ಮುಂಡರಗಿ(ಆ.15): ಕಳೆದ ಮಂಗಳವಾಗ 10 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದ ಪಿಡಿಒ ಪ್ರಕರಣ ಮಾಸುವ ಮುನ್ನವೇ ಮುಂಡರಗಿ ಪಟ್ಟಣದಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ 41 ಸಾವಿರ ರು. ಲಂಚ ಸ್ವೀಕರಿಸುವಾಗ ಮುರುಡಿ ಗ್ರಾಪಂ ಪಿಡಿಒ ಹಾಗೂ ಗ್ರಾಪಂ ಲೆಕ್ಕ ಸಹಾಯಕ ಎಸಿಬಿ ಬಲೆಗೆ ಬಿದ್ದಿರುವ ಮತ್ತೊಂದು ಘಟನೆ ಸಂಭವಿಸಿದೆ.

ತಾಲೂಕಿನ ಮುರುಡಿ ಗ್ರಾಮ ಪಂಚಾಯ್ತಿ ಹದ್ದಿನಲ್ಲಿ ಬರುವ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ನಾಗರಾಜ ಹೊಸಮನಿ ಅವರು ತಮ್ಮ ತಂದೆ ಬಾಲಪ್ಪ ಹೊಸಮನಿ ಎಂಬುವವರ ಹೆಸರಿನಲ್ಲಿ ಎನ್‌ಎ ಆದ 2.20 ಎಕರೆ ಜಮೀನಿನಲ್ಲಿ 43 ನಿವೇಶನಗಳನ್ನು ಮಾಡಿದ್ದರು. ಅದರಲ್ಲಿ 2 ನಿವೇಶನಗಳನ್ನು ನಾಗರಿಕ ಸೌಲಭ್ಯಕ್ಕೆ ಬಿಟ್ಟು ಇನ್ನುಳಿದ 41 ನಿವೇಶನಗಳನ್ನು ಗ್ರಾಪಂನಲಲಿ ಅಧಿಕೃತವಾಗಿ ದಾಖಲಿಸಿಕೊಂಡು ಕಂಪ್ಯೂಟರ್‌ ಉತಾರ ನೀಡಬೇಕೆಂದು ಮುರುಡಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. 41 ನಿವೇಶನಗಳನ್ನು ಗ್ರಾಪಂನಲ್ಲಿ ದಾಖಲಿಸಿಕೊಂಡು ಉತಾರ ನೀಡುವುದಕ್ಕೆ ಪಿಡಿಒ ಸಿದ್ದಪ್ಪ ಡಂಬಳ ಹಾಗೂ ಲೆಕ್ಕ ಸಹಾಯಕ ಪ್ರದೀಪ ಕದಂ ಒಂದು ಉತಾರಕ್ಕೆ ಒಂದು ಸಾವಿರ ರು.ಗಳಂತೆ 41 ಉತಾರಕ್ಕೆ 41 ಸಾವಿರ ರು.ಗಳನ್ನು ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.

ಹೊಸ ಕೈಗಾರಿಕಾ ನೀತಿ, ಕೈಗಾರಿಕೋದ್ಯಮಿಗಳಿಗೆ ಸಹಕಾರಿ: ಸಚಿವ ಜಗದೀಶ ಶೆಟ್ಟರ್‌

ಶುಕ್ರವಾರ ಬೆಳಗ್ಗೆ ಮುಂಡರಗಿ ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗ್ರಾಪಂ ಲೆಕ್ಕ ಸಹಾಯಕ ಪ್ರದೀಪ ಕದಂ ಮನೆಯಲ್ಲಿಯೇ 41 ಸಾವಿರ ರು. ಲಂಚ ಸ್ವೀಕರಿಸುವಾಗ ಎಸಿಬಿ ಡಿವೈಎಸ್‌ಪಿ ವಾಸುದೇವರಾವ್‌ ನೇತತ್ವದ ತಂಡದ ಪಿಡಿಒ ಸಿದ್ದಪ್ಪ ಡಂಬಳ ಹಾಗೂ ಪ್ರದೀಪ ಕದಂ ಈರ್ವರನ್ನೂ ಖುದ್ದಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಸಂದರ್ಭದಲ್ಲಿ ಎಸಿಬಿ ಸಿಪಿಐ ವೈ.ಎಸ್‌. ಧರಣಾನಾಯ್ಕ, ವಿಶ್ವನಾಥ ಎಚ್‌, ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ಆರ್‌.ಎಚ್‌. ಹೆಬಸೂರ, ಎಂ.ಎನ್‌. ಕರಿಗಾರ, ಎಸ್‌.ಎನ್‌. ತಾಯಣ್ಣವರ, ಈರಣ್ಣ ಜಾಲಿಹಾಳ, ವೀರೇಶ ಜೋಳದ, ತಾರಪ್ಪ ಜೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.