Aadhaar Card: 6 ವರ್ಷದ ಬಳಿಕ ಮಗನನ್ನು ತಾಯಿ ಮಡಿಲು ಸೇರಿಸಿದ ಆಧಾರ್‌ ಕಾರ್ಡ್‌..!

*  ರೈತ ಸಂತೆಯಲ್ಲಿ ಕಳೆದುಹೋಗಿದ್ದ ಮೂಕ ಮಗ
*  ನಾಗ್ಪುರ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ
*  ಆಧಾರ್‌ ಕಾರ್ಡ್‌ ಮಾಡಿಸಲು ಹೋದಾಗ ಬೆರಳಚ್ಚು ನೀಡಿದ ಸುಳಿವು
 

Aadhaar Card Help to Reunite Mother and Son in Bengaluru grg

ಬೆಂಗಳೂರು(ಮಾ.12):  ಕಣ್ಮರೆಯಾಗಿದ್ದ ಮಾತು ಬಾರದ ಮೂಕ ಮಗನನ್ನು ಆರು ವರ್ಷಗಳ ಬಳಿಕ ‘ಆಧಾರ್‌ ಕಾರ್ಡ್‌’(Aadhaar Card) ತಾಯಿ ಜತೆ ಬೆಸುಗೆ ಹಾಕಿರುವ ಮನ ಮಿಡಿಯುವ ಘಟನೆ ನಡೆದಿದೆ. ಯಲಹಂಕ ಸಮೀಪದ ಸಿಂಗನಾಯಕನಹಳ್ಳಿಯ ತರಕಾರಿ ವ್ಯಾಪಾರಿ ಪಾರ್ವತಮ್ಮ ರೈತ ಸಂತೆಯಲ್ಲಿ ತರಕಾರಿ ಮಾರಾಟದ ವೇಳೆ ಮಗ ಆಕೆಯ ಪುತ್ರ ಭರತ್‌ನನ್ನು 2016ರಲ್ಲಿ ಕಳೆದುಕೊಂಡಿದ್ದರು.

ಈ ಬಗ್ಗೆ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಭರತ್‌ ಅಪಹರಣವಾಗಿದ್ದಾನೆ(Kidnap) ಎಂದು ಪ್ರಕರಣ ದಾಖಲಾಯಿತು. ತನಿಖೆ ನಡೆಸಿದ ಪೊಲೀಸರಿಗೂ(Police) ಭರತ್‌ ಸಿಗಲಿಲ್ಲ. ಇತ್ತ ಕಾಣೆಯಾದ(Missing) ಪುತ್ರನಿಗೆ ಹಂಬಲಿಸಿ ಕಂಡ ಕಂಡ ದೇವರಿಗೆಲ್ಲ ತಾಯಿ ಹರಕೆ ಹೊತ್ತರು ಏನೂ ಪ್ರಯೋಜನವಾಗಿಲ್ಲ. ಕೊನೆಗೆ ಪೊಲೀಸರ ತನಿಖೆಯೂ(Investigation) ಸ್ಥಗಿತವಾಯಿತು.

One Nation One Registration: ನಿಮ್ಮ ಭೂಮಿಗೂ ಇನ್ಮುಂದೆ ಸಿಗಲಿದೆ Aadhaar Card!

ಇನ್ನು ಯಲಹಂಕದಿಂದ ತಪ್ಪಿಸಿಕೊಂಡ ಭರತ್‌, ಹತ್ತು ತಿಂಗಳ ಬಳಿಕ ನಾಗ್ಪುರ ರೈಲ್ವೆ ನಿಲ್ದಾಣ ತಲುಪಿದ್ದಾನೆ. ದಿಕ್ಕು ಕಾಣದೆ ಕಂಗೆಟ್ಟು ಓಡಾಡುತ್ತಿದ್ದ ಭರತ್‌ನನ್ನು ರೈಲ್ವೆ ಭದ್ರತಾ ಪಡೆ(Railway Security Force) ಅಧಿಕಾರಿಗಳು, ನಾಗ್ಪುರ ಸರ್ಕಾರಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು. 6 ವರ್ಷದಿಂದ ಆಶ್ರಯ ಪಡೆದಿದ್ದ ಭರತ್‌ಗೆ ಆಧಾರ್‌ಕಾರ್ಡ್‌ ಮಾಡಿಸಲು ಪುರ್ನವಸತಿ ಕೇಂದ್ರದ ಅಧಿಕಾರಿಗಳು ನಿರ್ಧರಿಸಿದ್ದರು. ಜನವರಿಯಲ್ಲಿ ಆಧಾರ್‌ ಸೇವಾ ಕೇಂದ್ರಕ್ಕೆ ಭರತ್‌ನನ್ನು ಕರೆದೊಯ್ದಿದ್ದರು.

ಬೆರಳಮುದ್ರೆ ಪಡೆಯಲಾಗಿತ್ತು. ಆದರೆ ಭರತ್‌ನ ಹೊಸ ಆಧಾರ್‌ ಕಾರ್ಡ್‌ ತಿರಸ್ಕೃತವಾಗಿದೆ. ಬೆಂಗಳೂರಿನಲ್ಲಿ(Bengaluru) ಬಿ.ಭರತ್‌ ಕುಮಾರ್‌ ಹೆಸರಿನಲ್ಲಿ ಆತನ ಕಾರ್ಡ್‌ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಮಾಹಿತಿ ತಿಳಿದ ಕೂಡಲೇ ಮಹೇಶ್‌ ಅವರು, ಭರತ್‌ ಪೋಷಕರ ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಮುಂಬೈನಲ್ಲಿದ್ದ(Mumbai) ಆಧಾರ್‌ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿ ಭರತ್‌ನ ಬೆರಳಚ್ಚು ಹಾಗೂ ಬೆಂಗಳೂರಿನಲ್ಲಿ ಪತ್ತೆಯಾದ ಆಧಾರ್‌ ಕಾರ್ಡ್‌ನ ಬಿ.ಭರತ್‌ ಕುಮಾರ್‌ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಸಿದಾಗ ಎರಡುಕ್ಕೂ ಸಾಮ್ಯತೆ ಬಂದಿದೆ. ಅಲ್ಲದೆ ಆಧಾರ್‌ ಕಾರ್ಡ್‌ನಲ್ಲಿ ಭರತ್‌ನ ತಾಯಿ ಪಾರ್ವತಮ್ಮ ಅವರ ಮೊಬೈಲ್‌ ಸಂಖ್ಯೆಯೂ ಸಿಕ್ಕಿದೆ.

Official Documents : ವ್ಯಕ್ತಿಯೊಬ್ಬನ ಸಾವಿನ ಬಳಿಕ ಆಧಾರ್, ಪಾನ್ ಕಾರ್ಡ್ ಏನಾಗುತ್ತೆ ಗೊತ್ತಾ?

ಕೊನೆಗೆ ಯಲಹಂಕ ಪೊಲೀಸರನ್ನು ಸಂಪರ್ಕಸಿದ ನಾಗ್ಪುರ ಪುನರ್ವಸತಿ ಕೇಂದ್ರ ಅಧಿಕಾರಿಗಳು, ಭರತ್‌ ಪೋಷಕರ(Parents) ಹುಡುಕಾಟಕ್ಕೆ ನೆರವು ಕೋರಿದ್ದಾರೆ. ಈ ಮನವಿಗೆ ಸ್ಪಂದಿಸಿದ ಇನ್‌ಸ್ಪೆಕ್ಟರ್‌ ಕೆ.ಪಿ.ಸತ್ಯನಾರಾಯಣ್‌ ಅವರು, ಭರತ್‌ ತಾಯಿಯನ್ನು ಪತ್ತೆ ಹಚ್ಚಿ ಆಕೆಯನ್ನು ಪೊಲೀಸರ ಜೊತೆ ನಾಗ್ಪುರಕ್ಕೆ ಕಳುಹಿಸಿದ್ದಾರೆ. ಮಾ.7ರಂದು ಮಗ ತಾಯಿ ಮಡಿಲು ಸೇರಿದ್ದಾನೆ.

ಗಂಡನ ಕಾರಿಗೆ ಜಿಪಿಎಸ್‌... ಪತ್ನಿ ಆಧಾರ್ ಕಾರ್ಡ್‌ ಕೊಟ್ಟು ಗೆಳತಿಯೊಂದಿಗೆ ಹೋಟೆಲ್ ಸೇರಿದ್ದ ಉದ್ಯಮಿ ಎಸ್ಕೇಪ್!

ಪುಣೆ: ಈತ ಬಹುದೊಡ್ಡ ಕಿರಾತಕ. ಮನೆಯಲ್ಲಿ ಪತ್ನಿ (Wife) ಇದ್ದರೂ ಪ್ರಿಯತಮೆ (Girl Friend)  ಜತೆ ಹೋಟೆಲ್ ಸೇರಿಕೊಂಡಿದ್ದ. ಮಾಡಿದ್ದ ಒಂದು ಸಣ್ಣ ಎಡವಟ್ಟಿನಿಂದ ಈಗ ಸಿಕ್ಕಿಹಾಕಿಕೊಂಡಿದ್ದಾನೆ. ಹೋಟೆಲ್‌ ನಲ್ಲಿ ತಪಾಸಣೆ ವೇಳೆ ಪತ್ನಿಯ ಆಧಾರ್ ಕಾರ್ಡ್ ಬಳಸಿದ ಆರೋಪದ ಮೇಲೆ 41 ವರ್ಷದ ವ್ಯಕ್ತಿ ಮತ್ತು ಆತನ ಪ್ರಿಯತಮೆಯ ವಿರುದ್ಧ ಕೇಸ್ ದಾಖಲಾಗಿದೆ.

ವ್ಯಕ್ತಿ ಹಾಗೂ ಆತನ ಗರ್ಲ್ ಫ್ರೆಂಡ್ ಇಬ್ಬರ ವಿರುದ್ಧ ಹಿಂಜೆವಾಡಿ ಪೊಲೀಸ್ ಠಾಣೆಯಲ್ಲಿ (Police) ಪ್ರಕರಣ ದಾಖಲಾಗಿದೆ. ಗುಜರಾತ್ ಮೂಲದ ಉದ್ಯಮಿ ಪ್ರಿಯತಮೆಯೊಂದಿಗೆ ಹೋಟೆಲ್ ಸೇರಿದ್ದ. ಉದ್ಯಮಿ  ಪತ್ನಿ ಕಂಪನಿಯಲ್ಲಿ ನಿರ್ದೇಶಕರಾಗಿದ್ದಾರೆ. ಪತಿ ತನಗೆ ಸುಳ್ಳು ಹೇಳಿ ಹೊರಗೆ ಹೋಗುತ್ತಿದ್ದರಿಂದ ಅನುಮಾನಗೊಂಡ ಮಹಿಳೆ ತನ್ನ ಗಂಡನ ಕಾರಿಗೆ ಜಿಪಿಎಸ್ (GPS) ಅಳವಡಿಕೆ ಮಾಡಿದ್ದರು. ಗಂಡ ಮೋಸ ಮಾಡುತ್ತಿರುವುದು ಪಕ್ಕಾ ಆದಂತೆ ಪೊಲೀಸರಿಗೆ ದೂರು ನೀಡಿದ್ದಳು.
 

Latest Videos
Follow Us:
Download App:
  • android
  • ios