ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್‌ ಸಂಘಟನೆ ಪದಾಧಿಕಾರಿಗಳು ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ಶಿಕ್ಷಣದಿಂದ ಹಿಂದುಳಿದ ವಿವಿಧ ಸಮುದಾಯದ ಮಕ್ಕಳಿಗೆ ರಾತ್ರಿ ಶಾಲೆ ಆರಂಭಿಸುವ ಹೊಸ ಹೆಜ್ಜೆ ಇಟ್ಟಿದ್ದಾರೆ.

ಬಾದನಹಟ್ಟಿಪಂಪನಗೌಡ

 ಕುರುಗೋಡು (ಡಿ.10) : ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್‌ ಸಂಘಟನೆ ಪದಾಧಿಕಾರಿಗಳು ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ಶಿಕ್ಷಣದಿಂದ ಹಿಂದುಳಿದ ವಿವಿಧ ಸಮುದಾಯದ ಮಕ್ಕಳಿಗೆ ರಾತ್ರಿ ಶಾಲೆ ಆರಂಭಿಸುವ ಹೊಸ ಹೆಜ್ಜೆ ಇಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಳ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುವ ಆಸಕ್ತಿ ಇದ್ದರೂ ಆರ್ಥಿಕ ಪರಿಸ್ಥಿತಿಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಸೌಲಭ್ಯವಿದ್ದರೂ ಶಿಕ್ಷಣದ ಕೊರತೆ ಕಾಡುತ್ತಿರುತ್ತದೆ. ಎಷ್ಟೇ ಹಣ ಹಾಕಿದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವುದು ಕಷ್ಟಕರ ಇತಂಹ ಸಂದರ್ಭದಲ್ಲಿ ಸಂಘಟನೆಯೊಂದು ಸಿರಿಗೇರಿ ಗ್ರಾಮದ ಭವನದಲ್ಲಿ ರಾತ್ರಿ ಶಾಲೆ ಆರಂಭಿಸಿ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಲು ಮುಂದಾಗಿದೆ. ಇಲ್ಲಿ 1ರಿಂದ 8 ನೇ ತರಗತಿಯ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ.

ದಲಿತರು ಸಿಎಂ ಯಾಕಾಗಬಾರದು: ಡಿ.ಕೆ.ಶಿವಕುಮಾರ್‌ ಪ್ರಶ್ನೆ

ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಸಿರಿಗೇರಿ, ಕರೂರು, ಸಿರುಗುಪ್ಪ ಕಡೆಗಳಲ್ಲಿ ರಾತ್ರಿ ಶಾಲೆ ಪ್ರಾರಂಭಿಸಲಾಗಿದೆ. ಇನ್ನೂ ಹಲವಾರು ಕಡೆಗಳಲ್ಲಿ ಆರಂಭಿಸುವ ಆಲೋಚನೆ ಇದೆ. ಸಿರಿಗೇರಿಯಲ್ಲಿ 70, ಕರೂರಲ್ಲಿ 60 ಸಿರುಗುಪ್ಪದಲ್ಲಿ 60 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಗೌರವಧನ ನೀಡಿ ಮೂವರು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಪ್ರಾರಂಭ ಮಾಡುವ ಮುನ್ನ ಬುದ್ಧ, ಬಸವ, ಅಂಬೇಡ್ಕರ್‌ ಅವರ ವ್ಯಾಖ್ಯಾನ ಹಾಗೂ ಸಂವಿಧಾನ ಪೀಠಿಕೆ ಓದಿಸುತ್ತಾರೆ. 1ರಿಂದ 4 ತರಗತಿಯ ಮಕ್ಕಳಿಗೆ ಶಾಲೆಯಲ್ಲಿ ಹಾಕಿ ಕೊಟ್ಟಹೋಮ್‌ ವರ್ಕ್ ಹಾಗೂ 5ರಿಂದ 8 ನೇ ತರಗತಿಯ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಜತೆಗೆ ಮೊರಾರ್ಜಿ ದೇಸಾಯಿ, ನವೋದಯ ಪ್ರವೇಶಕ್ಕೆ ಕೋಚಿಂಗ್‌, ತರಬೇತಿ ನೀಡುತ್ತಿದ್ದಾರೆ.

ದಲಿತ​ರನ್ನು ಸಿಎಂ ಮಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ: ಸಂಸದ ಸು​ರೇಶ್‌

ಬಳ್ಳಾರಿ ಜಿಲ್ಲೆಯಾದ್ಯಂತ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ರಾತ್ರಿ ಶಾಲೆ ಪ್ರಾರಂಭಿಸಿ ಶಿಕ್ಷಣ ನೀಡುವ ಕೆಲಸ ಸಂಘಟನೆ ಮಾಡುತ್ತಿದೆ. ಇದಕ್ಕೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸಹಕರಿಸಿದ್ದಾರೆ.

ಎಚ್‌.ಲಕ್ಷ್ಮಣ ಭಂಡಾರಿ, ಜಿಲ್ಲಾಧ್ಯಕ್ಷರು ದಲಿತ ವಿದ್ಯಾರ್ಥಿ ಪರಿಷತ್‌

ಆರಂಭದಲ್ಲಿ ಕಡಿಮೆ ಮಕ್ಕಳು ಬರುತ್ತಿದ್ದು, ಮಕ್ಕಳ ಸಂಖ್ಯೆ ಹೆಚ್ಚಾದರೆ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿವಿಧ ಕೊಚಿಂಗ್‌ಗಳ ಬಗ್ಗೆ ಮಾಹಿತಿ ನೀಡುವ ಆಲೋಚನೆ ಇದೆ.

ಎಚ್‌.ಉಮೇಶ್‌, ಸಂಘಟನೆಯ ಯುವ ಮುಖಂಡ