ಮಂಗಳೂರು(ಡಿ.04): ಭವಿಷ್‌ ಆರ್‌ಕೆ ಕ್ರಿಯೇಷನ್‌ ಲಾಂಛನದಡಿ ನಿರ್ಮಾಣಗೊಂಡಿರುವ ತುಳು ಚಿತ್ರ ‘ಆಟಿಡೊಂಜಿ ದಿನ’ ಡಿ.6ರಂದು ತೆರೆ ಕಾಣಲಿದೆ ಎಂದು ನಿರ್ಮಾಪಕ ಮತ್ತು ಸಹ ನಿರ್ದೇಶಕ ಆಕಾಶ್‌ ಹಾಸನ ತಿಳಿಸಿದ್ದಾರೆ.

ಹ್ಯಾರಿಸ್‌ ಕೊಣಾಜೆಕಲ್‌ ನಿರ್ದೇಶನದಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, ಅವರ ನಿಧನದ ಬಳಿಕ ಚಿತ್ರವನ್ನು ಎ.ಎಸ್‌. ಪ್ರಶಾಂತ್‌ ನಿರ್ದೇಸಿಸಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ತುಳು ನಾಡಿನ ವಿಶೇಷತೆಗಳನ್ನು ಒಳಗೊಂಡಿರುವ ಚಿತ್ರ ಇದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

ಡಿಸೆಂಬರ್‌ 3ನೇ ವಾರ ಮಂಗಳೂರಲ್ಲಿ BSNL 4ಜಿ..!

ಪೃಥ್ವಿ ಅಂಬರ್‌, ನಿರೀಕ್ಷಾ ಶೆಟ್ಟಿ, ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ದೀಪಕ್‌ ರೈ ಪಾಣಾಜೆ, ವಾಸು ಮಲ್ಪೆ, ಸುರೇಂದ್ರಕುಮಾರ್‌ ಹೆಗ್ಡೆ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಜೇಶ್‌ ಭಟ್‌ ಮೂಡುಬಿದಿರೆ ಸಂಗೀತ, ಎಸ್‌.ಪಿ.ಚಂದ್ರಕಾಂತ್‌ ಹಿನ್ನೆಲೆ ಸಂಗೀತ, ನರೇನ್‌ ಜಿ. ಛಾಯಾಗ್ರಹಣ ಮತ್ತು ಶ್ರೀನಿವಾಸ ಬಾಬು- ಮವಿನ್‌ ಪಿಂಟೊ ಸಂಕಲನ ಚಿತ್ರಕ್ಕಿದೆ ಎಂದು ಪ್ರಶಾಂತ್‌ ವಿವರಿಸಿದ್ದಾರೆ.

ನಿರ್ದೇಶಕ ಎ.ಎಸ್‌.ಪ್ರಶಾಂತ್‌, ಎಸ್‌.ಪಿ.ಚಂದ್ರಕಾಂತ್‌, ರಾಜೇಶ್‌ ಭಟ್‌ ಮೂಡುಬಿದಿರೆ, ನಾಯಕ ನಟ ಪೃಥ್ವಿ ಅಂಬರ್‌ ಇದ್ದರು.

ಸಂಸತ್ತಲ್ಲಿ ತುಳುಭಾಷೆ ಪರ ಧ್ವನಿಯೆತ್ತಿದ ಕೇರಳ ಸಂಸದ! ಕರಾವಳಿ ಎಂಪಿಗಳಿಗೆ ನೆಟ್ಟಿಗರ ಛೀಮಾರಿ!