Asianet Suvarna News Asianet Suvarna News

ನಾಳೆ ಅಯೋಧ್ಯೆ ಬಾಲರಾಮ ಪ್ರತಿಷ್ಠಾಪನೆ ಹಿನ್ನಲೆ; ಬೆಂಗಳೂರಿನ ಈ ಸೂಕ್ಷ್ಮ ಏರಿಯಾಗಳಲ್ಲಿ ಹೈಅಲರ್ಟ್!

ನಾಳೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರು ನಗರಾದ್ಯಂತ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಖುದ್ದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ನಗರದ ಸೂಕ್ಷ್ಮ ಏರಿಯಾಗಳ ಠಾಣೆಗಳಿಗೆ ದಿಢೀರ್ ಭೇಟಿ ನೀಡಿ ಠಾಣೆಯ ರಿಜಿಸ್ಟರ್ ಬುಕ್ ಪರಿಶೀಲಿಸಿ ಸೂಕ್ತ ಬಂದೋಬಸ್ತ್ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Ayodhya RamMandi inauguration tommorw Bengaluru city police high alert rav
Author
First Published Jan 21, 2024, 10:07 PM IST

ಬೆಂಗಳೂರು (ಜ.21): ನಾಳೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರು ನಗರಾದ್ಯಂತ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಖುದ್ದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ನಗರದ ಸೂಕ್ಷ್ಮ ಏರಿಯಾಗಳ ಠಾಣೆಗಳಿಗೆ ದಿಢೀರ್ ಭೇಟಿ ನೀಡಿ ಠಾಣೆಯ ರಿಜಿಸ್ಟರ್ ಬುಕ್ ಪರಿಶೀಲಿಸಿ ಸೂಕ್ತ ಬಂದೋಬಸ್ತ್ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ನಾಳೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಡೆ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜಿರಾಗಿದ್ದಾರೆ.

ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ; ಜ.22 ರಂದು ಸರ್ಕಾರಿ ರಜೆ ಘೊಷಣೆ ಇಲ್ಲ: ಸಿಎಂ ಸ್ಪಷ್ಟನೆ

ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಸ್ಟೇಷನ್, ಭಾರತಿನಗರ ಪೊಲೀಸ್ ಸ್ಟೇಷನ್, ಶಿವಾಜಿನಗರ ಪೊಲೀಸ್ ಸ್ಟೇಷನ್, ಹೆಚ್ ಎಸ್ ಆರ್ ಲೇಔಟ್ ಠಾಣೆ, ಬಂಡೇಪಾಳ್ಯ ಠಾಣೆ, ಬೇಗೂರು ಪೊಲೀಸ್ ಠಾಣೆ ಮತ್ತು  ಬೊಮ್ಮನಹಳ್ಳಿ ಠಾಣೆಗೆ ಇಂದು ಭೇಟಿ ದಿಢೀರ್ ಭೇಟಿ ನೀಡಿದ ಪೊಲೀಸ್ ಕಮಿಷನರ್. ಈ ವೇಳೆ ನಗರದ ಕೆಲ ಏರಿಯಗಳ ಸೂಕ್ಷ್ಮತೆ ಹಾಗೂ ಬಂದೋಬಸ್ತ್ ವ್ಯವಸ್ಥೆ ಬಗ್ಗೆ ಅವಲೋಕಿಸಿ ಕಟ್ಟೆಚ್ಚರದಿಂದ ಇರುವಂತೆ ಪೊಲಿಸರಿಗೆ ಸೂಚನೆ ನೀಡಿದ್ದಾರೆ. 

Ayodhya RamMandi inauguration tommorw Bengaluru city police high alert rav

'ಅದೇನು ದುರ್ಬುದ್ಧಿ ಬಂದಿದೋ ಗೊತ್ತಿಲ್ಲ; ದುರ್ಯೋಧನ ರೀತಿ ಆಡ್ತಾರೆ : ರಜೆ ಘೋಷಿಸದ ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ

Follow Us:
Download App:
  • android
  • ios