ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ಕಟಾವಿಗೆ ಬಂದ ಕಬ್ಬಿನ ಗದ್ದೆ ಬೆಂಕಿಗಾಹುತಿ! 

ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದ ಜಮೀನಿನೊಂದರಲ್ಲಿ ನಡೆದಿದೆ. ದೊಡ್ಡನಗೌಡ ಪಾಟೀಲ್ ಎಂಬುವರಿಗೆ ಸೇರಿದ್ದ ಕಬ್ಬಿನ ಗದ್ದೆ. ಸುಮಾರು 8 ಎಕರೆಯಷ್ಟು ಜಮೀನಿನಲ್ಲಿ ತೆಂಗು, ಮಾವು, ಕಬ್ಬು ಬೆಳೆಯಲಾಗಿತ್ತು

A sugarcane field that had been harvested was destroyed by fire rav

ಯಾದಗಿರಿ (ಜ.22) ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದ ಜಮೀನಿನೊಂದರಲ್ಲಿ ನಡೆದಿದೆ.

ದೊಡ್ಡನಗೌಡ ಪಾಟೀಲ್ ಎಂಬುವರಿಗೆ ಸೇರಿದ್ದ ಕಬ್ಬಿನ ಗದ್ದೆ. ಸುಮಾರು 8 ಎಕರೆಯಷ್ಟು ಜಮೀನಿನಲ್ಲಿ ತೆಂಗು, ಮಾವು, ಕಬ್ಬು ಬೆಳೆಯಲಾಗಿತ್ತು. ರೈತ ದೊಡ್ಡನಗೌಡ ಪಾಟೀಲ್. ಇನ್ನೇನು ವಾರದಲ್ಲಿ  ಕಟಾವು ಮಾಡಬೇಕೆನ್ನುವಷ್ಟರಲ್ಲಿ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದೆ. ಕಬ್ಬು ನಾಶದಿಂದ ಸುಮಾರು 20 ಲಕ್ಷ ರೂ. ಹಾನಿಯಾಗಿದೆ.

ಚಿತ್ರದುರ್ಗ: ಹೋಟೆಲ್‌ಗೆ ಬೆಂಕಿ; ಘಟನೆ ನೋಡಲು ಹೋದ ಮಹಿಳೆ ಸಿಲಿಂಡರ್ ಸ್ಫೋಟಕ್ಕೆ ಬಲಿ!

ಜೆಸ್ಕಾ ಅಧಿಕಾರಿಗಳ ನಿರ್ಲಕ್ಷ್ಯ:

ದೊಡ್ಡನಗೌಡ ಪಾಟೀಲರ ಜಮೀನಿನಲ್ಲಿ ಹಾದುಹೋಗಿರುವ ವಿದ್ಯುತ್ ವೈರ್‌ಗಳು. ಬೇರೆ ಕಡೆ ಶಿಫ್ಟ್ ಮಾಡುವಂತೆ ಹಲವು ಬಾರಿ ಜೆಸ್ಕಾಂ ಗೆ ಮನವಿ ಮಾಡಿದ್ದರು. ಆದರೆ ನಿರ್ಲಕ್ಷ್ಯ ವಹಿಸಿದ್ದ ಜೆಸ್ಕಾಂ ಅಧಿಕಾರಿಗಳು ವೈರ್ ಗಳನ್ನು ಬೇರೆ ಕಡೆ ಶಿಫ್ಟ್ ಮಾಡಿರಲಿಲ್ಲ. ಇದೀಗ ವೈರ್‌ಗಳ ಶಾರ್ಟ್‌ಸೆರ್ಕ್ಯೂಟ್‌ನಿಂದಲೇ ಬೆಂಕಿಹೊತ್ತಿಕೊಂಡು ಕಬ್ಬು ಬೆಳೆ ನಾಶವಾಗಿ ಎಂದು ರೈತ ದೊಡ್ಡನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆ ಅಯೋಧ್ಯೆ ಬಾಲರಾಮ ಪ್ರತಿಷ್ಠಾಪನೆ ಹಿನ್ನಲೆ; ಬೆಂಗಳೂರಿನ ಈ ಸೂಕ್ಷ್ಮ ಏರಿಯಾಗಳಲ್ಲಿ ಹೈಅಲರ್ಟ್!

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸದ್ಯ ಘಟನೆ ಸಂಬಂಧ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Latest Videos
Follow Us:
Download App:
  • android
  • ios