ನಿವೃತ್ತಿಗೆ ಕೇವಲ 1 ದಿನ ಬಾಕಿ ಇರುವಾಗಲೇ ಎಸಿಬಿ ಬಲೆಗೆ ಬಿದ್ದ MUDA ಅಧಿಕಾರಿ

ತನ್ನ ವೃತ್ತಿ ನಿವೃತ್ತಿಗೆ ಕೇವಲ ಒಂದು ದಿನ ಇರುವಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ  ಅಧಿಕಾರಿಯೋಬ್ಬ ಎಸಿಬಿ  ಬಲೆಗೆ ಬಿದ್ದಿದ್ದಾರೆ.

ACB trapped Muda officer  while receiving a bribe  gow

ಮೈಸೂರು (ಮೇ.27): ತನ್ನ ವೃತ್ತಿ ನಿವೃತ್ತಿಗೆ ಕೇವಲ ಒಂದು ದಿನ ಇರುವಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (Mysore Urban Development Authority - MUDA) ಅಧಿಕಾರಿಯೋಬ್ಬ ಎಸಿಬಿ (ACB) ಬಲೆಗೆ ಬಿದ್ದಿದ್ದಾರೆ. 50 ಸಾವಿರ ಲಂಚ ಸ್ವೀಕರಿಸುವ ವೇಳೆ ದಾಳಿ ಮಾಡಿದ ಅಧಿಕಾರಿಗಳಿಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮೈಸೂರು (Mysuru) ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜನಾ ಶಾಖೆ ಸದಸ್ಯ ಹಾಗೂ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಟಿಪಿಎಂ ಜಿ.ಎಸ್.ಜಯಸಿಂಹ ಹಾಗೂ ಡಾಟಾ ಎಂಟ್ರಿ ಆಪರೇಟರ್ ಬಲೆಗೆ ಬಿದ್ದ ಭ್ರಷ್ಟರಾಗಿದ್ದಾರೆ. 50 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ (Anti Corruption Bureau ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಡಾವಣೆಯೊಂದರ ಮಂಜೂರಾತಿಗಾಗಿ ಡೆವಲಪರ್ ವೇಣುಗೋಪಾಲ್ ಎಂಬುವರ ಬಳಿ 3.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ವೇಣುಗೋಪಾಲ್ ರವರು ಈ ಕುರಿತಂತೆ ಎಸಿಬಿ ಯಲ್ಲಿ ದೂರು ದಾಖಲಿಸಿದ್ದರು. ಇಂದು ತಮ್ಮ ಕಚೇರಿಯಲ್ಲಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. 

Devegowdaರ ತೃತೀಯ ರಂಗಕ್ಕೆ ಜಗದೀಶ್ ಶೆಟ್ಟರ್ ಲೇವಡಿ

ಆರಂಭದಿಂದಲೂ ಮೂಡಾದಲ್ಲಿ ಕೆಲಸ ಮಾಡುತ್ತಿದ್ದ ಜಯಕುಮಾರ್ ಮೇಲೆ ಸಾಕಷ್ಟು ಬಾರಿ ಭ್ರಷ್ಟಾಚಾರದ (corruption) ಆರೋಪ ಕೇಳಿ ಬಂದಿತ್ತು. ಹಲವು ತಿಂಗಳಿಂದ ಡೆವಲಪರ್ ವೇಣುಗೋಪಾಲಗ‌ಗೆ ಕೂಡ ಲಂಚದ ಬೇಡಿಕೆ ಇಟ್ಟಿದ್ದ ಬಗ್ಗೆ ದೂರು ನೀಡಲಾಗಿತ್ತು. ಮೈಸೂರು ಹೊರ ವಲಯದಲ್ಲಿ ನಿರ್ಮಾಣ ಆಗುತ್ತಿರುವ ಲೇ‌ಔಟ್‌ನ ಪ್ಲಾನ್ ಮಂಜೂರು ಮಾಡಲು ಲಕ್ಷ ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರಂತೆ. ಅದರಂತೆ ಇಂದು ಮೊದಲ ಕಂತಿನಲ್ಲಿ ಹಣ ಕೊಡಲು ಮಾತುಕತೆ ನಡೆದಿತ್ತು. 

ಇದೇ ಸಂಬಂಧ ಎಸಿಬಿ ದೂರು ನೀಡಿದ್ದ ವೇಣುಗೋಪಾಲ್ ಮೂಡಾ ಕಚೇರಿಗೆ ಬಂದು ಜಯಕುಮಾರ್‌ಗೆ ಹಣ ನೀಡಲು ಮುಂದಾಗಿದ್ದಾರೆ. ಆ ವೇಳೆ ಡಾಟಾ ಆಪರೇಟರ್ ಹಣ ಪಡೆದಿದ್ದು ತಕ್ಷಣ ಸ್ಥಳಕ್ಕೆ ಬಂದ ಎಸಿಬಿ ಅಧಿಕಾರಿಗಳು ಆರೋಪಗಳನ್ನು ರೆಡ್ ಹ್ಯಾಂಡ್ ಆಗಿ‌ ಹಿಡಿದಿದ್ದಾರೆ. ಎಸಿಬಿ ಎಸ್‌ಪಿ ವಿ.ಜೆ.ಸುಜೀತ್ ನೇತೃತ್ವದಲ್ಲಿ ದಾಳಿ ನಡೆದಿದೆ.

Chitradurgaದ ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

ಕಾವೇರಿಯಲ್ಲಿ ದುಬಾರಿ BMW ಕಾರು: ಮಂಡ್ಯದ ಶ್ರೀರಂಗಪಟ್ಟಣದ ಬಳಿಯ ನಿಮಿಷಾಂಭ ದೇಗುಲದ ಬಳಿ ಕಾವೇರಿ ನದಿಯಲ್ಲಿ (Kveri River) ದುಬಾರಿ ಬೆಲೆಯ ಬಿಎಂಡಬ್ಲ್ಯೂ (BMW) ಕಾರು ಪತ್ತೆಯಾಗಿದೆ. ಕಾರು ನದಿಯಲ್ಲಿರುವ ಬಗ್ಗೆ ಸ್ಥಳೀಯರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರನ್ನು ನದಿಯಿಂದ ಹೊರ ತೆಗೆಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಚ್ಚರಿ ವಿಚಾರವೊಂದು ತಿಳಿದುಬಂದಿದೆ. ತಾಯಿ ಸಾವಿನ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಯೊಬ್ಬರು ಶ್ರೀರಂಗಪಟ್ಟಣಕ್ಕೆ ಬಂದು ನದಿಯಲ್ಲಿ ಕಾರು ಮುಳುಗಿಸಿ  ಹಿಂತಿರುಗಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನ ರೂಪೇಶ್ ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿ.

ಕಾರು ಪತ್ತೆಯಾದ ಬಳಿಕ ಮಾಲೀಕನನ್ನು ಪೊಲೀಸರು ಪಟ್ಟಣ ಠಾಣೆಗೆ ಕರೆಸಿದ್ದರು. ಈ ವೇಳೆ ಮನಬಂದಂತೆ  ರೂಪೇಶ್ ಹೇಳಿಕೆ ನೀಡುತ್ತಿದ್ದರು. ರೂಪೇಶ್ ಮಾನಸಿಕ ಖಿನ್ನತೆಗೆ ಒಳಗಾಗಿರೋ ಬಗ್ಗೆ ಪೊಲೀಸರ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. 

 

Latest Videos
Follow Us:
Download App:
  • android
  • ios