One Nation One Registration: ನಿಮ್ಮ ಭೂಮಿಗೂ ಇನ್ಮುಂದೆ ಸಿಗಲಿದೆ Aadhaar Card!

ಭೂಮಿ ವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಭೂಮಿಯ ಬಗ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಜೊತೆಗೆ ಖರೀದಿ-ಮಾರಾಟದಲ್ಲಿ ಮೋಸ ನಡೆದ ಘಟನೆಗಳಿವೆ. ಈ ಎಲ್ಲ ಸಮಸ್ಯೆಗೆ ಇನ್ಮುಂದೆ ಮುಕ್ತಿ ಸಿಗಲಿದೆ.
 

One Nation One Registration Now The Land Will Also Have Aadhaar Number

Business Desk: ದೇಶದ ನಾಗರಿಕರಿಗೆ ಆಧಾರ್ ಕಾರ್ಡ್(Aadhaar Card )ಅನಿವಾರ್ಯ. ಸರ್ಕಾರ (Government) ಸೇರಿದಂತೆ ಖಾಸಗಿ ಕೆಲಸಕ್ಕೆ ಆಧಾರ್ ಕಾರ್ಡ್ ಬಳಸಲಾಗುತ್ತದೆ. ನಾಗರಿಕರಿಗಿ ಇರುವಂತೆ ಇನ್ಮುಂದೆ ನಿಮ್ಮ ಜಮೀನಿ(Land)ಗೂ ಆಧಾರ್ ಸಂಖ್ಯೆ ಸಿಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಒಂದು ರಾಷ್ಟ್ರ, ಒಂದು ನೋಂದಣಿ ಕಾರ್ಯಕ್ರಮದ (One Nation, One Registration Programme) ಅಡಿಯಲ್ಲಿ, ಕೇಂದ್ರ ಸರ್ಕಾರವು ಭೂಮಿಗೆ ವಿಶಿಷ್ಟ ನೋಂದಾಯಿತ ಸಂಖ್ಯೆ(Unique Registered Number For Lands) ಯನ್ನು ನೀಡಲಿದೆ. ಇಂದು ಭೂಮಿಗೆ ವಿಶಿಷ್ಟ ನೋಂದಾಯಿತ ಸಂಖ್ಯೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೆವೆ.

ಸಂಸತ್ತಿನಲ್ಲಿ ಮಂಡನೆಯಾದ ಕೇಂದ್ರ ಬಜೆಟ್ 2022 ರಲ್ಲಿ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್  ದೇಶದ ಭೂಮಿಯ ಡಿಜಿಟಲ್ ದಾಖಲೆಯನ್ನು ಸಿದ್ಧಪಡಿಸಲಾಗುವುದು ಎಂದಿದ್ದಾರೆ. ಐಪಿ ಆಧಾರಿತ ತಂತ್ರಜ್ಞಾನದ ಸಹಾಯದಿಂದ ಇದನ್ನು ಮಾಡಲಾಗುವುದು. ಮಾರ್ಚ್ 2023 ರೊಳಗೆ ದೇಶಾದ್ಯಂತ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭೂ ದಾಖಲೆಗಳ ಆಧಾರದ ಮೇಲೆ ಡಿಜಿಟಲ್ ದಾಖಲೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಡಿಜಿಟಲ್ ಭೂ ದಾಖಲೆಗಳಿಂದ ಏನು ಪ್ರಯೋಜನ ? : ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವುದರಿಂದ ಅನೇಕ ಪ್ರಯೋಜನಗಳಿವೆ. 3ಸಿ ಸೂತ್ರದ ಪ್ರಕಾರ ಭೂಮಿ ಹಂಚಿಕೆ ಮಾಡಲಾಗುತ್ತಿದ್ದು, ಎಲ್ಲ ಜನರಿಗೆ ಅನುಕೂಲವಾಗಲಿದೆ. ಈ ಕಾರ್ಯಕ್ರಮದ ಮೂಲಕ ಎಲ್ಲಾ ದಾಖಲೆಗಳನ್ನು ಕೇಂದ್ರೀಕೃತಗೊಳಿಸಲಾಗುವುದು.

ಇದನ್ನೂ ಓದಿFACEBOOK: ಒಂದೇ ದಿನ ಫೇಸ್‌ಬುಕ್‌ಗೆ 16 ಲಕ್ಷ ಕೋಟಿ ನಷ್ಟ

ಜಮೀನು ಖರೀದಿ ಮತ್ತು ಮಾರಾಟ ಸುಲಭ : ಭೂಮಿಯ ಆಧಾರ್ ಕಾರ್ಡ್ (ULPIN) ಸಂಖ್ಯೆಯನ್ನು ಪಡೆದ ನಂತರ, ಭೂಮಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ತುಂಬಾ ಸುಲಭವಾಗುತ್ತದೆ. ಈ ಸಂಖ್ಯೆಯ ಮೂಲಕ ದೇಶದ ಎಲ್ಲೆಲ್ಲಿಯೂ ಭೂಮಿ ಖರೀದಿ ಅಥವಾ ಮಾರಾಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.ನಕಲಿ ದಾಖಲೆ ಸೃಷ್ಟಿ ಮಾಡಿ ಜಮೀನಿನ ಮಾರಾಟವನ್ನು ಏಕಕಾಲದಲ್ಲಿ ಅನೇಕ ಜನರಿಗೆ ಮಾಡಲು ಸಾಧ್ಯವಾಗುವುದಿಲ್ಲ. 

ಭೂಮಿ ವಿತರಣೆಯ ನಂತರ ಆಧಾರ್ ಸಂಖ್ಯೆ ಬದಲಾವಣೆ : ಭೂಮಿಯನ್ನು ವಿಭಜಿಸಿದರೆ, ಅದರ ಆಧಾರ್ ಸಂಖ್ಯೆ ವಿಭಿನ್ನವಾಗಿರುತ್ತದೆ. ಭೂಮಿಯ ಡಿಜಿಟಲ್ ದಾಖಲೆ ತಯಾರಾದರೆ  ಜಮೀನಿನ ದಾಖಲೆಯನ್ನು ನೋಡುವುದು ಸುಲಭವಾಗುತ್ತದೆ.

ಡ್ರೋನ್ ಮೂಲಕ ನಡೆಯಲಿದೆ ಜಮೀನಿನ ಅಳತೆ : ಒನ್ ನೇಷನ್ ಒನ್ ರಿಜಿಸ್ಟ್ರೇಷನ್ ಕಾರ್ಯಕ್ರಮದ ಮೂಲಕ ಡ್ರೋನ್‌ಗಳ ಸಹಾಯದಿಂದ ಭೂಮಿಯನ್ನು ಅಳೆಯಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಡ್ರೋನ್‌ ಮೂಲಕ ಭೂಮಿ ಅಳೆಯುವ ಕಾರಣ ಯಾವುದೇ ತಪ್ಪು ಆಗುವ ಸಾಧ್ಯತೆ ಇರುವುದಿಲ್ಲ. ಇದರ ನಂತರ, ಈ ಮಾಪನವನ್ನು ಸರ್ಕಾರಿ ಡಿಜಿಟಲ್ ಪೋರ್ಟಲ್‌ನಲ್ಲಿ ಒದಗಿಸಲಾಗುತ್ತದೆ.

ಇದನ್ನೂ ಓದಿ: Budget 2022: ಭಾರತದಲ್ಲಿ ಖಾಸಗಿ, ವಿದೇಶಿ ಹೂಡಿಕೆ ಹೆಚ್ಚಳಕ್ಕೆ ಪೂರಕ ವಾತಾವರಣ ಸೃಷ್ಟಿಸಿದ ಬಜೆಟ್!

ಒಂದೇ ಕ್ಲಿಕ್‌ನಲ್ಲಿ ಸಿಗಲಿದೆ ಭೂ ದಾಖಲೆ : ಡಿಜಿಟಲ್ ದಾಖಲೆ ಸಿದ್ಧವಾದ ನಂತರ ಭೂ ದಾಖಲೆಗಳನ್ನು ನೋಡಲು ಭೂ ಮತ್ತು ಕಂದಾಯ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋದರೆ, ಯಾವುದೇ ವ್ಯಕ್ತಿ ತನ್ನ ಜಮೀನಿನ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಸ್ತುತ, ದೇಶದಲ್ಲಿ 140 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಕೃಷಿ ಮಾಡಲಾಗುತ್ತಿದೆ. 125 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ದುರಸ್ತಿ ಮಾಡಲಾಗುತ್ತಿದೆ. 

2023ರ ವೇಳೆಗೆ ಡಿಜಿಟಲ್ ಆಗಲಿದೆ ಭೂ ದಾಖಲೆ : 2023ರ ವೇಳೆಗೆ ದೇಶದಾದ್ಯಂತ ಇರುವ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಮಾರ್ಚ್ 2023 ರೊಳಗೆ ದೇಶದಾದ್ಯಂತ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.  

Latest Videos
Follow Us:
Download App:
  • android
  • ios