೆ ನಡೆದ ಘಟನೆ ಭಾನುವಾರ ರಾತ್ರಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೋಮವಾರ ಬಳ್ಳಾರಿ ವಲಯ ಐಜಿ ಲೋಕೇಶ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಮೆಸೇಜ್ ವಿಚಾರವಾಗಿ ಶನಿವಾರ ಎರಡು ಕೋಮಿನ ಯುವಕರ ನಡುವೆ ಘರ್ಷಣೆ ನಡೆದಿತ್ತು. ಮರುದಿನ ಸಂಜೆ ಸಿಂಧನೂರಿನ ಮೆಹಬೂಬಿ ಕಾಲೊನಿಯ ಯುವಕರ ಗುಂಪು ಸುಮಾರು 50-60 ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಬಂಗಾಲಿ ಕ್ಯಾಂಪ್-2ರ ದುರ್ಗಾ ದೇವಸ್ಥಾನ ಬಳಿ ಮತ್ತೆ ತೆರಳಿ ಸಿಕ್ಕ ಸಿಕ್ಕ ಬಂಗಾಲಿಗರ ಮೇಲೆ ಹಲ್ಲೆ ಮಾಡಿ, ಮಹಿಳೆಯರಿಗೂ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆæ. ಅಲ್ಲದೆ, ದೇವಸ್ಥಾನಕ್ಕೆ ಹೋಗಿ ಘೋಷಣೆ ಕೂಗಿದ್ದಾರೆಂದೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಕೋಮುಗಲಭೆ: ಏಳು ಮಂದಿಗೆ ಗಾಯ
ಈ ವಿಚಾರ ತಿಳಿದ ಕ್ಯಾಂಪ್‌ನ ಯುವಕರು ಅವರನ್ನು ದೇವಸ್ಥಾನದಿಂದ ಹೊರಬರುವಂತೆ ಮನವಿ ಮಾಡಿಕೊಂಡಾಗ ಆ ಗುಂಪು ಮತ್ತೆ ಹಲ್ಲೆಗೆ ಮುಂದಾಗಿದæ. ಆಗ ಕ್ಯಾಂಪಿನ ಎಲ್ಲಾ ಗ್ರಾಮಸ್ಥರು ಒಂದಾಗಿ ಪ್ರತಿ ಹಲ್ಲೆಗೆ ಮುಂದಾಗಿದ್ದಾರೆ. ಆಗ ಆ ಗುಂಪು ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ಮೂವರನ್ನು ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು 30ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಪ್ರತಿಭಟನಾ ಮೆರವಣಿಗೆ: ಘಟನೆ ಖಂಡಿಸಿ ಬಂಗಾಲಿ ಕ್ಯಾಂಪ್‌ನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಸೋಮವಾರ ಬೆಳಗ್ಗೆ ಸಿಂಧನೂರಿನ ಮಿನಿವಿಧಾನಸೌಧದ ಮುಂದೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು. ಆರೋಪಿಗಳನ್ನು ಬಂಧಿಸುವಂತೆ ಘೋಷಣೆಗಳನ್ನು ಕೂಗಿದರು.
ದರ್ಗಾದೊಳಗೊಂದು ದೇವಾಲಯ; ಇದು ದಕ್ಷಿಣ ಭಾರತದ ಸೌಹಾರ್ದ ಧಾರ್ಮಿಕ ಕೇಂದ್ರ